ಶನಿವಾರ ನವೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಯುವಕರ್ನಾಟಕ ವೇದಿಕೆ ಪದಗ್ರಹಣ ಮತ್ತು ಸಂಜೆ,ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಜಗಳೂರು ಸುದ್ದಿ:ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಬೆಳಿಗ್ಗೆ ಯುವಕರ್ನಾಟಕ ವೇದಿಕೆ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೋಳಿಸುವಂತೆ ಯುವ ಕರ್ನಾಟಕ ಯುವ ವೇದಿಕೆ ತಾಲೂಕು ಅಧ್ಯಕ್ಷ ಬಂಗಾರಕ್ಕನಗುಡ್ಡ ಪಿ. ಮಲ್ಲಿಕಾರ್ಜುನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ..

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯುವ ಕನ್ನಡ ವೇದಿಕೆ ವತಿಯಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು , ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬೆಳಿಗ್ಗೆ 9ಗಂಟೆಗೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆ ,11ಗಂಟೆಗೆ ಜೈಭಾರತ್ ಟ್ರಸ್ಟ್ ವತಿಯಿಂದ 2ನೇ ಅಂಬ್ಯುಲೆನ್ಸ್ ಲೋಕಾರ್ಪಣೆ, ರಕ್ತದಾನ ಶಿಬಿರ,ಧ್ವಜಾರೋಹಣ,ಸಂಜೆ 6.30ಕ್ಕೆ ಪದಗ್ರಹಣ, ರಸಮಂಜರಿ ಕಾರ್ಯಕ್ರಮ,ಜರುಗಲಿವೆ‌ ಕಾರ್ಯಕ್ರಮಕ್ಕೆ ಯುವಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಕಾರ್ಯಕ್ರಮವನ್ನ ಉದ್ಗಾಟನೆ ಮಾಡಲಿದ್ದು ಅವರ ಬಳಗದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು..

ಯುವಕರ್ನಾಟಕ ವೇದಿಕೆ ತಾಲೂಕು ಉಪಾಧ್ಯಕ್ಷ ಮರೇನಹಳ್ಳಿ ನಾಗರಾಜ್ ಮಾತನಾಡಿ,’ಕನ್ನಡ ನಾಡು ನುಡಿ ಉಳಿವಿಗಾಗಿ,ತಾಲೂಕಿನಲ್ಲಿ ಸಂಘಟನೆಯ ತಾಲೂಕು ಘಟಕ ನೂತನವಾಗಿ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್,ಶಾಸಕ ಬಿ.ದೇವೇಂದ್ರಪ್ಪ,ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್,ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್,ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಸೇರಿದಂತೆ ಗಣ್ಯರು,ಪ.ಪಂ.ಅಧ್ಯಕ್ಷರು,ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಘಟನೆ ಗೌರವ ಅಧ್ಯಕ್ಷ ಬರ್ಕತ್ ಅಲಿ,
ಸಹಕಾರ್ಯದರ್ಶಿ ಶಾರುಕ್, ಎಚ್.ಟಿ,ತಾಲೂಕು ಸಂಚಾಲಕರಾದ ಮರೇನಹಳ್ಳಿ ಬಿ.ಪಿ.ನರಸಿಂಹಮೂರ್ತಿ,ಚಿಕ್ಕಮ್ಮನಹಟ್ಟಿ ಶ್ರೀಕಾಂತ್,ಕಾರ್ಮಿಕ ಘಟಕ ಉಪಾಧ್ಯಕ್ಷ ಬಸವರಾಜ್,ಮಾಳಮ್ಮನಹಳ್ಳಿಬಾಬು,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!