ದಾವಣಗೆರೆ ಡಿ. 9
ಜೈ ಜವಾನ್….
ಜೈ ಕಿಸ್ಸಾನ್…..
ಪ್ರಾಣ ಒತ್ತೇ ಇಟ್ಟು, ನಿದ್ರೆ ಆಹಾರವನ್ನು ಲೆಕ್ಕಿಸದೆ
ಈ ದೇಶದ ಗಡಿ ಕಾಯುವ ಯೋಧ….ಹಾಗೂ
ಹಗಲು ರಾತ್ರಿ ಬೆವರು ಹರಿಸಿ
ಅನ್ನ ನೀಡೋ…ರೈತರೇ ನಮ್ಮ ನಿಜವಾದ ನಾಯಕರು.
ನಾವೆಲ್ಲಾ ಅವ್ರ
ಋಣದಲ್ಲಿದ್ದೇವೆ. ಅಲ್ಲವೇ ?.
ರೋಗಿಗಳಿಗೆ ಅರೋಗ್ಯ ನೀಡೋ
ತಾನಾಯ್ತು,ತನ್ನ ಮನೆಯಾಯ್ತು ಎನ್ನುವ…
ನೆಮ್ಮದಿ ಜೀವನ ನಡೆಸುವುದ ಬಿಟ್ಟು…
ದೇಶ ಮೊದಲು, ಈ ದೇಹ ದೇಶ ಸೇವೆಗೆ…
ಅನ್ನೋ ದೃಢ ಮನಸು ಅದ್ರಲ್ಲೂ
ಒಂದ್ ಹೆಣ್ಣಾಗಿ, ಹರೆಯದ ಯುವತಿ
ಲೈಫ್ ಪಾರ್ಟ್ನರ್, ಎಂಜಾಯ್
ವೀಕ್ ಎಂಡ್ ಪಾರ್ಟಿ ಅಂಥ
ಯೋಚಿಸೋ.. ಈಗಿನ ಕಾಲದ ಹುಡುಗೀರು ಇರುವಾಗ
ದೇಶ ಸೇವೆ ಮಾಡ್ತೀನಿ, ಸೈನ್ಯ ಸೇರುವೆ
ಅಂದ್ರೆ ಯಾವ್ ತಂದೆ ತಾಯಿ ಒಪ್ಪಿಯಾರು..??
ಆದ್ರೂ ಆಕೆಯ ಅಸೆ, ದೇಶ ಸೇವೆ ಮಾಡುವ ದೃಢ ನಿರ್ಧಾರಕ್ಕೆ ಅಡ್ಡಿ ಬರದೇ
ಗಟ್ಟಿ ಮನಸು ಮಾಡಿ ಕಳಿಸಿ ಕೊಟ್ಟ ಪಾಲಕರು..
ಮನೆಯವರ ಆಸೆಗೆ ಒತ್ತಾಸೆ ನೀಡಿ
ಇಂತಹ ಛಲದಿಂದ…ಗಡಿ ಭದ್ರತಾ ಪಡೆಯ
ಮೊದಲ ಮಹಿಳಾ ಅಸಿಸ್ಟೆಂಟ್ ಕಮಾಂಡೆಂಟ್
ಅಗಿ…
ರಾಜ್ಯ ಅಷ್ಟೇ ಅಲ್ಲ ದೇಶವೇ
ಹೆಮ್ಮೆ ಪಡುವ ಸಾಧನೆ ಮಾಡುತ್ತಿರುವ
ದಾವಣಗೆರೆಯ ಹೆಮ್ಮೆಯ ಪುತ್ರಿ
ಡಾ. ಮೃದುಲ ಎಂ.ಎಲ್
ದಕ್ಷಿಣ ಭಾರತದ ಏಕೈಕ ಮಹಿಳಾ
ಅಸಿಸ್ಟೆಂಟ್ ಕಮಾಂಡೆಂಟ್… ಏಕೈಕ
ಯುವ ಮಹಿಳೆ ಡಾ. ಮೃದುಲ.
ಏಪ್ರಿಲ್ 16ರ ಏಕತಾ ದಿನದಂದು
ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ
ಇಡೀ ಭದ್ರತಾ ಪಡೆಯ ಬಿಎಸ್ಎಫ್ ಪಡೆಗೆ
ಇಡೀ ಗಡಿ ಭದ್ರತ ತಂಡದ
ಪಾಸಿಂಗ್ ಔಟ್ ಪೆರೇಡ್ ನಲ್ಲಿ… ಇಡೀ ದಕ್ಷಿಣ ಭಾರತದ ಮೊದಲ ಮಹಿಳಾ ಕಮಾಂಡರ್ ಅಗಿ ಅದ್ವಿತೀಯ ತನ್ನ ಕಂಚಿನ ಕಂಠದಿಂದ
ನಿಖರವಾದ ಕಾಷೆನ್ ನೀಡಿ….
ಧ್ವಜ ವಂದನೆ, ಪ್ರಧಾನಿ ನರೇಂದ್ರ ಮೋದಿಯವರಿಗೆ
ಗೌರವ ಪಥ ಸಂಚಲನೆ ಮೂಲಕ ವಂದನೆ ಸಲ್ಲಿಸಿದ ಕೀರ್ತಿ ಮೃದುಲಾ ಳದ್ದು,
ಇಡೀ ದಕ್ಷಿಣ ಭಾರತ ಮಾತ್ರ ವಲ್ಲ
ಒಟ್ಟಾರೆ ಭಾರತ ದೇಶದ ನಾವೆಲ್ಲಾ
ಹೆಮ್ಮೆ ಪಡುವ ಪುತ್ರಿ
ದಾವಣಗೆರೆಯ ಮೃದುಲ…
ವೈದ್ಯ ವೃತ್ತಿಯಲ್ಲಿ ನೆಮ್ಮದಿಯ ಕಂಡುಕೊಳ್ಳುವ
ಎಲ್ಲಾ ಸಾಧ್ಯತೆಗಳನ್ನು ಬದಿಗೊತ್ತಿ ,
ದೇಶದ ಸೈನ್ಯದಲ್ಲಿ ದೇಶ ಸೇವೆ ಮಾಡುವ ಒಂದೇ ಛಲದಿಂದ ಇವತ್ತು ಭಾರತದ ಕೀರ್ತಿ
ಪತಾಕೆಯನ್ನು ಹಾರಿಸಿದ ಮೊದಲ
ಅಸಿಸ್ಟೆಂಟ್ ಮಹಿಳಾ ಕಮಂಡರ್ ಡಾ. ಮೃದುಲ
ನೆನ್ನೆ ತಾನೇ ರಾಜಸ್ತಾನ್ ಜೋದ್ ಪುರ್
ನಲ್ಲಿ ಡಿ, 8 ರಂದು ನೆಡೆದ 60 ನೇ ವರ್ಷದ “ಗಡಿ ಭದ್ರತಾ ಪಡೆಯ ಸಂಸ್ಥಾಪನ ದಿವಸ್ “
ನಲ್ಲಿ ಈವರೆಗೂ ಪುರುಷ ಕಮಾಂಡರ್ ಆಗಿ ಆಯ್ಕೆ ಹೊಂದಿ 59 ಭಾರಿ ಪುರುಷ ಕಮಾಂಡರ್ ಪಥ ಸಂಚಲನ ನಡೆಸುತ್ತಿದ್ದ ವಾಡಿಕೆ ಯನ್ನ ಬದಲಿಸಿ,… ಪುರುಷ ರಿಗಿಂತ
ಮಹಿಳೆ ಕೂಡ ಸಮರ್ಥಳು ಎಂಬುದನ್ನು ಸಾಬೀತು ಪಡಿಸಿದ್ದು,
ತನ್ನ ಕೆಚ್ಚೆದೆಯ ಧೈರ್ಯದಿಂದ
ಈ ಭಾರಿ ದಾವಣಗೆರೆಯ ಹೆಮ್ಮೆಯ ಪುತ್ರಿ ಕನ್ನಡ ನಾಡಿನ ಕುವರಿ… ಡಾ||ಮೃದುಲ.60 ನೇ ಸಂಸ್ಥಾಪನಾ ದಿನದ
BSF ಪಡೆಯ ಮುಂದಾಳತ್ವ ವಹಿಸಿದ ಹೆಗ್ಗಳಿಕೆ
ಈಕೆಯದು… ಎಂದರೆ ನಮಗೆಷ್ಟು ಖುಷಿ,
ಸಂತಸ ಅಲ್ಲವೇ….!! ಮೃದುಲ
ಬೇರೆ ಯಾರೂ ಅಲ್ಲ… ನಮ್ಮ
ದಾವಣಗೆರೆ ಎವಿಕೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದಿಳ್ಯಪ್ಪ, ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಶ್ರೀಮತಿ ಶಾಂತಮ್ಮ ದಿಳ್ಯಪ್ಪ, ವಿದ್ಯಾನಗರದ ಡಾ|| ವಿಜಯಶ್ರೀ,ಎಚ್ ವೈ ಲಿಂಗರಾಜ್ ಅವರ ಏಕೈಕ ಪುತ್ರಿ….
ದಾವಣಗೆರೆ ಮಹಾನಗರ ಪಾಲಿಕೆಯ
ಆರೋಗ್ಯ ಅಧಿಕಾರಿ ಡಾಕ್ಟರ್ ಚಂದ್ರಮೋಹನ್ ಚಂದನ ಇವರ ಅಣ್ಣನ ಮಗಳು
ದಾವಣಗೆರೆಯ ಕೀರ್ತಿಪತಾಕೆ ಹಾರಿಸಿ
ಇಡೀ ಭಾರತದ ಭೂಪಟದಲ್ಲಿ ಗುರುತಿಸಿದ
ಮಹಿಳಾ ಕಮಾಂಟೆಂಟ್ ಆಗಿ
ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಮೃದುಲ ..ಅವರ ಅಜ್ಜಿ ಶಾಂತಮ್ಮ ದಿಳ್ಳ್ಯೆಪ್ಪ ಹೇಳುವಂತೆ ಚಿಕ್ಕ ವಯಸ್ಸಿನಲ್ಲೇ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದ ಇವರು ದಾವಣಗೆರೆಯ ಮಾಡರ್ನ್ ಸ್ಕೂಲ್ ವಿದ್ಯಾರ್ಥಿ,ಪಿಯುಸಿ ಬೆಂಗಳೂರಿನಲ್ಲಿ ಓದಿ ಕೋಲಾರದಲ್ಲಿ ಎಂಬಿಬಿಎಸ್ ಮುಗಿಸಿ ವೈದ್ಯ ವೃತ್ತಿ ಮಾಡಬೇಕಾದವಳು ದೇಶ ಸೇವೆಯಲ್ಲಿ ತೊಡಗಿರುವು ಒಂದು ಹೆಮ್ಮೆ.
ಈಗಿನ ಹೈ ಪೈ… ಸ್ಮಾರ್ಟ್ ಫೋನ್
ಹಿಡಿದು,ಓಡಾಡುವ ಟಿಪ್ ಟಾಪ್ ಹುಡುಗೀರ್ ಗಿಂತ ಇವಳು
ಭಿನ್ನ, ವಿಶೇಷ ಕೂಡ ಅಲ್ವ…!!
ಕಿರಿಯ ವಯಸ್ಸಿನಲ್ಲೇ ಹಿರಿಯ
ಸ್ಥಾನಕ್ಕೇರಿ…. ದೇಶವೆ ಅಚ್ಚರಿ ಹಾಗೂ
ಸೋಜಿಗ ಪಡೋ ದಾರಿಯಲ್ಲಿ
ಸಾಗುತಿರುವ ಮೃದುಲ… ಗೊಂದು
ಹ್ಯಾಟ್ಸಪ್… ನಮದೊಂದು ಸಲ್ಯೂಟ್,ಮುಂದೆ ಐಎಎಸ್ ಮಾಡುವ ಇವರ ಆಸೆ ಈಡೇರಲಿ ಡಾ|| ಮೃದುಲಾರಿಗೆ
ಇನ್ನು ಹೆಚ್ಚಿನ ದೇಶಕ್ಕೆ ಹೆಚ್ಚಿನ ಸೇವೆ ಇವರಿಂದಾಗಲಿ ಎಂದು ಹಾರೈಸುವ….. ನೀವು ಒಮ್ಮೆ ಇವರಿಗೆ ಶುಭ ಹಾರೈಸಿ..*ವರದಿ :ಪುರಂದರ ಲೋಕಿಕೆರೆ..ಹಿರಿಯ ಪತ್ರಕರ್ತರು.
ದಾವಣಗೆರೆ