: ಸರ್ಕಾರಿ ಆಸ್ಪತ್ರೆಗೆ ಶಾಸಕ ಬಿ.ದೇವೇಂದ್ರಪ್ಪ ದಿಢೀರ್ ಭೇಟಿ ಸಿಬ್ಬಂದಿಗೆ ತರಾಟೆ
ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಸಮಾಧಾನ ಸಿನೀಯರ್ ಲ್ಯಾಬ್ ಟೆಕ್ನಿಷಿನ್ ಮಹಾದೇವಪ್ಪಗೆ ಹಿಗ್ಗಾ ಮುಗ್ಗಾ ತರಾಟೆ
ಸುದ್ದಿ ಜಗಳೂರು
ತಾಲ್ಲೂಕು ಸರ್ಕಾರಿ ಆಸ್ಪತ್ರೆ ಗೆ ಸೋಮವಾರ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು ವೈದ್ಯರುಗಳು ಸರಿಯಾದ ರೀತಿ ಚಿಕಿತ್ಸೆ ಸೌಲಭ್ಯ ಒದಗಿಸುತ್ತಾರೆಯೆ ಇಲ್ಲವೆ ಎಂಬುದನ್ನು ಖದ್ದು ತಾವೇ ದಿಢೀರನೆ ಭೇಟಿ ನೀಡಿ ಪರಿಶೀಲಿಸಿದರು
ಜಗಳೂರು ಹಿಂದೂಳಿದ ಪ್ರದೇಶ ಇಲ್ಲಿ ಬರುವಂತ ರೋಗಿಗಳು ಬಡ ವರ್ಗದ ಜನರಾಗಿದ್ದು ಸರ್ಕಾರದ ಉಚಿತ ಚಿಕಿತ್ಸೆ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸಿಗುವಂತೆ ಕೆಲಸ ಮಾಡಿ ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದುದು. ಈ ವೃತ್ತಿಯಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿದರೆ ಸಸ್ಪೆಂಡ್ ಮಾಡಿಸುವೆ . ವೈದ್ಯಕೀಯ ವೃತ್ತಿಯನ್ನು ಸೇವೆಯೆಂದು ಪರಿಗಣಿಸಬೇಕು. ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು’ಎಂದು ವೈದ್ಯರುನ್ನು ಮತ್ತು ಸಿಬ್ಬಂದಿಗಳುನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಸಮಾಧಾನ ಹೊರಹಾಕಿದರು . ಅಶುಚಿತ್ವ ಗಬ್ಬೆದ್ದು ನಾರುತ್ತಿರುವ ಶೌಚಾಲಯ .ಜನ ಔಷಧಿ ಮಳಿಗೆ ಸದಾ ಬಾಗಿಲು ಹಾಕಿರುವುದನ್ನ ಖಚಿತ ಮಹಿತಿಯೊಂದಿಗೆ ಗಮನಿಸಿದ್ದೆನೆ ..ಮೆನೋ ಪ್ರಕಾರ ರೋಗಿಗಳಿಗೆ ವಿತರಿಸುವ ಆಹಾರ ಕಳಪೆಯಾಗಿದ್ದು ಸಮಯಕ್ಕೆ ಸರಿಯಾಗಿ ಬಾಳೆ ಹಣ್ಣು ಮೊಟ್ಟೆ ಊಟ ಸರಿಯಾದ ರೀತಿ ನೀಡುತ್ತಿಲ್ಲ ಎಂಬ ಆರೋಪಗಳಿವೆ ಟೆಂಡರ್ ದಾರರುನ್ನು ಕರೆಸುವಂತೆ ಆಡಳಿತ ಅಧಿಕಾರಿ ಷಣ್ಮುಖಪ್ಪರವರಿಗೆ ಸೂಚನೆ ನೀಡಿದರು .ಆಹಾರ ವಿತರಿಸುವ ಟೆಂಡರ್ ದಾರ ಸ್ವಂದಿಸುತ್ತಿಲ್ಲ ಬದಲಾವಣೆ ಮಾಡಿ ಬೇರೆ ಟೆಂಡರ್ ಪ್ರಕ್ರಿಯೆ ಕರೆದು ಸರಿಯಾದ ರೀತಿ ನಿರ್ವಹಣೆ ಮಾಡಿ ಎಂದ ಅವರು ಸ್ಥಳದಲ್ಲಿಯೇ ಜಿಲ್ಲಾ ಡಿ ಎಚ್ ಓ ಅಧಿಕಾರಿಗೆ ಕರೆ ಮೂಲಕ ಮಾತನಾಡಿ ಇಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಇಲ್ಲದೆ ಹೋದರೆ ಮುಂಬರುವ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಇಲ್ಲಿನ ಆಡಳಿತಾಧಿಕಾರಿ ಹೊಣೆ ಹೊತ್ತು ಅಮಾನತ್ತು ಮಾಡಲು ಪತ್ರ ಬರೆಯುವೆ ಎಂದರು
ನನ್ನ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಶಿಕ್ಷಣ ಹಾಗೂ ಸ್ವಚ್ಛ ಪರಿಸರ ಒದಗಿಸಿ ಕೊಡುವ ಕಾರ್ಯಕ್ಕೆ ಆದ್ಯತೆ ನೀಡುವಂತೆ ಇಲ್ಲಿನ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿ ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಸಂಕಲ್ಪವಿದೆ .ಶಾಸಕರು.
ಲ್ಯಾಬ್ ನಲ್ಲಿ ಸಿಗುವಂತ ಎಲ್ಲಾ ಪರೀಕ್ಷೆಗಳು ಸಹ ಸಾರ್ವಜನಿಕರಿಗೆ ಸಿಗುವಂತೆ ನಿಗಾ ವಹಿಸುವಂತೆ ಸಿನೀಯರ್ ಲ್ಯಾಬ್ ಟೆಕ್ನಿನೆಷೀನ್ ಮಹಾದೇವಪ್ಪರವರಿಗೆ ತರಾಟೆ ತೆಗೆದುಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಲ್ಯಾಬ್ , ಸಿಬ್ಬಂದಿಗಳು ಎಲ್ಲಿ ಎಂದು ಪ್ರಶ್ನೆಸಿದರು
ನಂತರ ಆಸ್ಪತ್ರೆಯಲ್ಲಿ ಸಂಚರಿಸಿ ವಾರ್ಡುಗಳು, ರಕ್ತ ತಪಾಸಣೆ ವಿಭಾಗ, ವಿವಿಧ ವಿಭಾಗಗಳನ್ನು ವೀಕ್ಷಣೆ ಮಾಡಿದರು. .
ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದರು ಸಭೆಯಲ್ಲಿ ನೂತನವಾಗಿ ಶಾಸಕರ ಸೂಚನೆ ಮೇರೆಗೆ ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶನವಾಗಿರುವ ಸಮಿತಿ ಸದಸ್ಯರಿಗೆ ಸನ್ಮಾನಿಸಿ ಗೌರಸಿದರು ಪ್ರಮುಖವಾಗಿ ಬರಬೇಕಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದು ಕಂಡು ಬಂದಿತು . ಮುಂದಿನ ದಿನಗಳಲ್ಲಿ ವ್ಯವಸ್ಥೆವಾಗಿ ಸಭೆ ಕರೆದು ಆಸ್ಪತ್ರೆ ಲೋಪದೋಷಗಳನ್ನು ಸರಿಪಡಿಸಲು ಎಲ್ಲಾ ಸದಸ್ಯರು ಸಿಬ್ಬಂದಿಗಳು ಸಹಕರಿಸುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿ ಷಣ್ಮುಖಪ್ಪ.ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎ ಎಲ್ ತಿಪ್ಪೇಸ್ವಾಮಿ..ಆಸ್ಪತ್ರೆ ಸಿಬ್ಬಂದಿಗಳಾದ ಪರಮೇಶ್ವರಪ್ಪ. ಸುರೇಶ್ ಬಾಬು.ನೂತನವಾಗಿ ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶಕರಾಗಿ ಅಯ್ಕೆಯಾಗಿರುವ .ಟಿ ಸಿದ್ದೇಶ್. ಕೆ ಎಸ್.ರೂಪಾಶ್ರೀ. ಹೆಚ್.ಬಿ. ಬರಕತ್ ಹಾಲಿ.ಎಸ್. ಪ್ರದೀಪ್ ದಾದಪೀರ್ .ಶಾಸಕರ ಆಪ್ತಸಹಾಯಕ ಮಧು.ಮಹಮದ್ ಗೌಸ್ ಸೇರಿದಂತೆ ಹಾಜುರಿದ್ದರು.