ಸಂತ್ರಸ್ಥ ನಿರಾಶ್ರಿತರಿಗೆ ನಿವೇಶನ ಮಂಜೂರಾತಿ ಆದೇಶ ಪತ್ರ ಹಸ್ತಾಂತರ:ಶಾಸಕ ಬಿ.ದೇವೇಂದ್ರಪ್ಪ
ಜಗಳೂರು ಸುದ್ದಿ:ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆ ಅಂಗಳದಲ್ಲಿನ ಸಂತ್ರಸ್ಥ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸುವ ಉದ್ದೇಶಕ್ಕಾಗಿ ಕಂದಾಯ ಇಲಾಖೆ ವ್ಯಾಪ್ತಿಯ ದ್ವಾರಕನಗರದ ಬಳಿ ಸರ್ವೆ ನಂಬರ್ 89 ರಲ್ಲಿ 2 ಎಕರೆ ಸರ್ಕಾರಿ ಜಮೀನು ಮೀಸಲಿರಿಸಿದ ಮಂಜೂರಾತಿ ಆದೇಶ ಪತ್ರವನ್ನು ಶಾಸಕ.ಬಿ.ದೇವೇಂದ್ರಪ್ಪ ಅವರ ಸಮ್ಮುಖದಲ್ಲಿ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಹಸ್ತಾಂತರಿಸಲಾಯಿತು.
ನಂತರ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,’ ಹಿರೇಮಲ್ಲನಹೊಳೆ ಕೆರೆ ಅಂಗಳದಲ್ಲಿ ಕಳೆದ ದಶಕಗಳಿಂದ ಗ್ರಾಮದ ವಸತಿರಹಿತ ಬಡಕೂಲಿಕಾರ್ಮಿಕರು ಕೆರೆಅಂಗಳದಲ್ಲಿ ತಮ್ಮ ಅವಶ್ಯಕತೆಗಾಗಿ ಸೂರು ನಿರ್ಮಿಸಿಕೊಂಡಿದ್ದರು.
ಪ್ರಸಕ್ತಸಾಲಿನಲ್ಲಿ ಅತಿವೃಷ್ಠಿಯಿಂದ ಕೆರೆಕೋಡಿ ಬಿದ್ದ ಹಿನ್ನೆಲೆ ಪ್ರಕೃತಿ ವಿಕೋಪಕ್ಕೆ 35 ಕುಟುಂಬಗಳು ಬೀದಿಗೆ ಬಿದ್ದಿವೆ.ಹಸುಳೆ ಕಂದಮ್ಮ ನೀರಿನಲ್ಲಿ ಮುಳುಗಿ ಬಲಿಯಾಗಿರುವುದು ರಾಜ್ಯಕ್ಕೆ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಹೆಸರಾಯಿತು.ಕಳೆದ ಒಂದೋವರೆ ತಿಂಗಳಿನಿಂದ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.ಕಂದಾಯ ಸಚಿವ ಕೃಷ್ಣ ಭೈರೇಗೌಡ,ಜಿಲ್ಲಾಡಳಿತ ಸಮೇತ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ನೀಡಿದ ಶಾಶ್ವತ ಸೂರಿನ ಭರವಸೆ ಯಂತೆ ಇದೀಗ ಸರ್ಕಾರಿ ಜಮೀನು ಮೀಸಲಿರಿಸಲಾಗಿದೆ.ಸರ್ಕಾರದ ವಿವಿಧ ವಸತಿ ಯೋಜನೆಯಡಿ ಪ್ರಥಮ ಆಧ್ಯತೆ ನೀಡಿ ಪ್ರತಿಕುಟುಂಬಕ್ಕೂ ಸೂರು ಕಲ್ಪಿಸಲಾಗುವುದು’. ಎಂದು ಭರವಸೆ ನೀಡಿದರು.
‘ಕಳೆದ ಆಡಳಿತಾವಧಿಯಲ್ಲಿನ ತಾಲೂಕು ಆಡಳಿತವಾಗಲಿ,ಆಡಳಿತದಲ್ಲಿದ್ದ ಜನಪ್ರತಿನಿಧಿಗಳಾಗಲಿ ಕೆರೆ ಅಂಗಳದಲ್ಲಿ ವಾಸಿಸುತ್ತಿದ್ದ ವಸತಿರಹಿತರಿಗೆ ಸರ್ಕಾರಿ ಜಮೀನು ಗುರುತಿಸಿ ನಿವೇಶನ,ವಸತಿಯೋಜನೆಯಡಿ ಸೂರು ಕಲ್ಪಿಸಿ ಸ್ಥಳಾಂತರಿಸಿದ್ದರೆ ಈ ಘಟನೆಗಳು,ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
:
ಕ್ಷಿಪ್ರ ಗತಿಯಲ್ಲಿ ಜವಾಬ್ದಾರಿ ಮೆರೆದ ಶಾಸಕ ಬಿ.ದೇವೇಂದ್ರಪ್ಪ:ಈ ಹಿಂದೆ ಯಾರೊಬ್ಬರೂ ಕೈಗೊಳ್ಳದ ನಿವೇಶನ,ಸೂರಿನ ನಿರ್ಧಾರವನ್ನು ಶಾಸಕ.ಬಿ.ದೇವೇಂದ್ರಪ್ಪ ಅವರು ತಮ್ಮ ಆಡಳಿತಾವಧಿಯಲ್ಲಿ ಕಾರ್ಯಪ್ರವೃತ್ತರಾಗಿ ಕಾಳಜಿಯಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುವ ಮೂಲಕ ನೆರೆ ಹಾವಳಿ ಸಂತ್ರಸ್ಥರಿಗೆ ಕ್ಷಿಪ್ರಗತಿಯಲ್ಲಿ ಎರಡು ಎಕರೆ ಸರ್ಕಾರಿ ಜಮೀನಿನ ಆದೇಶ ಮಂಜೂರಾತಿ ಪತ್ರವನ್ನು ವಿತರಿಸುವ ಮೂಲಕ ಸೂರಿನ ಕನಸ್ಸು ಈಡೇರಿಸುವ ಆಶಾಭಾವನೆ ಮೂಡಿಸಿ ಸಾಂತ್ವಾನದೊಂದಿಗೆ ಭರವಸೆಯ ಬೆಳಕಾಗಿ ಜವಾಬ್ದಾರಿ ಮೆರೆದಿದ್ದಾರೆ.ಇದರಿಂದ ಕಾಳಜಿಕೇಂದ್ರದಲ್ಲಿ ವಾಸಿಸುತ್ತಿರುವ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ,’ಇದೀಗ ಎರಡು ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ ನಿರಾಶ್ರಿತರಿಗೆ ನಿವೇಶನಕ್ಕೆ ನವೆಂಬರ್ 11 ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು.ಶಾಸಕರ ಹಾಗೂ ಜಿಲ್ಲಾಡಳಿತದ ಕಾಳಜಿಯಿಂದ ಒಂದೇ ದಿನದಲ್ಲಿ ಆದೇಶ ಮಂಜೂರಾತಿ ಪತ್ರ ಸಿಕ್ಕಿದೆ.ಇದೀಗ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಆರ್ ಟಿಸಿ ಹಸ್ತಾಂತರಗೊಳಿಸಲಾಗಿದೆ.ವಸತಿಯೋಜನೆಯಡಿ ಶೀಘ್ರ ವಸತಿಮನೆಗಳು ನಿರ್ಮಾಣ ಮಾಡಿಕೊಡಲಾಗುವುದು’ ಅಂತೆಯೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮೂರು ಮನೆಗಳು ಮತ್ತು ಮಲೆಮಾಚಿಕೆರೆಯಲ್ಲಿ ಒಂದು ಮನೆ ಸಂಪೂರ್ಣಹಾನಿಗೊಳಗಾಗಿದ್ದು.ಫಲಾನುಭವಿಗಳಿಗೆ ಶೇ. 100ರಷ್ಟು ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಬಿ. ಮಹೇಶ್ವರಪ್ಪ,ತಿಪ್ಪೇಸ್ವಾಮಿ,ಮಾಜಿ ಮಂಜುನಾಥ್,ಮಾರುತಿ,ಗಿಡ್ಡನಕಟ್ಟೆ ಕಾಂತರಾಜ್,ಗ್ರಾಮಲೆಕ್ಕಾಧಿಕಾರಿ ಅರುಣ್ ಕುಮಾರ್,ಸೇರಿದಂತೆ ಇದ್ದರು.