ಜೀವನ ಭದ್ರತೆ, ಸಂಬಳ ಹೆಚ್ಚಿಳ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ
ಗ್ರಾಮ ಪಂಚಾಯತ್ ಸಮುದಾಯ ಮಹಿಳಾ
ಒಕ್ಕೂಟದ ಪ್ರತಿಭಟನೆ, ಧರಣಿ ಎಚ್ಚರಿಕೆ …
ದಾವಣಗೆರೆ ಡಿ 3
ರಾಜ್ಯದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ
ಮಹಿಳಾ ಸಂಪನ್ಮೂಲ ಸಮುದಾಯ ವ್ಯಕ್ತಿಗಳ
ಬೇಡಿಕೆಗಳ ಈಡೇರಿಕೆಗೆ
ಒತ್ತಾಯಿಸಿ ಇಂದು ದಾವಣಗೆರೆ ಜಿಲ್ಲಾಧಿಕಾರಿಗಳ.ಕಚೇರಿಯ ಮುಂದೆ ನೂರಾರು ಮಹಿಳಾ ಪ್ರತಿನಿಧಿಗಳು
ಈ ದಿನ ಬೆಳಗ್ಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ
ಬೃಹತ್ ಪ್ರತಿಭಟನೆ ನಡೆಸಿ ಮನವಿ ಪತ್ರ ಅರ್ಪಿಸಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮದ ಸಮುದಾಯ ಬರಹಗಾರರು,
ಮಹಿಳಾ ಸಂಪನ್ಮೂಲ ವ್ಯಕ್ತಿಗಳು ಕೇವಲ ಮೂರಂಕಿ ಅಂದರೆ 500 ರೂಪಾಯಿಗಳ
ಗೌರವದನ ಪಡೆಯುತ್ತಿದ್ದು ಇತ್ತೀಚೆಗೆ ಹೋರಾಟದ ಫಲವಾಗಿ ಸರ್ಕಾರ ಸ್ವಲ್ಪ ಸಂಬಳ ಹೆಚ್ಚಳ ಮಾಡಿದ್ದರೂ ಕೂಡ ಅದನ್ನು ಪಡೆಯಲು S H G ಆಧಾರದ ಮೇಲೆ ಗೌರವದರ ಪಡೆಯುವಂತೆ ಸರ್ಕಾರ ಆದೇಶ ನೀಡಿದ್ದು ಈ ಆದೇಶದಿಂದ ಸಂಪನ್ಮೂಲ ವ್ಯಕ್ತಿಗಳು ಮತ್ತು ಬರಹಗಾರರಿಗೆ ಮಾರಕವಾಗಿದೆ.
ಅಲ್ಲದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ಕಿರುಕುಳ,
ತಾರತಮ್ಯ ಇದನ್ನು ಮಹಿಳಾ ಪ್ರತಿನಿಧಿಗಳು ಹಲವಾರು ದಿನಗಳಿಂದ ಅನುಭವಿಸುವಂತಾಗಿದೆ.
ಅವರಿಗೆ ಜೀವನ ಭದ್ರತೆ ಇಲ್ಲ.
ಅಲ್ಲದೆ ಅವರು ಹೆರಿಗೆ ಆಗಿ ಬಾಣಂತಿಯರು ಆದಾಗ ಯಾವುದೇ ರಜೆ ಸೌಲಭ್ಯವಿರುವುದಿಲ್ಲ.
ಯಾವುದೇ ಪಿಂಚಣಿ ಮತ್ತು ಜೀವನ ಭದ್ರತೆ ಸೌಲಭ್ಯ ಕೂಡ ಇಲ್ಲ,
ಕಾರ್ಯನಿರ್ವಹಿಸುವಾಗ ಅವರ ಜೀವಕ್ಕೆ ಅಪಾಯ ಬಂದಲ್ಲಿ ಯಾವುದೇ ಭದ್ರತೆ ಕೂಡ ಇಲ್ಲ.
ಅವರಿಗೆ ಯಾವುದೇ ಪರಿಹಾರವಾಗಿ ಮೂರರಿಂದ ಐದು ಲಕ್ಷದವರೆಗೂ ಕೂಡ
ಪರಿಹಾರ ಧನದ ಬೇಡಿಕೆ ಕೂಡ ಇಲ್ಲ
ಈ ಎಲ್ಲಾ ಕಾರಣಗಳಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ
ಮಹಿಳಾ ಸ್ತ್ರೀ ಶಕ್ತಿ ಒಕ್ಕೂಟದ ಸಮುದಾಯ ಬರಹಗಾರ ವ್ಯಕ್ತಿಗಳ ಜೀವನ ಭದ್ರತೆ ಹಾಗೂ ಸಂಬಳವನ್ನು ಕನಿಷ್ಠ 15 ಸಾವಿರಕ್ಕೆ ಹೆಚ್ಚಳ ಮಾಡಿ
ಸಹಾಯ ಮಾಡಿ,ಅವರ ನೆರವಿಗೆ ಬರುವಂತೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ಮಹಿಳಾ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು
ಬೃಹತ್ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಅಧ್ಯಕ್ಷೆ
ಎ.ಸುಶೀಲ , ದೊಡ್ಡಬಾತಿ ಸಮೃದ್ಧಿಸಂಜೀವಿನಿ ಒಕ್ಕೂಟದ ಗ್ರಾಮ ಪಂಚಾಯತಿಯ ಕೃಷಿ ಸಖಿ
ಸೇರಿದಂತೆ ಒಕ್ಕೂಟದ ಮುಖ್ಯಸ್ಥೆ ಶ್ರೀಮತಿ ನೀಲಾ ಲೋಕಿಕೆರೆ, ಶ್ರೀಮತಿ ಸುನಿತಾ ಅಶೋಕ್ ಲೋಕಿಕೆರೆ,
ಮತ್ತಿತರೆ ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಘೋಷಣೆ ಕೂಗಿ
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ
ನೂರಾರು ಮಹಿಳಾ ಪ್ರತಿನಿಧಿಗಳು ಭಾಗವಸಿದ್ದರು. * ವರದಿ: ಪುರಂದರ ಲೋಕಿಕೆರೆ…
ಹಿರಿಯ ಪತ್ರಕರ್ತರು.