ದೇವಸ್ಥಾನ ನಿರ್ಮಾಣಕ್ಕೆ ₹10ಲಕ್ಷ ಮಂಜೂರು:ಶಾಸಕ.ಬಿ.ದೇವೇಂದ್ರಪ್ಪ ಭರವಸೆ.
ಜಗಳೂರು ಸುದ್ದಿ:ಗ್ರಾಮಸ್ಥರ ಬೇಡಿಕೆಯಂತೆ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆವತಿಯಿಂದ ಮೊದಲ ಪ್ರಾಶಸ್ತ್ಯದಲ್ಲಿ ₹10ಲಕ್ಷ ಮಂಜೂರು ಮಾಡಲಾಗಿದೆ ಎಂದು ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು.
ಮಂಗಳವಾರ ತಾಲೂಕಿನ ಭರಮಸಮುದ್ರ ಕೆರೆಗೆ ಬಾಗೀನ ಅರ್ಪಿಸಿ ನಂತರ ವೇದಿಕೆಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಲೂಕಿನಲ್ಲಿ ದಶಕಗಳಿಂದ ಕೆರೆಕಟ್ಟೆಗಳು ಬರಿದಾಗಿದ್ದ ಗಣೇಶ ವಿಸರ್ಜನೆಗೂ ನೀರಿಲ್ಲದೆ ಹರಸಾಹಸಪಡುವ ಸಂದರ್ಭಗಳು ಎದುರಾಗಿದ್ದವು.ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57ಕೆರೆ ತುಂಬಿಸುವ ಯೋಜನೆಯಡಿ ತುಂಗಾಭದ್ರೆ ಕೆರೆಗಳಿಗೆ ಹರಿದಿದ್ದಾಳೆ.ಕಾಕತಾಳೀಯ ಎಂಬಂತೆ ಹಿಂಗಾರು ವರುಣನ ಅರ್ಭಟಕ್ಕೆ ಕೆರೆಗಳು ಕೋಡಿಬಿದ್ದಿವೆ.ತಾಲೂಕಿನಲ್ಲಿ ನೀರಿಗೆ 6ಜೀವಗಳು ಬಲಿಯಾಗಿದ್ದು.ಜಲೋತ್ಸವದ ಸಂಭ್ರಮದಲ್ಲಿ ಮೈಮರೆಯದೆ ಸಾರ್ವಜನಿಕರು ಜಾಗೃತರಾಗಿರಬೇಕು.ಮಕ್ಕಳನ್ನು ನೀರಿನಿಂದ ದೂರವಿಡಿ’ ಎಂದು ಕಿವಿಮಾತು ಹೇಳಿದರು.
‘ಅಪ್ಪರ್ ಭದ್ರಾ ಕಾಮಗಾರಿಗೆ ರಾಜ್ಯ ಸರ್ಕಾರದ ಅನುದಾನ ₹200ಕೋಟಿ ಬಿಡುಗಡೆಯಾಗಿದೆ.ಕೇಂದ್ರದಿಂದ ನಯಪೈಸೆಯೂ ಮಂಜೂರಾಗಿಲ್ಲ.ಶೀಘ್ರದಲ್ಲಿಯೇ ಪಕ್ಷಾತೀತವಾಗಿ ಮುತ್ತಿನ ಕೊಪ್ಪದ ಬಳಿ ಕಾಮಗಾರಿ ವೀಕ್ಷಿಸಿ ನಂತರ ಚಳಿಗಾಲ ಅಧಿವೇಶನಕ್ಕೂ ಮುನ್ನ ನಿಯೋಗ ತೆರಳಿ ಚರ್ಚಿಸಲಾಗುವುದು’. ಎಂದು ಭರವಸೆ ನೀಡಿದರು.
‘ಉದ್ಯೋಗಖಾತ್ರಿ ಯೋಜನೆಯಡಿ ಕೆರೆಕೋಡಿಮೇಲಿನ ಜಂಗಲ್ ಕಟ್ಟಿಂಗ್ಸ್ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು.ಅಧಿಕ ಅನುದಾನ ಅನುಮೋದನೆಗೆ ತಿಳಿಸಲಾಗಿದೆ’. ಎಂದು ಹೇಳಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ’,ನನ್ನ ಆಡಳಿತಾವಧಿಯಲ್ಲಿ 57ಕೆರೆ ತುಂಬಿಸುವ ಯೋಜನೆಯಡಿ ಭರಮಸಮುದ್ರ,ಬಿದರಕೆರೆ,ಜಮ್ಮಾಪುರ,ನಿಬಗೂರು,ಸಂಗೇನಹಳ್ಳಿ,ಕಾತ್ರಾಳು ಕೆರೆಗಳು ಕೈಬಿಟ್ಟಿದ್ದವು.ನಂತರ ಭರಮಸಮುದ್ರ,ನಿಬಗೂರು ಕೆರೆಗಳು ಸೇರ್ಪಡೆಗೊಳಿಸಲಾಗಿತ್ತು ಫಲವಾಗಿ ಇಂದು ಕೆರೆಕೋಡಿಬಿದ್ದಿದೆ.ಅಂತೆಯೇ ಕುಗ್ರಾಮಗಳಾದ ತಿಮ್ಲಾಪುರ,ಕಾಮಗೇತನಹಳ್ಳಿ ಗ್ರಾಮಗಳಿಗೆ ರಸ್ತೆ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.
:
ರಾಜ್ಯದಲ್ಲಿ 36000 ಕೆರೆಗಳಿದ್ದವು ಕ್ರಮೇಣ ಅತಿಕ್ರಮಣಗೊಂಡು ಒತ್ತುವರಿಯಾಗಿ ಸಂಖ್ಯೆ ಕ್ಷೀಣಿಸಿವೆ.ಭದ್ರಾಮೇಲ್ದಂಡೆ ಯೋಜನೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕನಸಿನ ಯೋಜನೆ ನಾವೆಲ್ಲ ಹೊರಾಟಗಾರರು ಮಾತ್ರ.ಧೀಮಂತ ರಾಜಕಾರಣಿಗಳ ಒತ್ತಡದಿಂದ ರೂಪರೇಶ ಗೊಂಡಿದ್ದು.ಆಡಳಿತ ಸರ್ಕಾರಗಳು ಕೂಡಲೇ ಭದ್ರಾಮೇಲ್ದಂಡೆ ಯೋಜನೆ ಸಾಕಾರಗೊಳ್ಳಬೇಕು’.
——- ತೋರಣಗಟ್ಟೆ ತಿಪ್ಪೇಸ್ವಾಮಿ,
ಭದ್ರಾಮೇಲ್ದಂಡೆ ಯೋಜನೆ ಹೊರಾಟಗಾರ.
ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ ಸದಸ್ಯ ಬಸವರಾಜ್,ಕೆರೆ ಸಮಿತಿ ಅಧ್ಯಕ್ಷ ಶಿವರುದ್ರಪ್ಪ,ಪ್ರಾಂಶುಪಾಲ ನಾಗಲಿಂಗಪ್ಪ,ರೈತ ಸಂಘಟನೆ ಮುಖಂಡ ಬಸವರಾಜಪ್ಪ,ಜಿ.ಪಂ.ಮಾಜಿ ಸದಸ್ಯೆ ನಾಗರತ್ನಮ್ಮ,ಮುಖಂಡರಾದ ಬಿ.ಮಹೇಶ್ವರಪ್ಪ, ಮಹಾದೇವರೆಡ್ಡಿ,ಪ್ರಕಾಶ್ ರೆಡ್ಡಿ,ಸುರೇಶ್ ರೆಡ್ಡಿ,ಸಪ್ತಗಿರಿ ಬಸ್ ಮಾಲೀಕ ಅಶ್ವತ್ಥರೆಡ್ಡಿ,ಮಹ್ಮದ್ ಗೌಸ್ ಪೀರ್,ಪಲ್ಲಾಗಟ್ಟೆ ಶೇಖರಪ್ಪ,ವಕೀಲ ಅರುಣ್ ಕುಮಾರ್ ಎಂ,ಕುಮಾರ್,ಸೇರಿದಂತೆ ಇದ್ದರು.