₹2ಕೋಟಿ ರೂಗಳ ವೆಚ್ಚದಲ್ಲಿ ಹಳೆ ತಾಲ್ಲೂಕು ಕಛೇರಿ ರಸ್ತೆ ಸಿಸಿ ರಸ್ತೆ,ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ.ಬಿ.ದೇವೇಂದ್ರಪ್ಪ ಶಂಕುಸ್ಥಾಪನೆ ನೇರವೇರಿಸಿದರು.
ಜಗಳೂರು ಸುದ್ದಿ:
ಪಟ್ಟಣದಲ್ಲಿ ಹೆಚ್ಚು ಅಲ್ಪಸಂಖ್ಯಾತರ ವಾಸಿಸುವಂತ ಕಾಲೂನಿಯ ಸಮಗ್ರ ಅಭಿವೃದ್ದಿಗಾಗಿ ನಮ್ಮ ಸರ್ಕಾರ ವಿಶೇಷ ಯೋಜನೆಯಡಿಯಲ್ಲಿ ₹5ಕೋ ರೂ ಅನುದಾನ ಮಂಜೂರು ಮಾಡಿದ್ದು ಹಂತಹಂತವಾಗಿ ಅನುದಾನ ಬಿಡುಗಡೆಗೊಳ್ಳಲಿದೆ’.ಎಂದು ಶಾಸಕ ಬಿ.ದೇವೇಂದ್ರಪ್ಪ ಕಾಮಗಾರಿ ಶುಂಕುಸ್ಥಾಪನೆ ನೇರವೇರಿಸಿ ತಿಳಿಸಿದರು.
ಶುಕ್ರವಾರ ಪಟ್ಟಣದಲ್ಲಿ 2023-24 ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಮಗ್ರ ಅಭಿವೃದ್ದಿ ಹಾಗೂ ಮೂಲಭೂತಸೌಕರ್ಯ ಒದಗಿಸುವ ವಿಶೇಷ ಯೋಜನೆಯಡಿಯಲ್ಲಿ ₹2ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಪಟ್ಟಣದ ಹೃದಯಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ವಾಸವಿರುವ ಬಾಗದ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ . ಕಿಷ್ಕಿಂದೆ ಆಕಾರದ ರಸ್ತೆಯ ಬದಿಯಲ್ಲಿ ಸುಗಮಸಂಚಾರವಿಲ್ಲದೆ ಹರಸಾಹಸ ಪಡುವಂತಾಗಿದೆ.ಆದ್ದರಿಂದ ಸಾರ್ವಜನಿಕ ಆಸ್ಪತ್ರೆಯಿಂದ ಉಜ್ಜಿನಿ ರಸ್ತೆಯವರೆಗೆ ಸಿಸಿ ರಸ್ತೆ,ಚರಂಡಿ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹2ಕೋಟಿ ವೆಚ್ಚದ ಕಾಮಗಾರಿಗೆ ಆಧ್ಯತೆ ನೀಡಲಾಗಿದ್ದು ತಮ್ಮಗಳ ಸಹಕಾರ ಅತ್ಯಗತ್ಯ ಎಂದರು . ಹಂತಹಂತವಾಗಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ₹2ಕೋಟಿ ಗ್ರಾಮೀಣ ಪ್ರದೇಶ ₹1ಕೋಟಿ ಸೇರಿದಂತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಅಭಿವೃದ್ದಿಪಡಿಸಲಾಗುವುದು.ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರ್ಕಾರ ದಲಿತ,ಹಿಂದುಳಿದ ವರ್ಗಗಳ ಪರವಾದ ಆಡಳಿತ ನಡೆಸುತ್ತಿದೆ.ಮುಸ್ಲಿಂ ಕಾಲೂನಿ ಅಭಿವೃದ್ದಿಗೆ ನಿವಾಸಿಗಳು ಸಹಕರಿಸಬೇಕು. ಕೆಐಆರ್ ಡಿಎಲ್ ಇಲಾಖೆ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ’ ಸೂಚನೆ ನೀಡಿದರು.
‘ಹಳೇ ತಾಲೂಕು ಕಛೇರಿ ನೆಲಸಮಗೊಳಿಸಿ ಸಂಕೀರ್ಣ ಮಳಿಗೆ ನಿರ್ಮಾಣಕ್ಕೆ ₹10ಕೋಟಿ,ಪಟ್ಟಣದ ಅಭಿವೃದ್ದಿಗಾಗಿ ₹8ಕೋಟಿ,ಸೇರಿದಂತೆ ಇತರೆ ಪಟ್ಟಣ ಅಭಿವೃದ್ದಿ ಕಾಮಗಾರಿಗಳಿಗೆ ಮೊದಲ ಹಂತದಲ್ಲಿ ಸುಮಾರು ₹20ಕೋಟಿ ಅನುದಾನ ನೀಡಿರುವ ನಮ್ಮದೇ ಪಕ್ಷದ ರಾಜ್ಯದಲ್ಲಿನ ಆಡಳಿತರೂಢ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಇಲಾಖೆಯ ಸಚಿವರುಗಳಿಗೆ ‘.ಅಬಿನಂದನೆ ಸಲ್ಲಿಸಿದರು.
ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಪ.ಪಂ.ಅಧ್ಯಕ್ಷ ನವೀನ್ ಕುಮಾರ್,ಸದಸ್ಯರಾದ
ತಿಪ್ಪೇಸ್ವಾಮಿ,ಶಕೀಲ್ ಅಹಮ್ಮದ್,ಪಾಪಲಿಂಗಪ್ಪ,ರಮೇಶ್ ರೆಡ್ಡಿ,ಮಹಮ್ಮದ್ ಅಲಿ,ಮಂಜುನಾಥ್,ದೇವರಾಜ್,ನಾಮನಿರ್ದೇಶಿತ ಸದಸ್ಯರಾದ ಕುರಿಜಯ್ಯಣ್ಣ,ಶಾಂತಪ್ಪ,ತಾನಾಜಿ ಗೋಸಾಯಿ,ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾಅಧಿಕಾರಿ ಶಿವಕುಮಾರ್,ಎಇಇ ಭಾರತಿ,ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಮುಖಂಡರಾದ ಓಬಳೇಶ್,ಬಿ.ಮಹೇಶ್ವರಪ್ಪ,ಗೌರಿಪುರ ಶಿವಣ್ಣ,ಶಾಸಕ ಆಪ್ತ ಸಹಾಯಕ ಮಧುಶಂಕರ್, ಸೇರಿದಂತೆ ಇದ್ದರು.