filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ವೀರವನಿತೆ ಓಬವ್ವ ಧೈರ್ಯ,ಶೌರ್ಯದ ಪ್ರತೀಕ:ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ

ಜಗಳೂರು ಸುದ್ದಿ:’ಮಹಿಳೆಯರ ಧೈರ್ಯ ,ಶೌರ್ಯದ ಪ್ರತೀಕವಾಗಿರುವ ವೀರವನಿತೆ ಓಬವ್ವನ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿಯಬೇಕಿದೆ ‘.ಎಂದು ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮಾತನಾಡಿ,

ಸೋಮವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ,ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ವೀರವನಿತೆ ಓಬವ್ವ ಜಯಂತ್ಯೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

‘ನಾಡಿನ ರಕ್ಷಣೆಗೆಗಾಗಿ ಪಣತೊಟ್ಟು ಒನಕೆಓಬವ್ವ ಅತ್ಮಸ್ಥೈರ್ಯದೊಂದಿಗೆ ಸಮಯಪ್ರಜ್ಞೆಯಿಂದ ಎದುರಾಳಿಗಳನ್ನು ಶಮನಗೊಳಿಸುವ ಮೂಲಕ ನಮಗೆಲ್ಲಾ ಆದರ್ಶಪ್ರಿಯವಾಗಿದ್ದು ಪ್ರತಿಯೊಬ್ಬ ಮಹಿಳೆಯರು ಓಬವ್ವನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’. ಎಂದು ಹೇಳಿದರು.

ಛಲವಾದಿ ಸಮಾಜದ ಮುಖಂಡ ಸಿ.ತಿಪ್ಪೇಸ್ವಾಮಿ ಮಾತನಾಡಿ,’ವೀರವನಿತೆ ಓಬವ್ವನ ಇತಿಹಾಸವನ್ನು ಸಿನಿಮಾ ಹಾಡಿನಲ್ಲಿ ತಿರುಚಲಾಗಿದೆ.ಆತ್ಮಪ್ರೇರಣೆಯಿಂದ ಊಟಮಾಡುವಾಗ ಅಡ್ಡಿಪಡಿಸದೆ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರುಸೈನ್ಯವನ್ನು ಸದೆಬಡಿದು ಕೋಟೆ ರಕ್ಷಣೆಗೆ ಮುಂದಾದ ಕ್ಷಣ ಮೈರೋಮಾಂಚನಗೊಳಿಸುತ್ತದೆ.ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ.ಎದುರಾಳಿಗಳಿಂದ ಹತ್ಯೆಯಾಗದೆ ಯುದ್ದದ ನಂತರ ಎರಡುವರ್ಷಗಳ ಕಾಲ ಬದುಕಿರುವ ನೈಜ ಇತಿಹಾಸ ಅರಿಯಬೇಕಿದೆ’.ಎಂದು ತಿಳಿಸಿದರು.

ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ,’ಮಹಿಳೆಯರ ಸಾಹಸ,ಕಾಯಕನಿಷ್ಠೆಗೆ ಒನಕೆ ಓಬವ್ವ ಸ್ಪೂರ್ತಿಯಾಗಿದ್ದು.ಮಹಿಳೆಯರು ಧೈರ್ಯದಿಂದ ಸಮಾಜದಲ್ಲಿ ಬದುಕಬೇಕಿದೆ.ಕನ್ನಡನಾಡಿನಲ್ಲಿ ಜನಿಸಿದ ವೀರವನಿತೆಯರ ಜೀವನಚರಿತ್ರೆಗಳನ್ನು ಜ್ಞಾನಭಂಡಾರದಂತಿರುವ ಉಪನ್ಯಾಸಕರಿಂದ ಜ್ಞಾನ ಸಂಪಾದನೆ ಪಡೆಯಬೇಕು.ಇಂದು ಮಹಿಳೆ ಪಾಕಶಾಲೆಯಿಂದ ಗಗನಯಾತ್ರಿಗಳಾಗಿರುವುದು’. ಹೆಮ್ಮೆಯ ಸಂಗತಿ ಎಂದರು.

ಸಂದರ್ಭದಲ್ಲಿ ಛಲವಾದಿ ಮಹಾಸಭಾ ಸಮಾಜ ತಾಲೂಕು ಅಧ್ಯಕ್ಷ ನಿಜಲಿಂಗಪ್ಪ,ಕಾರ್ಯದರ್ಶಿ ವೀರಸ್ವಾಮಿ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಪ್ರಾಂಶುಪಾಲ ಜಗದೀಶ್ ಉಪನ್ಯಾಸಕ ಮಂಜುನಾಥ ರೆಡ್ಡಿ,ಧನ್ಯಕುಮಾರ್ ಎಚ್.ಎಂಹೊಳೆ,ಮಲೆಮಾಚಿಕೆರೆಸತೀಶ್,ಮಾದಿಹಳ್ಳಿಮಂಜಪ್ಪ,ಉಪನ್ಯಾಸಕಿ ಸ್ವಪ್ನ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!