ಹೊಸೂರು ವಕೀಲರ ಮೇಲಿನ ಹಲ್ಲೆ ಖಂಡಿಸಿ ತಾಲ್ಲೂಕು ತಹಶೀಲ್ದಾರ್ ರವರಿಗೆ ಮನವಿ
ಜಗಳೂರು ಸುದ್ದಿ
:ಪಟ್ಟಣದ ತಾಲೂಕು ಕಛೇರಿ ಮುಂಬಾಗ ತಮಿಳು ನಾಡು ರಾಜ್ಯದ ಹೊಸೂರಿನ ವಕೀಲರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರ ಮೂಲಕ ಸರ್ಕಾರಕ್ಕೆ
ಮನವಿ ಸಲ್ಲಿಸಿ ಆರೋಪಿಯನ್ನ ಬಂಧಿಸುವಂತೆ ಆಗ್ರಹಿಸಿದರು
ಈ ವೇಳೆ ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್ ಮಾತನಾಡಿ,’ತಮಿಳುನಾಡಿನಲ್ಲಿ ನ್ಯಾಯಾಲಯದ ಬಳಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವನ ವಿರುದ್ದ ಈ ಕೂಡಲೇ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಿ ಬಂಧಿಸುವಂತೆ ಒತ್ತಾಯಿಸಿದರು.. ಭಾರತ ದೇಶದ ಬೃಹತ್ ಸಂವಿಧಾನಿಕ ರಾಷ್ಟ್ರದಲ್ಲಿ ವಕೀಲರ ಪಾತ್ರ ಮಹತ್ವದಾಗಿದ್ದು ಕಾನೂನು ಸೇವೆ ನೀಡುತ್ತಿರುವ ವಕೀಲರ ಮೇಲೆ ಇತ್ತೀಚಿನ ದಿನಮಾನಗಳಲ್ಲಿ ನಿರಂತರ ದೌರ್ಜನ್ಯ ದಬ್ಬಾಳಿಕೆ ಹಲ್ಲೆಯಂತ ಪ್ರಕರಣಗಳು ನಡೆಯುತ್ತಿವೆ ಇದು ಪ್ರಜಾಪ್ರಭುತ್ವಕ್ಕೆ ದಕ್ಕೆಯಾಗುವಂತಿದೆ . ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನು ಭದ್ರತೆ ಒದಗಿಸಬೇಕು.ವಕೀಲರ ಮೇಲಿನ ನಿರಂತರ ಹಲ್ಲೆ,ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು’. ಎಂದು ಒತ್ತಾಯಿಸಿದರು.
ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕು ಪದಾಧಿಕಾರಿಗಳಾದ ವಕೀಲರಾದ ರುದ್ರೇಶ್,ಸುನಿಲ್,ನಾಗೇಶ್,ಆರ್.ಓಬಳೇಶ್,ಸಣ್ಣ ಓಬಯ್ಯ,ನಾಗರಾಜ್,ಗೋಗುದ್ದು ತಿಪ್ಪೇಸ್ವಾಮಿ
ಮನೋಜ್,ರಮೇಶ್,ಸೇರಿದಂತೆ ಇದ್ದರು.