ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಐಟಿಯು ಪ್ರತಿಭಟನೆ.

ಜಗಳೂರು ಸುದ್ದಿ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ನೌಕರರ ಸಂಘ( ಸಿಐಟಿಯು)ಸಂಯೋಜಿತ ತಾಲ್ಲೂಕು ಸಮಿತಿವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆ ಘೋಷಣೆಕೂಗುತ್ತಾ,ಮಹಾತ್ಮಗಾಂಧಿ ವೃತ್ತ,ದಾವಣಗೆರೆ ರಸ್ತೆ ಅಂಬೇಡ್ಕರ್ ವೃತ್ತದಮೂಲಕ ತಾಲೂಕು ಪಂಚಾಯಿತಿ ಮುಂಬಾಗ ಜಮಾಯಿಸಿ ತಾ.ಪಂ.ಇಓ.ಕೆಂಚಪ್ಪ ಅವರಿಗೆ ಮನವಿಸಲ್ಲಿಸಿದರು.

ಸಂಘಟನೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಜಿ.ಎಸ್.ಬಸವರಾಜ್ ಮಾತನಾಡಿ,’2017 ಅಕ್ಟೋಬರ್ 31 ರಪೂರ್ವದಲ್ಲಿ ನೌಕರರನ್ನು ಅನುಮೋದನೆ ನೀಡಬೇಕು.ಅನುಕಂಪದಮೇಲೆ ಮರಣಹೊಂದಿದ ಕುಟುಂಬದ ಸದಸ್ಯರಿಗೆ ಗ್ರಾಮಪಂಚಾಯಿತಿ ಸದರಿ ಹುದ್ದೆಯನ್ನು ನೀಡಬೇಕು.ಬಾಕಿವೇತನಬಾಕಿ,ಇಎಸ್ ಐ ಪಿಎಫ್,ವಿಮೆಮಾಡಿಸಬೇಕು.ವಾಟರ್ ಮ್ಯಾನ್,ಸ್ವಚ್ಛತೆಗಾರರಿಗೆ ಮೊಬೈಲ್ ಆಪ್ ಮುಖಾಂತರ ಹಾಜರಾತಿ ಕಡ್ಡಾಯಗೊಳಿಸಬೇಕು‌.ನೌಕರರ ವೇತನವನ್ನು ಪ್ರತಿ ತಿಂಗಳ 5ನೇ ತಾರಿಖು ಒಳಗೆ ನೀಡಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಮಹಾಂತೇಶ್ ಸಿದ್ದಮ್ಮನಹಳ್ಳಿ,ಉಪಾಧ್ಯಕ್ಷ ಜಯರಾಮಪ್ಪ,ಉಪಕಾರ್ದರ್ಶಿ ಹಾಲೇಶ್,ಗೌರವ ಅಧ್ಯಕ್ಷ ಕೃಷ್ಣ,ಪದಾಧಿಕಾರಿಗಾಳಾದ ಕುಮಾರ್,ಸಂಚಾಲಕ ಆನಂದರಾಜ್,ನಾಗರಾಜ್,ರಾಮಸ್ವಾಮಿ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!