ಜಗಳೂರಿನಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ವಿಶ್ರಾಂತ ಕನ್ನಡ ಅಧ್ಯಾಪಕರು, ಲೇಖಕರು, ವಾಗ್ಮಿಗಳು ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎ. ಬಿ. ರಾಮಚಂದ್ರಪ್ಪ ಆಯ್ಕೆ
ಪ್ರೊ. ಎ.ಬಿ ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ ಜಿಲ್ಲಾ ಕ.ಸಾ.ಪ.ಹಾಗೂ ತಾಲ್ಲೂಕು ಕ.ಸಾ.ಪ ಸಮಿತಿ ಅಂತಿಮವಾಗಿ ನಿರ್ಧರಿಸಿದೆ.
Shukradeshe news Kannada news/ Davangere/ date :07-12-2024
ದಿನಾಂಕ ಜನವರಿ 11_12 _ ರಂದು ಎರಡು ದಿನಗಳ ಕಾಲ ಜಗಳೂರು ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಈಗಾಗಲೇ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ನಾಲ್ಕು ಐದು ಬಾರಿ ಪೂರ್ವಭಾವಿ ಸಭೆ ನಡೆಸುವ ಮೂಲಕ ಸಮ್ಮೇಳನದ ಪೂರ್ವತಯಾರಿ ಚುರುಕಿನಿಂದ ಸಾಗಿದ್ದು ಅಂತಿಮವಾಗಿ ಇದೀಗ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೂಡ ಅಂತಿಮವಾಗಿ ಮಾನವ ಬಂಧುತ್ವ ವೇದಿಕೆ ಫೌಂಡೇಷನ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಪ್ರಗತಿಪರ ವಿಚಾರವಾದಿ ಪ್ರೊ. ಎ.ಬಿ ಆರ್ ರವರೇ ಸರ್ವಾದ್ಯಕ್ಷರೆಂದು ಅಂತಿಮವಾಗಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿಯಲ್ಲಿ ತಿರ್ಮಾನಿಸಲಾಗಿದೆ.ಸರ್ವಾಧ್ಯಕ್ಷರ ಆಯ್ಕೆ ಸಮಿತಿಗೆ ಜಗಳೂರಿನಿಂದ ಒಟ್ಟು ನಾಲ್ಕು ಜನರಿಂದ ಅರ್ಜಿ ಸಲ್ಲಿಕೆಯಾಗಿದ್ದವು . ಜಗಳೂರಿನ ನಿವೃತ್ತ ಉಪನ್ಯಾಸಕರಾದ ಡಿ.ಸಿ ಮಲ್ಲಿಕಾರ್ಜುನ .ಮತ್ತು ಪ್ರಗತಿಪರ ಚಿಂತಕ ಹಿರಿಯ ಪತ್ರಕರ್ತ ದೋಣಿಹಳ್ಳಿ ಗುರುಮೂರ್ತಿ ಹಾಗೂ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮತ್ತು ಸಾಹಿತಿ ಸಿ.ಎಂ ಹೊಳೆ ಬಸವೇಶ್ .ಉಪನ್ಯಾಸಕರಾದ ಸಂಗೇನಹಳ್ಳಿ ಅಶೋಕುಮಾರ್ ಜಿಲ್ಲಾ ಮಟ್ಟದಿಂದ ಪ್ರಗತಿಪರ ಚಿಂತಕ ಪ್ರೊ. ಎ.ಬಿ ರಾಮಚಂದ್ರಪ್ಪ. ಉಪನ್ಯಾಸಕ.ದಾದಪೀರ್ ನವಿಲ್ ಹಾಳ್ ಸೇರಿದಂತೆ ಒಟ್ಟು 12 ಅರ್ಜಿಗಳು ಸಲ್ಲಿಕೆಯಾಗಿದ್ದು ಇವರಲ್ಲಿ ಯಾರು ಸೂಕ್ತ ಎಂದು ಸಮಿತಿ ಅಳೆದು ತೂಗಿ ಅವರ ಸಾಹಿತ್ಯ ಕೃಷಿ ಸಾಧನೆ ಪ್ರಗತಿಪರ ಚಿಂತನೆ ಗುರುತಿಸಿ ಎ.ಬಿ ರಾಮಚಂದ್ರಪ್ಪರವರನ್ನ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಾಮದೇವಪ್ಪ ತಿಳಿಸಿದ್ದಾರೆ.
ಕಳೆದ 30 ವರ್ಷಗಳ ನಂತರ ಜಗಳೂರಿನಲ್ಲಿ ನಡೆಯುವ ದಾವಣಗೆರೆ ಜಿಲ್ಲಾ 14ನೇ ಕಸಾಪ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಪ್ರೊ. ಎ. ಬಿ. ರಾಮಚಂದ್ರಪ್ಪ ಆಯ್ಕೆ
ಜಗಳೂರಲ್ಲಿ ನಡೆಯುವ ದಾವಣಗೆರೆ ಜಿಲ್ಲಾ 14ನೇ ಕಸಾಪ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಪ್ರೊ. ಎ. ಬಿ. ರಾಮಚಂದ್ರಪ್ಪ ಅಂತಿಮ
ದಾವಣಗೆರೆ: ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಕನ್ನಡ ಅಧ್ಯಾಪಕರು, ಲೇಖಕರು, ವಾಗ್ಮಿಗಳು ಹಾಗೂ ಸಾಂಸ್ಕೃತಿಕ ಚಿಂತಕ ಪ್ರೊ.ಎ. ಬಿ. ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.
ವೈಚಾರಿಕ ಹಾಗೂ ಸಾಂಸ್ಕೃತಿಕ ಚಿಂತಕ, ಜನಪರ ಹೋರಾಟಗಾರ ಪ್ರೊ. ಎ. ಬಿ. ರಾಮಚಂದ್ರಪ್ಪನವರು 3 ದಶಕಗಳಿಗೂ ಹೆಚ್ಚಿನ ಕಾಲ ಪದವಿ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. “ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್ ಚಿಂತನೆಗಳು” ವಿಷಯದಲ್ಲಿ ಸಂಶೋಧನಾ ಮಹಾಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಹೊಂದಿದ್ದಾರೆ. ಈವರೆಗೆ ಅವರ 19 ಕೃತಿಗಳು ಪ್ರಕಟಗೊಂಡಿವೆ. ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾರೆ.
ನಿನ್ನೆ ಕುವೆಂಪು ಕನ್ನಡ ಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನದ ಕುರಿತಾಗಿ ಕೂಲಂಕಶವಾಗಿ ಚರ್ಚೆ ನಡೆಸಿ ಹಲವು ತೀರ್ಮಾನಗಳನ್ನು
ಕೈಗೊಳ್ಳಲಾಯಿತು. ಸಭೆಯಲ್ಲಿ ಭಾಗವಹಿಸಿದ ಬಹುತೇಕ ಕಾರ್ಯಕಾರಿ ಸಮಿತಿ ಸದಸ್ಯರು ಪ್ರೊ. ಎ. ಬಿ. ರಾಮಚಂದ್ರಪ್ಪ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲು ಒಲವು ತೋರಿದ್ದರಿಂದ ಸರ್ವಾಧ್ಯಕ್ಷತೆಯ ಆಯ್ಕೆ ಸುಗಮವಾಗಿ ನಡೆಯಿತು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.
ಜಗಳೂರಿನ ಶಾಸಕ ಚಿಮ್ಮನಕಟ್ಟಿ ಬಿ.ದೇವೇಂದ್ರಪ್ಪ ಅವರು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹಾಗಾಗಿ ಜನವರಿ 11 ಮತ್ತು 12 ರಂದು ಅರ್ಥಪೂರ್ಣವಾಗಿ ಸಮ್ಮೇಳನ ನಡೆಸುವುದಾಗಿ ಬಿ.ವಾಮದೇವಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾದ ಹಾಗೂ ಜಿಲ್ಲಾ ಕಸಾಪ ಪದ ನಿಮಿತ್ತ ಸದಸ್ಯ ವೀರೇಶ್ ಎಸ್ ಒಡೇನಪುರ ಆವರನ್ನು ಜಿಲ್ಲಾ ಕಸಾಪ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕಾರಿ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ದಾವಣಗೆರೆ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಗಳೂರು ತಾಲೂಕು ಅಧ್ಯಕ್ಷೆ ಕೆ.ಸುಜಾತಮ್ಮ, ಹರಿಹರ ತಾಲೂಕು ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಚನ್ನಗಿರಿ ತಾಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಹೊನ್ನಾಳಿ ತಾಲೂಕು ಅಧ್ಯಕ್ಷ ಜಿ.ಮುರಿಗೆಪ್ಪಗೌಡ, ನ್ಯಾಮತಿ ತಾಲೂಕು ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ್ ಎಸ್ ಒಡೇನಪುರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮೇಶ್ವರ ಕೆ.ಎಂ.ಸುರೇಶ್, ಪ್ರಸಾದ್ ಬಂಗೇರ, ಎಸ್.ಎಂ.ಮಲ್ಲಮ್ಮ, ಬಿ.ಎಂ.ಭೈರವೇಶ್ವರ, ಸಿ.ಕೆ.ರುದ್ರಾಕ್ಷಿ ಬಾಯಿ, ಹೆಚ್.ಕೆ.ಸತ್ಯಭಾಮ ಮಂಜುನಾಥ್, ಎ.ರಿಯಾಜ್ ಅಹಮದ್, ಎಂ.ಎ.ಸುದರ್ಶನ್, ಕೆ.ಪಿ.ಮರಿಯಾಚಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.