ಜಗಳೂರು ಉತ್ಸವದಲ್ಲಿ ಐತಿಹಾಸಿಕ ಸಂಸ್ಕೃತಿ ಪರಂಪರೆಯ ಸಂಶೋಧನಾ ಕಿರು ಚಿತ್ರ ಪ್ರದರ್ಶನ
ಜಗಳೂರು ಸುದ್ದಿ:ಜಗಳೂರು ಉತ್ಸವ ಕಾರ್ಯಕ್ರಮದಲ್ಲಿ ಜಗಳೂರು ಜನತೆ ಅರಿಯಲಾಗದಷ್ಟು ಸಾಂಸ್ಕೃತಿಕ,ಐತಿಹಾಸಿಕ ಪರಂಪರೆಯ ಸಂಶೋಧನಾ ಮಾಹಿತಿಯ ಕಿರುಚಿತ್ರ ಪ್ರದರ್ಶೀಸುವ ಅಂಗವಾಗಿ ವೀಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ನಟ,ನಿರ್ದೇಶಕ,ಇತಿಹಾಸ ಸಂಶೋಧಕ ಡಾ.ರಾಧಕೃಷ್ಣನ್ ತಿಳಿಸಿದರು.
ಪಟ್ಟಣದ ಜನಸಂಪರ್ಕ ಕಛೇರಿಯಲ್ಲಿ ವೀಡಿಯೋ ಚಿತ್ರೀಕರಣ ಅಂಗವಾಗಿ ಆಗಮಿಸಿದ್ದ ಹಿನ್ನೆಲೆ ಉದ್ದೇಶಿಸಿ ಅವರು ಮಾತನಾಡಿದರು.
‘ಹಂಪಿ ಉತ್ಸವ,ಕನಕಗಿರಿ ಉತ್ಸವಗಳಲ್ಲಿ ಸಂಶೋಧನೆಯ ನಂತರ ಅಲ್ಲಿನ ವಿಶೇಷತೆಯನ್ನು ಚಿತ್ರೀಕರಣದೊಂದಿಗೆ ಕಿರುಚಿತ್ರ ಪ್ರದರ್ಶಿಸಲಾಗಿದೆ.ನಾನು ಜಗಳೂರಿನ ಐತಿಹಾಸಿಕ ಮಾಹಿತಿ ಪಡೆದು ಆಗಮಿಸಿರುವೆ.ಜಗಳೂರು ಜ್ಞಾನಸಾಗರದೊಂದಿಗೆ ಜಲಸಾಗರವಾಗಿದೆ,ಸೊಕ್ಕೆ ಗ್ರಾಮದ ಇತಿಹಾಸವನ್ನು ‘ಸುಬ್ರಹ್ಮಣ್ಯ’ ಕಥಾರೂಪದಲ್ಲಿ ಸಿನಿಮಾ ಶೂಟಿಂಗ್ ನಡೆಸಲಾಗುತ್ತಿದ್ದೇವೆ.ನನಗೆ ಮತ್ತೊಮ್ಮೆ ಸಂಶೋಧನೆಗೆ ಅವಕಾಶ ನೀಡಿರುವ ಶಾಸಕರಿಗೆ ಚಿರ ಋಣಿ’.ಎಂದು ಹೇಳಿದರು.
ಶಾಸಕ.ಬಿ.ದೇವೇಂದ್ರಪ್ಪ ಮಾತನಾಡಿ,’ಡಿಸೆಂಬರ್ 28ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಗಳೂರು ಉತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಐತಿಹಾಸಿಕ,ಸಾಂಸ್ಕೃತಿಕ ಪರಂಪರೆ ಮೆರಗಿನ ಕಿರುಚಿತ್ರ ಪ್ರದರ್ಶಿಸಲಾಗುವುದು ಆದ್ದರಿಂದ ಖ್ಯಾತ ಇತಿಹಾಸ ಸಂಶೋಧನಾ ತಜ್ಞ ನಿರ್ದೇಶಕ ಡಾ.ರಾಧಕೃಷ್ಣನ್ ಪಲ್ಲಕ್ಕಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ’ಎಂದರು.
ಪತ್ರಕರ್ತ ವಕೀಲ ಡಿ.ಶ್ರೀನಿವಾಸ್ ಮಾತನಾಡಿ,ತಾಲೂಕಿನಲ್ಲಿನ ಐತಿಹಾಸಿಕ ಚಿನ್ನ ಹಗರಿನದಿ,ಸಂಗೇನಹಳ್ಳಿ ಬೂದಿದಿಬ್ಬ,ಕಲ್ಲೇಶ್ವರ ದೇವಸ್ಥಾನ,ಕೊಣಚಗಲ್,ನಿಬಗೂರು ಶಾಸನ,ರಾಜಮಹಾರಾಜರ ಕಾಲದಲ್ಲಿನ ಪುಷ್ಕರಣೆ,ರಂಗಯ್ಯದುರ್ಗದಲ್ಲಿನ ಮದಕರಿನಾಯಕನ ಸೇನಾ ತುಕಡಿ ರಂಯ್ಯನದುರ್ಗ ಪ್ರದೇಶ,ರಕ್ಕಸಘಟ್ಟದ ಕರಡಿ ಗುಹೆ,ಕೊಂಡಕುರಿ ಅಭಯಾರಣ್ಯ ಇತಿಹಾಸ ಸಾರುವದಾಖಲೆಗಳನ್ನು ಸಂಗ್ರಹಣೆಮಾಡಿ ಮುಂದಿನ ಪೀಳಿಗೆಗೆ ಇತಿಹಾಸ ಸಾರುವ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಸಾಹಿತಿ ಎನ್ ಟಿ ಎರ್ರಿಸ್ವಾಮಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಸೇರಿದಂತೆ ಮುಖಂಡರುಗಳು ಇದ್ದರು.