ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಂದ ಅಂತರ:ದಾದಪೀರ್ ನವಿಲೆಹಾಳ್ ವಿಷಾಧ
ಜಗಳೂರು ಸುದ್ದಿ:ಶೋಕಿ,ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ಪ್ರತಿಭೆ ಕಣ್ಮರೆಯಾಗುತ್ತಿದ್ದು.ಪಠ್ಯ ಪುಸ್ತಕ ಓದುಗರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ ಎಂದು ವಿಶ್ರಾಂತ ಪ್ರಾಂಶುಪಾಲ ದಾದಪೀರ್ ನವಿಲೆಹಾಳ್ ವಿಷಾಧ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್,ಸಾಂಸ್ಕೃತಿ,ಕ್ರೀಡಾ,ಯುವರೆಡ್ ಕ್ರಾಸ್,ರೋವರ್ಸ್ ,ಐಕ್ಯೂಎಸಿ,ಸಮಿತಿಗಳ ಉದ್ಘಾಟನಾ ಹಾಗೂ ಪ್ರಥಮವರ್ಷದ ವಿದ್ಯಾರ್ಥಿಗಳಿಗೆ ಸ್ವಾಗ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸೆಮಿಸ್ಟರ್ ಪದ್ದತಿಯಿಂದ ವಿದ್ಯಾರ್ಥಿಗಳಿಗೆ ಸಮಯವಿಲ್ಲದೆ ಬಿಕ್ಕಟ್ಟು ಎದುರಾಗಿ ಪಠ್ಯೇತರ ಚಟುವಟಿಕೆಗಳಿಗೆ ಅಡಚಣೆಯಾಗಿದೆ.ಪದವಿ ಶಿಕ್ಷಣ ಪ್ರಮಾಣಪತ್ರಗಳ ಕಡತವಾಗದೆ ಕಾರ್ಯಕ್ಷಮತೆ ಆಧಾರಿತ ಶಿಕ್ಷಣವಾಗಿ ರೂಪುಗೊಳ್ಳಬೇಕು.ಮೆದುಳಿಗೆ ಅಗತ್ಯವಿರುವ ಆಲೋಚನೆ,ಕಾಲೇಜುಗಳಲ್ಲಿ ಆಯಾ ಕೋರ್ಸ್ ನ ಪುಸ್ತಕಗಳ ಪರಿಪೂರ್ಣ ಅಧ್ಯಯನ ಅವಶ್ಯಕತೆಯಿದೆ ಎಂದು ಹೇಳಿದರು.
‘ಸ್ವಾತಂತ್ರ್ಯ ದೊರೆತು 75 ವರ್ಷ ಗತಿಸಿದರೂ ದೇಶದಲ್ಲಿ ಶೋಷಣೆ,ಕೋಮುವಾದ,ಅತ್ಯಾಚಾರದಂತಹ ವಿಕೃತಿಗಳು ತಾಂಡವಾಡುತ್ತಿವೆ.ಬಹುತ್ವ ದೇಶದ ಸಂಸ್ಕೃತಿಯ ಹೃದಯವಾಗಿದೆ,ಭಾಷೆ,ಧರ್ಮ,ಜಾತಿ ಬೇರೆಬೇರೆಯಾದರೂ ಭಾವನೆಗಳು ಏಕರೂಪವಾಗಿವೆ.ಸಮಾಜದಲ್ಲಿ
ಜಾತಿ, ಧರ್ಮಗಳ ರಕ್ಷಣೆಗಿಂತ ಮನುಷ್ಯನ ಜೀವದ ರಕ್ಷಣೆಯಾಗಬೇಕು.ಹದಿಹರೆಯದ ವಯಸ್ಸಿನಲ್ಲಿ ಮತ್ತೊಬ್ಬರ ನೋವಿಗೆ ಮಿಡಿಯುವ ಹೃದಯವಾಗಬೇಕು.ಜಾತ್ಯಾತೀತ,ಧರ್ಮಾತೀತವಾಗಿ ಹೊಸನಾಡು ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
‘ದೇಶದಲ್ಲಿ ಶೈಕ್ಷಣಿಕ,ಆರ್ಥಿಕ,ರಾಜಕೀಯ ವ್ಯವಸ್ಥೆ ಹೆಳವನ ಹೆಗಲ ಮೇಲೆ ಕುರುಡ ಕುಳಿತಂತಾಗಿದೆ.ಅದು ಬದಲಾಗಿ ಕುರುಡನ ಹೆಗಲಮೇಲೆ ಹೆಳವನು ಕುಳಿತು ದಾರಿತೋರಿಸಬೇಕು ಎಂದು ನಿದರ್ಶನನೀಡಿದರು.
ಪ್ರಾಂಶುಪಾಲ ಡಾ.ರಂಗಪ್ಪ ಮಾತನಾಡಿ,’ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಕಾಲಾಹರಣಮಾಡದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ವ್ಯಾಸಂಗದಜೊತೆಗೆ ಸ್ಪರ್ಧಾತ್ಮಕಪರೀಕ್ಷೆಗಳನ್ನು ಎದುರಿಸುವ ಕೌಶಲ ಗಳಿಸಬೇಕು ಎಂದು ಸಲಹೆನೀಡಿದರು.
ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ರಾಜೇಶ್ವರಿ ಪೂಜಾರ್,ಸಹಾಯಕ ಪ್ರಾಧ್ಯಾಪಕರಾದ ಚೈತ್ರಾ,ವಿದ್ಯಾಶ್ರೀ,ಸಲ್ಮಾಬಾನು,ಪ್ರಸಾದ್, ಮೌನೇಶ್,ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ವೆಂಕಟೇಶ್,ಉಪನ್ಯಾಸಕರಾದ ಬಸವರಾಜ್,ಧನಂಜಯ್,ಅಜ್ಜಪ್ಪ,ಶ್ವೇತಾ,ಚಂದ್ರಪ್ರಭಾ,ಅಮರೇಶ್,ಸ್ವಾಮಿ ಸೇರಿದಂತೆ ಇದ್ದರು.