ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾಮುಖ್ಯತೆ ನೀಡಬೇಕು ಡಾ. ಟಿ ಜಿ ರವಿಕುಮಾರ್ ಹೇಳಿದರು
ಜಗಳೂರು ತಾಲೂಕು ಬಿಳಿಚೋಡು ಗ್ರಾಮದಲ್ಲಿ ಇಂದು ಪ್ರೀತಿಯ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು .
ಆರೈಕೆ ಆಸ್ಪತ್ರೆ ಮುಖ್ಯಸ್ಥರಾದ ಡಾ ಟಿ ಜಿ ರವಿಕುಮಾರ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಯೋವೃದ್ಧರಿಗೆ ಆರೋಗ್ಯದ ಸಮಸ್ಯೆ ತೀವ್ರವಾಗಿ ಕಾಣಿಸುತ್ತಿದ್ದು, ನಿಯಮಿತವಾಗಿ ಅವರ ಆರೋಗ್ಯ ತಪಾಸಣೆಯನ್ನು ಮತ್ತು ಚಿಕಿತ್ಸೆ ನೀಡಬೇಕು
ಮುಂಜಾಗ್ರತೆಯಿಂದ ವಯೋ ವೃದ್ಧರ ಅನಾರೋಗ್ಯಗಳನ್ನು ತಡೆಗಟ್ಟಿ ಆರೋಗ್ಯವಂತ ಜೀವನವನ್ನು ಕೊನೆಯವರೆಗೂ ಕಲ್ಪಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು
ಈ ವೇಳೆ ಜಗಳೂರಿನ ಮಾಜಿ ಶಾಸಕರಾದ ಟಿ ಗುರುಸಿದ್ದನಗೌಡ್ರು ಹಾಗೂ ಊರಿನ ಮುಖಂಡರಾದ ನಾಗನಗೌಡ, ಹಾಲಪ್ಪ, ಮಂಜುನಾಥ್, ಹಾಗೂ ಮುಖಂಡರ,ಸತೀಶ್ ಗೋಕಲೆಟ್ಟಿ, ಉದ್ಯಮಿಗಳಾದ ನಾಗರಾಜ್ ಸ್ವಾಮಿ, ನವೀನ್ ನಿಬಗೂರು , ಡಾ. ಕಲ್ಲೇಶ್ ಡಾ. ಕಾರ್ತಿಕ್ , ಹಿರಿಯ ಗ್ರಾಮಸ್ಥರು ಉಪಸ್ಥಿತರಿದ್ದರು