ನಿರ್ಗತಿಕರಿಗೆ ಸಹಾಯಸ್ತ ಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು:ನವೀನ್ ಕುಮಾರ್
ಜಗಳೂರು ಸುದ್ದಿ:ಸಮಾಜದಲ್ಲಿ ಪ್ರತಿಯೊಬ್ಬರೂ ಬಡ ನಿರ್ಗತರಿಗೆ ಸಹಾಯಸ್ತಚಾಚುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪ.ಪಂ.ಅಧ್ಯಕ್ಷ ನವೀನ್ ಕುಮಾರ್ ಹೇಳಿದರು.
ಪಟ್ಟಣದ ಮಾಲತಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರತ್ನನಿಧಿ ಟ್ರಸ್ಟ್ ವತಿಯಿಂದ ದಿ.ಪದ್ಮಾವತಿ ಅವರ ಪುಣ್ಯಸ್ಮರಣೆಅಂಗವಾಗಿ ಸುಪುತ್ರಿ ಸುನಿತಾ ಅವರಿಂದ ನೀಡಲಾದ ಅಲೆಮಾರಿ ಸಮುದಾಯದ ಮಕ್ಕಳಿಗೆ ಉಚಿತ ಬಟ್ಟೆ ಮತ್ತು ನೋಟ್ ಪುಸ್ತಕ ವಿತರಿಸಿ ಮಾತನಾಡಿದರು.
ಬಡಮಕ್ಕಳಿಗೆ ಪುಸ್ತಕ,ಬಟ್ಟೆ ,ಅಗತ್ಯ ಸಲಕರಣೆ ಗಳನ್ನು ಉಚಿತವಾಗಿ ವಿತರಿಸಿದರೆ ಅವರಿಗೆ ಶೈಕ್ಷಣಿಕ ಕಲಿಕೆಗೆ ಪ್ರೋತ್ಸಾಹಿಸಿದಂತೆ ಪ್ರತಿಯೊಬ್ಬರೂ ದುಡಿಮೆಯ ಒಂದು ಭಾಗವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಡಬೇಕು ಎಂದರು.
ಸಮಾಜಸೇವಕಿ ಸುನಿತಾ ಮಾತನಾಡಿ’ಬಾಂಬೆಯಲ್ಲಿನ ರತ್ನನಿಧಿ ಟ್ರಸ್ಟ್ ವತಿಯಿಂದ ವಿವಿಧತಾಲೂಕುಗಳ 115 ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಗುತ್ತಿದೆ.ಸ್ವಪನ್ಕಾ ಪಿತಾರ ಪ್ರಾಜೆಕ್ಟ್ ನಡಿ ಗ್ರಂಥಾಲಯಗಳಿಗೆ ಪುಸ್ತಕ ನೀಡಲಾಗುತ್ತಿದೆ.ಲಕ್ಕಂಪುರ ಗ್ರಾಮದ ವಿಕಲಚೇತನ ಯುವಕನಿಗೆ ವಿಶಾಖಪಟ್ಟಣದಿಂದ ತಪಾಸಣೆ ಕೊಡಿಸಿ ಅಗತ್ಯ ಸಲಕರಣೆ ನೀಡಲಾಗಿದೆ.ಸಮಾಜಸೇವೆಗೆ ಸರ್ವರೂ ಕೈಜೋಡಿಸಬೇಕು ಎಂದರು.
ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಸಾಹಿತಿ ಡಿಸಿ ಮಲ್ಲಿಕಾರ್ಜುನ್
ಸಮಾಜಸೇವಕ ಮಾರುತಿ,ಪ.ಪಂಸದಸ್ಯ ಪಾಪಲಿಂಗಪ್ಪ,ನಾಮನಿರ್ದೇಶಿತ ಸದಸ್ಯರಾದ ತಾನಾಜಿ ಗೋಸಾಯಿ,ಕುರಿಜಯ್ಯಣ್ಣ,ಸೇರಿದಂತೆ ಇದ್ದರು