“ಬ್ಯಾಂಕುಗಳಲ್ಲಿ ಕನ್ನಡ “
ಪುಸ್ತಕ ಲೋಕಾರ್ಪಣ :
ಸಾಹಿತಿ, ದಾವಣಗೆರೆ ಲೀಡ್ ಬ್ಯಾಂಕಿನ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಎನ್. ಟಿ. ಎರ್ರಿ ಸ್ವಾಮಿ ಅವರು ರಚಿಸಿರುವ “ಬ್ಯಾಂಕುಗಳಲ್ಲಿ ಕನ್ನಡ ” ಎನ್ನುವ ಕೃತಿ ಕಳೆದ ಭಾನುವಾರ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಬಿಡುಗಡೆಗೊಂಡಿತು.ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ಶಿವಮೊಗ್ಗ ಘಟಕವು ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ
ಎರ್ರಿಸ್ವಾಮಿಯವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ನಾಡಿನ ಖ್ಯಾತ ವಾಗ್ಮಿ, ಕಿರುತೆರೆ ಧಾರವಾಹಿಗಳ ಕಥೆಗಾರರು, ಮೈಸೂರು ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ಶ್ರೀ ಎಂ. ಎಸ್. ನರಸಿಂಹ ಮೂರ್ತಿಯವರು ಕೃತಿಯನ್ನು ಲೋಕಾರ್ಪಣೆ ಗೊಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಬ್ಯಾಂಕಿಂಗ್ ಯೋಜನೆಗಳು ಸರಿ ನಿಟ್ಟಿನಲ್ಲಿ ಜನಮನವನ್ನು ತಲುಪಲು ಪ್ರಾದೇಶಿಕ ಭಾಷೆಯ ಮೂಲಕದ ಸಂವಹನ ಹಾಗೂ ವ್ಯವಹಾರ ಮಹತ್ತರ ಪಾತ್ರವನ್ನು ವಹಿಸ ಬಲ್ಲದು. ಕನ್ನಡದ ನೆಲದಲ್ಲಿ ಕನ್ನಡವೇ ಬ್ಯಾಂಕುಗಳ ಸಾರ್ವಭೌಮ ಭಾಷೆಯಾಗಬೇಕು ಎಂದ ಆಶಿಸಿದ ಅವರು ತಾವು ಮೈಸೂರು ಬ್ಯಾಂಕಿನಲ್ಲಿ ಇದ್ದಾಗ ಕನ್ನಡಕ್ಕಾಗಿ ಹೋರಾಡಿದ ದಿನಗಳನ್ನು ಮೆಲುಕು ಹಾಕಿದರು. ಬ್ಯಾಂಕಿಂಗ್ ಉದ್ಯೋಗದಲ್ಲಿರುವ ಕನ್ನಡಿಗ ನೌಕರರೆಲ್ಲರೂ ಈಗ ರಚನಾತ್ಮಕವಾಗಿ,ಸಂಘಟನಾತ್ಮಕ
ವಾಗಿ ಹೋರಾಡ ಬೇಕಾದ ಅಗತ್ಯತೆ ಇದೆ ಎಂಬುದನ್ನು ಅವರು ಮನ ಗಾಣಿಸಿದರು.
ಕೃತಿಕಾರರಾದ ಎನ್. ಟಿ. ಎರ್ರಿ ಸ್ವಾಮಿಯವರು ಮಾತನಾಡಿ ತಾನು 40 ವರ್ಷಗಳ ಕಾಲ ಕೆನರಾ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸಿದ್ದು ಹಿಂದೆಂದೂ ಇಲ್ಲದ ರೀತಿಯಲ್ಲಿ ಇಂದಿನ ದಿನಮಾನಗಳಲ್ಲಿ ಬ್ಯಾಂಕುಗಳಲ್ಲಿ ಕನ್ನಡ ,ಕನ್ನಡಿಗರ ಸಂಖ್ಯೆ ಕ್ಷೀಣವಾಗುತ್ತಿದೆ. ಇದಕ್ಕೆ ಕಾರಣಗಳಾದರೂ ಏನು? ಆ ಸಮಸ್ಯೆಗಳಿಂದ ಹೊರಬರಲು ಇರುವ ಮಾರ್ಗೋಪಾಯಗಳು ಏನು ? ಎಂಬುದನ್ನು ಕೃತಿಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಶ್ರೀ ನಾಗರಾಜ ಶೆಟ್ಟಿ ಅವರು ಕನ್ನಡಿಗರ ಬ್ಯಾಂಕಿಂಗ್ ಶಕ್ತಿ ಅಗಾಧವಾದದ್ದು. ಅದನ್ನು ಭಾಷೆಯ ಒಳಿತಿಗಾಗಿಯೂ ಬಳಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ತಿಳಿಸಿದರು.
ವೇದಿಕೆಯಲ್ಲಿ ನಾರಿ ಶಕ್ತಿ ಪ್ರಶಸ್ತಿ ಪಡೆದ ಶ್ರೀಮತಿ ಪುಷ್ಟಪ್ರಿಯ ರವರು ಮಾತನಾಡಿ ಬ್ಯಾಂಕ್ ಉದ್ಯೋಗಿಗಳ ಕನ್ನಡ ಕೂಟದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಕೂಟದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಪೈ ರವರು ಕಳೆದ ಆರು ವರ್ಷಗಳಿಂದ ತಾವು ಕನ್ನಡಿಗ ಬ್ಯಾಂಕ್ ಉದ್ಯೋಗಿಗಳನ್ನು ಸಂಘ ಟಿಸುತ್ತಾ ಬರುತ್ತಿರುವ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ದರ ಲ್ಲದೆ ಇಂದು ಕೂಟವು ಆರು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಬ್ಯಾಂಕುಗಳಲ್ಲಿ ಕನ್ನಡ ಪರ ಹೋರಾಟಕ್ಕೆ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಬ್ಯಾಂಕ್ ಉದ್ಯೋಗಿಗಳು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ವಿಶೇಷ
ಆಕರ್ಷಣೆ ಪಡೆಯಿತು.
ಸಮಾರಂಭದಲ್ಲಿ ಕೂಟದ ಕೆ.ಆರ್.ವಿಶ್ವನಾಥ್, ರಘು ಕೆ.ಆರ್.ಗಿರೀಶ್ ಎಸ್. ಶಂಕರಪ್ಪ
ಶ್ರೀಮತಿ ಗೀತಾಂಜಲಿ ಪ್ರಸನ್ನ ಕುಮಾರ್, ಅನುರಾಧ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.