ಶುಕ್ರದೆಸೆ ನ್ಯೂಸ್: ದಾವಣಗೆರೆ ಯುವತಿ ಬಲಿ ಪಡೆದ ಪುಂಡ ಆನೆ ; ಹಿಡಿಯಲು ಬಂದ ವೈದ್ಯರ ಮೇಲೆ ದಾಳಿ ಮಾಡಿ, ಚನ್ನಗಿರಿ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಕೊನೆಗೂ ಸೆರೆ; ನಿಟ್ಟುಸಿರು ಬಿಟ್ಟ ಜನ..!
ದಾವಣಗೆರೆ; ಯುವತಿ ಬಲಿ ಪಡೆದು ಚನ್ನಗಿರಿ ಜನರ ನಿದ್ದೆಗೆಡಿಸಿದ್ದ ಕಾಡಾನೆ ಕೊನೆಗೂ ಸೆರೆಯಾಗಿದೆ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಜೀನಹಳ್ಳಿ – ಕೆಂಚಿಕೊಪ್ಪ ಬಳಿ ಅರವಳಿಕೆ ನೀಡಿ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.ಸತತ ನಾಲ್ಕು ದಿನದಿಂದ ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು.
ಹೊಲ್ಕೆರೆ ಕಡೆಯಿಂದ ಬಂದ ಈ ಪುಂಡಾನೆ ಸಂತೇಬೆನ್ನೂರಿನ 17 ವರ್ಷದ ಬಾಲಕಿ ಮೇಲೆ ದಾಳಿ ಮಾಡಿ ಕೊಂದು ಹಾಕಿ, ಊರೊಳಗೆ ದಾಂಧಲೆ ಮಾಡಿತ್ತು. ಈ ದಾಳಿಗೆ ಸುಮಾರು ಐದಾರು ಜನರಿಗೆ ಹಾನಿಯಾಗುತ್ತು. ಇದೀಗ ಈ ಕಾಡಾನೆ ಕೊನೆಗೂ ಸಿಕ್ಕಿ ಬಿದ್ದಿದೆ.
ಚನ್ನಗಿರಿ ತಾಲೂಕಿನ ಸೂಳೆಕೆರೆ, ಸಂತೆಬೆನ್ನೂರು, ಹೊನ್ನಾಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಓಡಾಡುತ್ತಿದ್ದ ಆನೆ ಸೆರೆಗೆ ಬಂದಿದ್ದ ವೈದ್ಯಾಧಿಕಾರಿ ಡಾ. ವಿನಯ್ ಅವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಆದರೆ ಅರವಳಿಕೆ ಮದ್ದು ನೀಡಲು ಹೋಗಿದ್ದಾಗ ವಿನಯ್ ಮೇಲೆ ದಾಳಿ ನಡೆಸಿತ್ತು.
ಆನೆ ದಾಳಿಯಿಂದ ಜನರ ಆತಂಕ ಹೆಚ್ಚಾಗಿತ್ತು. ಆದ್ದರಿಂದ ಜನರು ಮನೆಯಿಂದ ಹೊರಗೆ ಬರಲು ಹಾಗೂ ತೋಟ, ಜಮೀನುಗಳಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು.ಆನೆಯನ್ನು ಪತ್ತೆ ಹಚ್ಚಲು ಸೂಳೆಕೆರೆ ಪರಿಸರದಲ್ಲಿ ಡ್ರೋಣ್ ಸಹ ಬಳಕೆ ಮಾಡಲಾಯಿತು. ಆನೆಯನ್ನು ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೆಬೈಲ್‌ನಿಂದ 6 ಗಜದಳದೊಂದಿಗೆ ನೂರಾರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಹೆಣ್ಣಾನೆ ಮೂಲಕ ಆಕರ್ಷಿಸಿ ಒಂಟಿ ಸಲಗವನ್ನು ಸೆರೆಹಿಡಿಯಲಾಯಿತು.ಭಾನುಮತಿ ಆನೆಯ ಆಕರ್ಷಣೆ ತೋರಿಸಿ ಸಲಗಕ್ಕೆ ಖೆಡ್ಡಾ ತೋಡಲಾಯಿತು.
ಸೂಳೆಕೆರೆ, ಹೊಸಹಳ್ಳಿ ತಾಂಡಾ, ಕೆಂಚಗಾರನಹಳ್ಳಿ, ಹೊಸಹಳ್ಳಿ, ದಾಗಿನಕಟ್ಟೆ, ಬಸವಾಪಟ್ಟಣ, ಬೆನಕಹಳ್ಳಿ, ಕೊಮಾರನಹಳ್ಳಿ, ಮಲ್ಲಿಗೇನಹಳ್ಳಿ, ಗಾಣದಕಟ್ಟೆ, ಲಿಂಗದಹಳ್ಳಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಆನೆ ಕಂಡರೆ ಮಾಹಿತಿ ನೀಡುವಂತೆ ಡಂಗುರ ಸಾರಲಾಗಿತ್ತು.
ಇಂದು (ಏ. 11) ಜೀನಹಳ್ಳಿ – ಕೆಂಚಿಕೊಪ್ಪ ಬಳಿ ಆನೆ ಸಂಚಾರ ಮಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದರು. ತಕ್ಷಣ ಆಗಮಿಸಿದ ತಂಡವು ಆನೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ.
ಸಾವು ದಾವಣಗೆರೆ ಯುವತಿ ಬಲಿ ಪಡೆದು; ಹಿಡಿಯಲು ಬಂದ ವೈದ್ಯರ ಮೇಲೆ ದಾಳಿ ಮಾಡಿ, ಚನ್ನಗಿರಿ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಕೊನೆಗೂ ಸೆರೆ; ನಿಟ್ಟುಸಿರು ಬಿಟ್ಟ ಜನ..!