ಕೆಎಸ್ ಆರ್ ಟಿಸಿ ಬಸ್ ಡಿಪೋ ಕುರಿತು ಅಧಿವೇಶನದಲ್ಲಿ ಚರ್ಚಿಸುವೆ: ಶಾಸಕ ಬಿ.ದೇವೇಂದ್ರಪ್ಪ
ಜಗಳೂರು ಸುದ್ದಿ:ಜಗಳೂರಿನಲ್ಲಿ ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಒತ್ತಾಯಿಸಿ ಜ.16ರಂದು ನಡೆಯಲಿರುವ ಪಾದಯಾತ್ರೆ ಕುರಿತು ಪ್ರಗತಿಪರ ಸಂಘಟನೆಗಳ ಮುಖಂಡರುಗಳು ಶಾಸಕ.ಬಿ.ದೇವೇಂದ್ರಪ್ಪ ಅವರಿಗೆ ಮನವಿಸಲ್ಲಿಸಲಾಯಿತು.
ಕಳೆದ ದಶಕಗಳಿಂದ ನಿರಂತರ ಹೊರಾಟ ನಡೆಸುತ್ತಾ ಬಂದಿದ್ದರೂ ಕೆಎಸ್ ಆರ್ ಟಿಸಿ ಡಿಪೋ ಕನಸು ನನಸಾಗದೆ ಕೇವಲ ಬೆರಳೆಣಿಕೆಯಷ್ಟು ಸರ್ಕಾರಿ ಬಸ್ ಗಳ ಸಂಚಾರ ಆರಂಭವಾಗಿದೆ.ಡಿಪೋಗೆ ಜಾಗನಿಗದಿ ಮಾಡುವಷ್ಟರಲ್ಲಿ ಮಾತ್ರ ಸೀಮಿತವಾಗಿದೆ.ಕೂಡಲೇ ಡಿಪೋ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ,ಶಕ್ತಿಯೋಜನೆ ಯಡಿ ಮಹಿಳೆಯರಿಗೆ ಸಮರ್ಪಕ ಸರ್ಕಾರಿ ಬಸ್ ಸೇವೆ ಲಭ್ಯವಾಗಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಹೊರಹೊಲಯದಲ್ಲಿನ ಸರ್ವೆ ನಂ.51 ರಲ್ಲಿ ಗುರುತಿಸಿರುವ 4 ಎಕರೆ ಜಮೀನಿನಲ್ಲಿ ಡಿಪೋ ಸ್ಥಾಪನೆಗೆ ಶಾಸಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಧ್ವನಿಯಾಗಬೇಕು ಎಂದು ಮನವಿಮಾಡಿದರು.
ಇದೇ ವೇಳೆ 7 ನೇ ವಾಲ್ಮೀಕಿ ಜಾತ್ರೆಗೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೆಎಸ್ ಆರ್ ಟಿಸಿ ಅಧಿಕಾರಿಗಳೊಂದಿಗೆ ದೂರವಾಣಿ ಮುಖಾಂತರ ಸಂಪರ್ಕಿಸಲಾಗಿದ್ದು.ಪಟ್ಟಣದಲ್ಲಿ 4 ಎಕರೆ ಜಾಗ ನಿಗದಿಯಾಗಿರುವ ಖಚಿತ ಮಾಹಿತಿಯಿದೆ.₹9ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಕಳೆದ ಸರ್ಕಾರಗಳ ಆಡಳಿತಾವಧಿಯಲ್ಲಿ ಬಜೆಟ್ ನಲ್ಲಿ ಘೋಷಣೆಯಾಗದೆ ನೆನೆಗುದಿಗೆ ಬಿದ್ದಿರುವುದು ಗಮನಕ್ಕೆ ಬಂದಿದ್ದು.ನಾನು ಅಧಿವೇಶನದಲ್ಲಿ ಚರ್ಚಿಸಿ ಸಚಿವರ ಗಮನಕ್ಕೆ ತರುವೆ ನನ್ನ ಆಡಳಿತಾವಧಿಯಲ್ಲಿ ಸರ್ಕಾರಿ ಬಸ್ ಡಿಪೋ ಸ್ಥಾಪನೆಗೆ ಶತಸಿದ್ದ.ಕಾನೂನು ಬದ್ದ ಹಕ್ಕಿಗಾಗಿ ಸಂವಿಧಾನಾತ್ಮಕವಾಗಿ ಶಾಂತಿಯುತ ಹೊರಾಟಕ್ಕೆ ಸಂಘಟನೆಗಳು ಮುಂದಾಗಬೇಕು ನನ್ನ ಸಹಮತವಿದೆ.
—— ಬಿ.ದೇವೇಂದ್ರಪ್ಪ ಶಾಸಕ ,ಜಗಳೂರುಇದೆ ಸಂದರ್ಭದಲ್ಲಿ ನೂತನವಾಗಿ ವಾಲ್ಮಿಕಿ ಜಾತ್ರೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ರವರಿಗೆ ಜಗಳೂರು ಪ್ರಗತಿಪರ ಸಂಘಟನೆಗಳಿಂದ ಸನ್ಮಾನಿಸಿ ಅಭಿನಂದಿಸಿ ಶುಭಾ ಕೋರಲಾಯಿತು
ಸಂದರ್ಭದಲ್ಲಿ ಮುಖಂಡರಾದ ಬಿ.ಮಹೇಶ್ವರಪ್ಪ,ಗಿಡ್ಡನಕಟ್ಟೆ ಕಾಂತರಾಜ್,ಪ್ರಗತಿ ಪರ ಸಂಘಟನೆಗಳ ಹೊರಾಟಗಾರರಾದ ವಕೀಲ ಆರ್.ಓಬಳೇಶ್,ಶಂಭುಲಿಂಗಪ್ಪ,ತಿಪ್ಪೇಸ್ವಾಮಿ,ಮಹಾಲಿಂಗಪ್ಪ ಎಚ್.ಎಂ ಹೊಳೆ,ರಾಜಪ್ಪ ವ್ಯಾಸಗೊಂಡನಹಳ್ಳಿ,ಬರ್ಕತ್ ಅಲಿ,ಮರೇನಹಳ್ಳಿನಾಗರಾಜ್,ಸತೀಶ್ ಮಲೆಮಾಚಿಕೆರೆ,ಧನ್ಯಕುಮಾರ್ ಎಚ್.ಎಂಹೊಳೆ,ನಾಗಲಿಂಗಪ್ಪ,ಮಾದಿಹಳ್ಳಿಮಂಜುನಾಥ್,ಅನಂತರಾಜ್,ಇಂದಿರಾ,ಕುಮಾರ್,ವಕೀಲ ಅಂಜಿನಪ್ಪ,ಅನ್ವರ್ ಅಲಿ,ಸೇರಿದಂತೆ ಇದ್ದರು.