ಶುಕ್ರದೆಸೆ ನ್ಯೂಸ್: ಜಗಳೂರು ತಾಲ್ಲೂಕಿನ ಮುಸ್ಟೂರು ಚೆಕ್ ಪೋಸ್ಟ್ ಬಳಿ ಸೂಕ್ತ ದಾಖಲೆಗಳಿಲ್ಲದ 2.80 ಲಕ್ಷ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.ಎನ್ನಲಾಗಿದೆ.
ವಾಹನ ತಪಾಸಣೆ ವೇಳೆ ವಶಪಡಿಸಿಕೊಂಡ ಹಣವು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ್ದು ಎನ್ನಲಾಗಿದೆ. ಹಣವನ್ನು ಹೊಂದಿದ್ದ ಸಂಘದ ಪ್ರತಿನಿಧಿ ಭಾಗ್ಯಮ್ಮ ಸೂಕ್ತ ದಾಖಲೆ ತೋರಿಸದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸರಿಯಾದ ದಾಖಲೆ ಸಲ್ಲಿಸಿ ಹಣ ವಾಪಾಸ್ಸು ಪಡೆಯುವಂತೆ ಸೂಚಿಸಲಾಗಿದೆ.ಎಂದು ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್ ತಿಳಿಸಿದ್ದಾರೆ ಸಂದರ್ಭದಲ್ಲಿ ತಹಸಿಲ್ದಾರ್ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಜಿ.ಸಂತೋಷ್ ಕುಮಾರ್ .ಎಸ್.ಎಸ್.ಟಿ ಕಾರ್ಯ ನಿರ್ವಾಹಕ ದಂಡಾಧಿಕಾರಿ ರಮೇಶ್ ನಾಯ್ಕ.ಡಿ ಕೃಷಿ ಇಲಾಖೆ ಅಧಿಕಾರಿ ಮಿಥುನ್ ಕೀಮತ್ ಪೋಲಿಸ್ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಹಾಜರಿದ್ದರು