ಮನುಷ್ಯನಲ್ಲಿ ವಿನಯ,ಸಂಪತ್ತು ಗಳಿಕೆಗೆ ಶಿಕ್ಷಣ ಮೂಲಾಧಾರ:ಶಾಸಕ.ಬಿ.ದೇವೇಂದ್ರಪ್ಪ
ಜಗಳೂರು ಸುದ್ದಿ:ಮನುಷ್ಯನ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣ ಮೂಲ ಆಧಾರವಾಗಿದ್ದು ಧರ್ಮ,ವಿನಯ,ಸಂಪತ್ತು ಗಳಿಕೆಗೆ ಪೂರಕ ಎಂದು ಶಾಸಕ.ಬಿ.ದೇವೇಂದ್ರಪ್ಪ ವ್ಯಾಖ್ಯಾನಿಸಿದರು.
ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕಿನಾದ್ಯಂತ 46 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಯಾವ ಸೌಲಭ್ಯಗಳಿಲ್ಲದ ಕಾಲಘಟ್ಟದಲ್ಲಿ ಆರ್ಥಿಕ ಸಂಕಷ್ಟದ ಮಧ್ಯೆ ಪದವಿ ಶಿಕ್ಷಣ ಪಡೆದಿರುವೆ ಶಿಕ್ಷಣ ಪಡೆಯಲು ಬಡತನ ಶಾಪವಲ್ಲ ಛಲ,ಪರಿಶ್ರಮ ಮುಖ್ಯ ಇಂದು ಸರ್ಕಾರದಿಂದ ಅನೇಕ ಸೌಲಭ್ಯಗಳು ಲಭ್ಯವಿದ್ದು ಮಕ್ಕಳು ಸದುಪಯೋಗಪಡೆದುಕೊಂಡು ಮಕ್ಕಳು ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡಿದ ನಾನು ಶಾಸಕನಾಗಿ ಆಯ್ಕೆಯಾಗಿರುವೆ,ನನ್ನ ಜೇಷ್ಠ ಪುತ್ರ ಜಿಲ್ಲಾಧಿಕಾರಿಯಾಗಿರುವುದು ಇಂದಿನ ವಿದ್ಯಾರ್ಥಿಸಮೂಹಕ್ಕೆ ಸ್ಪೂರ್ತಿಯಾಗಬೇಕು.ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಸಲ್ಲದು ಎಂದು ವಿದ್ಯಾರ್ಥಿಗಳಿಗೆ ಸಾಧನೆಯ ಆತ್ಮಸ್ಥೈರ್ಯ ತಂಬಿದರು.
ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೊಟ್ರೇಶ್ ಮಾತನಾಡಿ,’ತಾಲೂಕಿಗೆ
₹3.85 ಕೋಟಿ ವೆಚ್ಚದಲ್ಲಿ 34 ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ 14 ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನಲ್ಲಿ 1ರಿಂದ 10 ನೇ ತರಗತಿವರೆಗೆ ವಿಷಯಾನುಕ್ರಮಣಿಕೆ ಅಪ್ ಲೋಡ್ ಮಾಡಲಾಗಿದೆ.ಶಿಕ್ಷಕರು ಪ್ರಾಯೋಗಿಕವಾಗಿ ಅರ್ಥೈಸಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ನಿವೃತ್ತ ಉಪನ್ಯಾಸಕ ಸುಭಾಷ್ ಚಂದ್ರಬೋಸ್ ಮಾತನಾಡಿ’ಶಾಸಕ.ದೇವೇಂದ್ರಪ್ಪ ಅವರಶಿಕ್ಷಕರು ನಿರಂತರ ಅಭ್ಯಾಸನಿರತರಾಗಿ ಪೂರ್ವತಯಾರಿ ನಡೆಸಿ ತರಗತಿಯಲ್ಲಿ ಬೋಧನೆಯಲ್ಲಿ ತೊಡಗಬೇಕು.ಮಕ್ಕಳ ಭವಿಷ್ಯಕ್ಕೆ ಪೂರಕವಾದ ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರು ಪರಿಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಎಲ್ ತಿಪ್ಪೇಸ್ವಾಮಿ ಮಾತನಾಡಿ,’ಆಧುನಿಕವಾಗಿ ಶಿಕ್ಷಣ ಕ್ಷೇತ್ರ ನಾಗಾಲೋಟದಲ್ಲಿ ಸಾಗುತ್ತಿದೆ.ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಪರಿಣಾಮಕಾರಿ ಬೊಧನೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ದಿ ಸಾಧ್ಯ.ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಶೇ.100 ರಷ್ಟು ಫಲಿತಾಂಶಕ್ಕೆ ಶಿಕ್ಷಕರು ಇಲಾಖೆಯೊಂದಿಗೆ ಕೈಜೋಡಿಸಬೇಕು’. ಎಂದು ಕರೆ ನೀಡಿದರು.
ಶಾಸಕರ ಮುಖಸ್ತುತಿ:ಪ್ರಾಸ್ತಾವಿಕ ಮಾತನಾಡಿದ ಶಿಕ್ಷಣ ಜಿಲ್ಲಾ ಉಪನಿರ್ದೇಶಕ ಕೋಟ್ರೇಶ್ ಅವರು ಶಾಸಕ ಬಿ.ದೇವೇಂದ್ರಪ್ಪ ಅವರು ಕೈಗೊಂಡಿರುವ ಕಾಮಗಾರಿಗಳು,ಭರ್ತಿಯಾದ ಕೆರೆಗಳು,ಜಗಳೂರಿನ ಇತಿಹಾಸ,ಭೌಗೋಳಿಕ ವಿಸ್ತೀರ್ಣ,ಇತ್ಯಾದಿಗಳ ಬಗ್ಗೆ ಭಾಷಣದುದ್ದಕ್ಕೂ ವಿವರಣೆ ನೀಡಿದರೇ ಹೊರತು ತಾಲೂಕಿನ ಶೈಕ್ಷಣಿಕಪ್ರಗತಿಯ ಬಗ್ಗೆ ಒಂದೇ ಒಂದು ಸೊಲ್ಲೆತ್ತಲಿಲ್ಲ.ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶ ಪಾತಾಳಕ್ಕಿಳಿದ ಬಗ್ಗೆ ಒಂದೇ ಒಂದು ಆತ್ಮಾವಲೋಕನ ಮಾತಾಡಲಿಲ್ಲ.46 ಸ್ಮಾರ್ಟ್ ಕ್ಲಾಸ್ ಗೆ ಬೇಕಾದ ಅಗತ್ಯ ಸಾಧನ ಸಲಕರಣೆಗಳನ್ನು ಒದಗಿಸಲು ಶಾಸಕರಿಗೆ ಪ್ರಸಕ್ತಸಾಲಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ನೂರಕ್ಕೆನೂರರಷ್ಟು ತರುವ ಭರವಸೆಯೂ ನೀಡಲಿಲ್ಲ.ಹೊಗಳಿ ಶಾಸಕರನ್ನು ಹೊನ್ನಶೂಲಕ್ಕೇರಿಸಿದರು.
ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ನವೀನ್ ಕುಮಾರ್,ಸದಸ್ಯರಾದ ಲಲಿತಮ್ಮ,ರಮೇಶ್ ರೆಡ್ಡಿ,ಆರ್.ತಿಪ್ಪೇಸ್ವಾಮಿ,ನಾಮನಿರ್ದೇಶಿತ ಸದಸ್ಯರಾದ ತಾನಾಜಿಗೋಸಾಯಿ,ಜಯ್ಯಣ್ಣ,ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,ತಾ.ಪಂ.ಇಓ ಕೆಂಚಪ್ಪ,ಬಿಇಓ ಹಾಲಮೂರ್ತಿ,ಪ್ರಾಂಶುಪಾಲ ಜಗದೀಶ್,ಬಿಆರ್ ಸಿ ಡಿಡಿ ಹಾಲಪ್ಪ,ಮುಖಂಡರಾದ ಬಿ. ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಮಹಮ್ಮದ್ ಗೌಸ್,ಸೇರಿದಂತೆ ಮುಖ್ಯ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.