ನಾಯಕತ್ವವೇಯಿಲ್ಲದ ಸಮುದಾಯವಾಗುತ್ತಿರುವ ಶೂನ್ಯ ಸಮಯದಲ್ಲಿ ಇನ್ ಸೈಟ್ಸ್ ಐಎಎಸ್ ನ ಜಿ. ಬಿ.‌ವಿನಯ್ ಕುಮಾರ್ ಅವರು ಅವಕಾಶ ವಂಚಿತರು ಹಾಗೂ ಶೋಷಿತರಿಗಾಗಿ “ಸ್ವಾಭಿಮಾನಿ ಬಳಗ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ” ಬೀದರನ ಔರಾದ್ ತಾಲ್ಲೂಕಿನಿಂದ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನವರೆವಿಗೂ ನೆಟ್ ವರ್ಕ್ ಮಾಡಬೇಕೆಂಬ ಸದುದ್ದೇಶದಿಂದ 1) ಶಿಕ್ಷಣ 2) ಆರ್ಥಿಕ 3) ಔದ್ಯೋಗಿಕ 4) ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗಾಗಿ (ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆಯಂತಹ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿರುವವರು ಹಾಗೂ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬೇಕೆಂಬುವವರಿಗಾಗಿ) ವಿಶೇಷವಾದ ತರಬೇತಿಗಳು, ಭಾಷಣ ಕಲೆ 5) ಮಹಿಳೆಯರ ಸಬಲೀಕರಣ, 6) ರೈತರಿಗಾಗಿ ಕೃಷಿ ವಿಜ್ಞಾನ ಕೇಂದ್ರಗಳು, 7) ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಹಾಗೂ 8) ಸಾಮೂಹಿಕ ವಿವಾಹಗಳು 9) ನಾವು ಮತ್ತು ನಮ್ಮೂರು (ನಮ್ಮೂರಿನ ಸೇವಕರು ನಾವು) 10) ಡಿಜಿಟಲ್ ಮಾಧ್ಯಮ – ಪತ್ರಿಕೋದ್ಯಮ (ಯೂಟ್ಯೂಬ್, ಫೇಸ್ ಬುಕ್, ಇನ್ಟಾಗ್ರಾಂ) ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಕರ್ತವ್ಯಗಳು, ಅವಕಾಶ ವಂಚಿತರಿಗಾಗಿ ವೇದಿಕೆಯನ್ನು “ಸ್ವಾಭಿಮಾನಿ ಬಳಗ” ನೀಡುತ್ತಿದೆ. ಪ್ರಜ್ಞಾವಂತ, ವಿದ್ಯಾವಂತ, ತರಬೇತುದಾರ, ದೂರದೃಷ್ಟಿಯುಳ್ಳ ವಿನಯ್ ಕುಮಾರ್ ರವರು ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿದ್ದಾರೆ ಸ್ವಾಭಿಮಾನಿ ಬಳಗ (ರಿ.) ನ ಉದ್ಘಾಟನೆ – ವೆಬ್ ಸೈಟ್ ಲೋಕಾರ್ಪಣೆ – ಸಾಧಕರಿಗೆ ಗೌರವ ಪುರಸ್ಕಾರ ಹಾಗೂ 1) ರಾಜ್ಯ ಸಮಿತಿ ವಿಸ್ತರಣೆ, 2) ಜಿಲ್ಲಾ ಸಮಿತಿಗಳು 3) ತಾಲ್ಲೂಕು ಸಮಿತಿಗಳು 4) ನಗರ ಸಮಿತಿಗಳ ರಚನೆಗೆ ಚಾಲನೆ ದಿನಾಂಕ 17 – 11 – 2024 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ, ದಾವಣಗೆರೆ, ಎಸ್. ಎಸ್. ಲೇಔಟ್, (ಅಥಣಿ ಕಾಲೇಜು ಹತ್ತಿರ) 10 ನೇ ಕ್ರಾಸ್ ನಂ.2415/45 ಇಲ್ಲಿ ಏರ್ಪಡಿಸಲಾಗಿದೆ ತಮ್ಮ ದೈನಂದಿನ ವೈಯಕ್ತಿಕ ಕಾರ್ಯಗಳ ಜೊತೆಯಲ್ಲಿ ನಾವು ಜನಿಸಿರುವ ದೇಶಕ್ಕೆ ಸಾಮಾಜಿಕವಾಗಿ ಸೇವೆ ಮಾಡಿ ಜೀವನ ಸಾರ್ಥಕಗೊಳಿಸಿಕೊಳ್ಳುವ ಇಚ್ಛೆಯುಳ್ಳವರಿಗೆ “ಹೃತ್ಪೂರ್ವಕವಾದ ಸ್ವಾಗತವನ್ನು ನೀಡುತ್ತಿದ್ದಾರೆ” ಬೀಜ‌ನೆಟ್ಟು, ಮೊಳಕೆಯೊಡೆದು, ಸಸಿ, ಗಿಡವಾಗಿ, ಮರವಾಗಿ ಸಮೃದ್ಧ ಫಲ‌ನೀಡುವಂತಹ ಸದೃಢ ಪ್ರಜೆಗಳನ್ನು ಅವಕಾಶ ವಂಚಿತ, ಶೋಷಿತರ ಧ್ವನಿಯಾಗಬಲ್ಲವರಿಗೆ ಸ್ವಾಭಿಮಾನಿ ಬಳಗ ವೇದಿಕೆ ನೀಡುತ್ತಿದೆ ಪದಾಧಿಕಾರಿಗಳಾಗಲು ಆಸಕ್ತಿ ಹೊಂದಿರುವವರು ತಮ್ಮ ವಿವರಗಳನ್ನು ಈ ನಂಬರಿಗೆ ಕಳುಹಿಸಿ 9008475296, 9353460054, 9538641306 ಕೈ ಜೋಡಿಸಿ ನಾವೆಲ್ಲರೂ ಧ್ವನಿಯಿಲ್ಲದವರಿಗೆ ಧ್ವನಿಯಾಗೋಣ, ಅವಕಾಶ ವಂಚಿತರ ಹಕ್ಕುಗಳಿಗಾಗಿ ಕೈ ಜೋಡಿಸೋಣ. ಲೇಖನಿ- ಕೀ ಬೋರ್ಡ್, ಮೊಬೈಲ್ ಫೋನ್ ಗಳ ಮೂಲಕವೂ Online & Offline ಕ್ರಾಂತಿಯಕಹಳೆ ಮೊಳಗಿಸೋಣ ಸ್ವಾಭಿಮಾನಿ ಬಳಗ

Leave a Reply

Your email address will not be published. Required fields are marked *

You missed

error: Content is protected !!