ರಾಗಿ ಯಂತ್ರ ಪಲ್ಟಿ:ಇಬ್ಬರು ರೈತಕಾರ್ಮಿಕರು ದುರ್ಮರಣ
ಜಗಳೂರು ಸುದ್ದಿ:
ತಾಲೂಕಿನ ಬಂಗಾರಕ್ಕನಗುಡ್ಡದ ಗ್ರಾಮದ ಮಹೇಶ್ (35),ರಾಧಮ್ಮ (30),ರೈತ ಕಾರ್ಮಿಕರು ರಾಗಿ ಕೊಯ್ಲು ಮುಗಿಸಿಕೊಂಡು ಮನೆಗೆ ಮರಳುವಾಗ ಸಂಜೆ 4ಗಂಟೆ ಸುಮಾರಿನಲ್ಲಿ ರಾಗಿ ಕಾಳು ಬೇರ್ಪಡಿಸುವ ಯಂತ್ರದ ವಾಹನ ರಾಜನಹಟ್ಟಿ ಗ್ರಾಮದ ಬಳಿ ಪಲ್ಟಿಯಾಗಿರುವ ಯಂತ್ರಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟಿರುವ ಘಟನೆ ಜರುಗಿದೆ.
ಘಟನೆ:ತಾಲೂಕಿನ ಬಂಗಾರಕ್ಕನಗುಡ್ಡದಿಂದ ಬೆಳಿಗ್ಗೆ ಭೈರನಾಯಕನಹಳ್ಳಿ (ರಾಜನಹಟ್ಟಿ)ಗ್ರಾಮದ ರೈತನೊರ್ವನ ಜಮೀನಿನಲ್ಲಿ ರಾಗಿ ಫಸಲಿನಿಂದ ಕಾಳು ಬೇರ್ಪಡಿಸುವ ಯಂತ್ರದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಸ್ವಗ್ರಾಮಕ್ಕೆ ಹಿಂತಿರುಗುವಾಗ ಘಟನೆ ನಡೆದಿದೆ ಎನ್ನಲಾಗಿದೆ.ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಮೃತದೇಹಗಳನ್ನು ರವಾನಿಸಿಲಾಗಿದೆ.ಘಟನೆ ಕುರಿತು ಪ್ರಕರಣ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.