ಜ.16, ರಂದು ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಆಗ್ರಹಿಸಿ ಬೃಹತ್ ಕಾಲ್ನಡಿಗೆ ಜಾಥಾ
ಜಗಳೂರು ಸುದ್ದಿ:ಜ.16 ರಂದು ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಒತ್ತಾಯಿಸಿ ಜಗಳೂರಿನಿಂದ ದಾವಗೆರೆವರೆಗೆ ಬೃಹತ್ ಮಟ್ಟದ ಕಾಲ್ನಡಿಗೆ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಸಂಘಟನೆ ಮುಖಂಡ ರಾಜಪ್ಪ ವ್ಯಾಸಗೊಂಡನಹಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಕರೆದಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ದಶಕಗಳ ಕನಸಾಗಿರುವ ಕೆಎಸ್ ಆರ್ ಟಿಸಿ ಬಸ್ ಡಿಪೋ ಆರಂಭಿಸಲು ತಾಲೂಕಿನಲ್ಲಿ ವಿದ್ಯಾರ್ಥಿ ಸಂಘಟನೆಗಳು,ವಿವಿಧ ಪ್ರಗತಿಪರ ಸಂಘಟನೆಗಳು ನಿರಂತರ ಹೊರಾಟ ನಡೆಸುತ್ತಾ ಬಂದಿವೆ.ಆದರೆ ಕಳೆದ ಆಡಳಿತ ಸರ್ಕಾರಗಳು ದಾವಣಗೆರೆ,ಜಗಳೂರು ಪ್ರಮುಖ ರಸ್ತೆಗಳಿಗೆ ಬಸ್ ಗಳನ್ನು ಸಂಚರಿಸುವಂತೆ ಮಾಡುವ ಮೂಲಕ ಡಿಪೋ ಸ್ಥಾಪನೆ ಮಾಡದೆ ಭರವಸೆಯೊಂದಿಗೆ ಮೂಗಿಗೆ ತುಪ್ಪ ಹಚ್ಚಿವೆ ಎಂದು ಆರೋಪಿಸಿದರು.
ಅಖಿಲಭಾರತ ಯುವಜನ ಒಕ್ಕೂಟ ತಾಲೂಕು ಸಂಚಾಲಕ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,’ಬಸ್ ಡಿಪೋ ವಿಲ್ಲದೆ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಆಟೋ ಗಳಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.ಅಂತೆಯೇ ಸರ್ಕಾರದ ಮಹತ್ತರ ಗ್ಯಾರಂಟಿ ಯೋಜನೆಯಲ್ಲೊಂದಾದ ಶಕ್ತಿಯೋಜನೆಯಿಂದ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು ಸಮರ್ಪಕವಾಗಿ ವಂಚಿರಾಗಿದ್ದಾರೆ ಎಂದು ಹೇಳಿದರು.
ಯುವಕರ್ನಾಟಕ ವೇದಿಕೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ,ಜ.16 ರಂದು ಪಟ್ಟಣದ ಪ್ರವಾಸಿ ಮಂದಿರದಿಂದ ಸಾವಿರಾರು ಸಂಖ್ಯೆಯ ಸಾರ್ವಜನಿಕರು,ಹೊರಾಟಗಾರರು,ವಿದ್ಯಾರ್ಥಿ ಯುವಜನರ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಕ್ಕೆ ಚಾಲನೆ ಸಿಗಲಿದೆ.ಮೊದಲನೇ ದಿನ ಬಿಳಿಚೋಡು ಮಾರ್ಗದಿಂದ ಅಣಜಿಯಲ್ಲಿ ವಾಸ್ತವ್ಯ,ನಂತರ ಎರಡನೇ ದಿನ ಮಧ್ಯಾಹ್ನ ಕೆಎಸ್ ಆರ್ ಟಿಸಿ ಡಿಸಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಡಿಎಸ್ ಎಸ್ ಸಂಚಾಲಕ ಸತೀಶ್ ಮಲೆಮಾಚಿಕೆರೆ,
ಮಾತನಾಡಿ’ಕಾಲ್ನಡಿಗೆ ಜಾಥಾಕ್ಕೆ ಯಾವುದೇ ಪಕ್ಷದವರಿಂದ ದೇಣಿಗೆ ಪಡೆಯದೆ ಸಂಘಟನೆಗಳ ಸ್ವಯಂಖರ್ಚಿನಲ್ಲಿ ಸ್ವಾಭಿಮಾನದ ಹೊರಾಟ ನಡೆಸಲಾಗುತ್ತಿದೆ.ನ್ಯಾಯ ಸಿಗುವವರೆಗೂ ಹೊರಾಟ ಹಂತಹಂತವಾಗಿ ಉಗ್ರಸ್ವರೂಪ ಪಡೆಯಲಿದೆ.ಕೂಡಲೇ ಸರ್ಕಾರ ಡಿಪೋ ಆರಂಭಿಸಬೇಕು.ಹೋರಾಟಕ್ಕೆ ಪಕ್ಷಾತೀತ ವ್ಯಾಪಕ ಬೆಂಬಲವಿದೆ ಎಂದರು.
ಇದೇ ವೇಳೆ ಹೊರಾಟದ ಕರಪತ್ರ ಬಿಡುಗಡೆಗೊಳಿಸಲಾಯಿತು.
ಹೋರಾಟಕ್ಕೆ ಬಂದೋಬಸ್ತು ಒದಗಿಸುವಂತೆ ತಾಲೂಕು ತಹಶೀಲ್ದಾರ್ ಸೈಯದ್ ಖಲೀಂ ಉಲಾ ರವರಿಗೆ ಮನವಿ
ಸಂದರ್ಭದಲ್ಲಿ ವಕೀಲ ಆರ್.ಓಬಳೇಶ್ ,ಕರುನಾಡ ನವನಿರ್ಮಣವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ,ಯುವಕರ್ನಾಟಕ ವೇದಿಕೆ ಉಪಾಧ್ಯಕ್ಷ ಮರೇನಹಳ್ಳಿ ನಾಗರಾಜ್ ,ಎಸ್ ಎಫ್ ಐ ರಾಜ್ಯ ಮುಖಂಡ ಅನಂತರಾಜ್,ರೈತ ಸಂಘಟನೆ ಭರಮಸಮುದ್ರ ಕುಮಾರ್ ,ಸೂರಪ್ಪ,ಚೌಡಮ್ಮ,ಮುಖಂಡರಾದ ಸತ್ಯಮೂರ್ತಿ,ಇಂದಿರಾ,ಹನುಮಂತಪ್ಪ,ರವಿಕುಮಾರ್,ಸೇರಿದಂತೆ ಇದ್ದರು.