ಶಿಕ್ಷಕರು ಜಕ್ಕಣಚಾರ್ಯರಂತೆ ಉತ್ತಮ ಶಿಲ್ಪಿಗಳಾಗಿ ವಿಧ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ಶೈಕ್ಷಣಿಕ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಿ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನ ಗುರುತಿಸಿ ಸುಂದರ ಮೂರ್ತಿಗಳನ್ನಾಗಿ ಮಾಡಿ ಶಾಸಕ ಬಿ.ದೇವೇಂದ್ರಪ್ಪ ಸಲಹೇ ನೀಡಿದರು
ಸುದ್ದಿ:-ಜಗಳೂರು
ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಹಾಗೂ ಪ್ರೌಢಶಾಲಾ ಅಂಗಳದಲ್ಲಿ ಸೋಮವಾರ ನಡೆದ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಮಹಾನೀಯರ ಕಥೆಗಳ ಮೂಲಕ ಭವಿಷ್ಯ ರೂಪಿಸುವಂತಾಗಬೇಕೆಂದರು . ಪ್ರತಿಯೊಂದು ಮಕ್ಕಳಲ್ಲಿ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅಂತಹ ಪ್ರತಿಭೆ ಹೊರತರಲು ಇಂತಹ ಕಾರ್ಯಕ್ರಮಗಳು ಮಕ್ಕಳ ಪಾಲಿಗೆ ವರವಾಗಿವೆ ಶ್ಲಾಘನೀಯ ವ್ಯಕ್ತಪಡಿಸಿದರು..
ಪ್ರತಿಯೊಂದು ಶಾಲೆಗಳ ಮಕ್ಕಳು ನಮ್ಮ ಮಕ್ಕಳೇ ಎನ್ನುವ ಮನೋಭಾವದಿಂದ ಅವರ ಕಲೆಗೆ ಧಕ್ಕೆಯಾಗದಂತೆ ತೀರ್ಪುಗಾರರು ನಿರ್ಣಯಸಬೇಕು . ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಜಾರಿಗೆ ತಂದಿರುವುದು ಮಕ್ಕಳ ಪಾಲಿಗೆ ಒಂದು ಆಶಾಕಿರಣವಾಗಿದೆ ಎಂದು ಹೇಳಿದರು.
ಡಯಟ್ ಪ್ರಾಂಶುಪಾಲರಾದ ಶ್ರೀಮತಿ ಗೀತಾಮ್ಮ ಮಾತನಾಡಿ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರಲ್ಲಿ ಇರುವ ಪ್ರತಿಭೆಯನ್ನು ಗುರುತಿಸುವ ನಿರ್ಣಾಯಕರು ಉತ್ತಮ ಪ್ರತಿಭೆಗೆ ಪ್ರೋತ್ಸಾಹ ನೀಡಿದಾಗ ಸಮಾಜದಲ್ಲಿ ಅವರ ಪ್ರತಿಭೆ ಬೆಳೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಸಹಕಾರಿಯಾಗುವುದು ಎಂದರು.
ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ ಮಾತನಾಡಿದರು ಮಕ್ಕಳ ಮನಸ್ಸು ಮಲ್ಲಿಗೆಯ ಮಗ್ಗುಯಿದ್ದಂತೆ ನಾವು ಯಾವ ರೀತಿ ಅರಳುಸುತ್ತೆವೆ ಆ ರೀತಿ ಅರಳುವುದು ಉತ್ತಮ ನಾಗರೀಕ ಪ್ರಪಂಚ ಸೃಷ್ಠಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಸಾದ್ಯ ಎಂದು ಅಭಿಪ್ರಾಯಟ್ಟರು . ನಮ್ಮ ಕಾಲದ ಶಿಕ್ಷಣ ವ್ಯವಸ್ಥೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮೂಲ ಶಿಕ್ಷಣ ಪದ್ದತಿ ಮರೆಯಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಸುಧಾರಿಸಲು ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಎಂದರು.
,ಬಿ.ಇ.ಓ ಹಾಲಮೂರ್ತಿ ಪ್ರಾಸ್ತವಿಕವಾಗಿ ಮಾತನಾಡಿದರು ಪ್ರತಿಯೊಬ್ಬ ಮಕ್ಕಳು ಕೂಡ ವಿಭಿನ್ನ ಕಲೆ ಹೊಂದಿರುತ್ತಾರೆ. ಅದನ್ನು ಪರಿಚಯಿಸುವ ಕೆಲಸ ನಾವೆಲ್ಲರೂ ಮಾಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಲ್ ತಿಪ್ಪೇಸ್ವಾಮಿ ಮಾತನಾಡಿ ಗ್ರಾಮೀಣ ಕನ್ನಡ ಶಾಲಾ ವಿಧ್ಯಾರ್ಥಿಗಳಲ್ಲಿ ವಿಶಿಷ್ಟ ಪ್ರತಿಭೆಯಿದ್ದು ಅವುಗಳನ್ನು ಗುರುತಿಸಿ ಜಿಲ್ಲಾ ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ಮಾರ್ಗದರಶನ ಮಾಡುವ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಜೇತ ಮಕ್ಕಳಿಗೆ ಶಾಸಕರಿಂದ ಪ್ರಶಸ್ತಿ ವಿತರಿಸಿ ಪ್ರೋತ್ಸಾಹ ನೀಡಿದರು
ಕಾರ್ಯಕ್ರಮದಲ್ಲಿ ಸಿ ಅರ್ ಪಿ ಆಂಜನೇಯ ನಿರೂಪಣೆ ಮಾಡಿದರು .ಶಿಕ್ಷಕರಾದ ಸತೀಶ್ ರವರು ಸ್ವಾಗತಿಸಿ ಶ್ರೀಮತಿ ಆಶಾಲತಾ ಪ್ರಾಥಿಸಿದರು
ಈ ಸಂದರ್ಭದಲ್ಲಿ ಪಪಂ ಅದ್ಯಕ್ಷ ನವೀನ್ ಕುಮಾರ್ .ಸರ್ಕಾರಿ ಪ್ರೌಢಶಾಲಾ ಮುಖ್ಯಸ್ಥರಾದ ಡಿ.ಡಿ ಹಾಲಪ್ಪ. ಪಪಂ ಉಪಾಧ್ಯಕ್ಷರ ಪತಿ ಒಬಣ್ಣ ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಮಂಜಣ್ಣ.ದೈಹಿಕ ಪರಿವೀಕ್ಷಕ ಸುರೇಶ್ ರೆಡ್ಡಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಕಲ್ಲಿನಾಥ. .ಸಿ ಆರ್ ಪಿ ಮಂಜಣ್ಣ ವೀರೇಶ್.ರಾಜ್ ಕೋಟಿ