ಚಿತ್ರದುರ್ಗ ಇಂಗಳದಾಳ್‌ ಚಿನ್ನದ ಗಣಿ ಪುನಾರಂಭಕ್ಕೆ ಸಿದ್ಧತೆ; 23 ವರ್ಷಗಳ ಬಳಿಕ ಮತ್ತೆ ಗಣಿಗಾರಿಕೆ

ಚಿತ್ರದುರ್ಗ ಇಂಗಳದಾಳ್‌ ಚಿನ್ನದ ಗಣಿ ಪುನಾರಂಭಕ್ಕೆ ಸಿದ್ಧತೆ ನಡೆದಿದೆ. 2002 ರ ಬಳಿಕ ನಿಂತಿದ್ದ ಗಣಿಗಾರಿಕೆಯು 23 ವರ್ಷಗಳ ಬಳಿಕ ಮತ್ತೆ ಆರಂಭವಾಗಲಿದೆ. ಚಿನ್ನದ ಗಣಿಗಾರಿಕೆ ಘಟಕ ಪುನರಾರಂಭಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್‌ ರೆಡ್ಡಿ ಸೂಚನೆ ನೀಡಿದ್ದಾರೆ.

:
ಚಿತ್ರದುರ್ಗ ಜಿಲ್ಲೆಯ ಇಂಗಳದಾಳ್‌ ಗ್ರಾಮದಲ್ಲಿ ಎರಡು ದಶಕಗಳ ಬಳಿಕ ಮತ್ತೆ ಗಣಿಗಾರಿಕೆಗೆ ಸಿದ್ಧತೆ.
ಚಿನ್ನದ ಗಣಿ ಪುನಾರಂಭಕ್ಕೆ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್‌ ರೆಡ್ಡಿ ಸ್ಪಂದನೆ.
ಗಣಿಗಾರಿಕೆ ಪುನರಾರಂಭಿಸುವಂತೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮಾಡಿದ್ದ ಮನವಿಗೆ ಕೇಂದ್ರ ಸ್ಪಂದನೆ.

ಚಿತ್ರದುರ್ಗದ ಗಣಿ ಪ್ರದೇಶ.

ಚಿತ್ರದುರ್ಗ: ಕಲ್ಲಿನಕೋಟೆ ಚಿತ್ರದುರ್ಗ ಜಿಲ್ಲೆಯ ಇಂಗಳದಾಳ್‌ ಗ್ರಾಮದಲ್ಲಿ ಎರಡು ದಶಕಗಳ ಬಳಿಕ ಮತ್ತೆ ಗಣಿಗಾರಿಕೆ ಆರಂಭವಾಗಲಿದೆ. ಈ ಕುರಿತು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಚಿತ್ರದುರ್ಗ ತಾಲೂಕಿನ ಇಂಗಳದಾಳ್‌ನಲ್ಲಿ ಗಣಿಗಾರಿಕೆ ಪುನರಾರಂಭಿಸುವಂತೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮಾಡಿದ್ದ ಮನವಿಗೆ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್‌ ರೆಡ್ಡಿ ಸ್ಪಂದಿಸಿದ್ದಾರೆ. ಚಿನ್ನದ ಗಣಿಗಾರಿಕೆ ಘಟಕ ಪುನರಾರಂಭಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅವರಿಗೆ ಸೆಪ್ಟೆಂಬರ್ 9 ರಂದು ಮನವಿ ಮಾಡಿದ್ದರು. ಗಣಿ ತಜ್ಞರು ಮತ್ತು ಭೂವಿಜ್ಞಾನಿಗಳು ಅಜ್ಜನಹಳ್ಳಿ ಮತ್ತು ಜಿ.ಆರ್‌. ಹಳ್ಳಿ ಸುತ್ತಮುತ್ತ ಉತ್ತಮ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪವಿದ್ದು, ಚಿನ್ನದ ಗಣಿಗಾರಿಕೆಗೆ ಸೂಕ್ತವಾಗಿದೆ ಎಂಬುದಾಗಿ ತಿಳಿಸಿದ್ದು, ಈ ಕುರಿತಂತೆ ಸಂಬಂಧಪಟ್ಟವರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ, ಚಿತ್ರದುರ್ಗದ ಚಿನ್ನದ ಗಣಿಗಾರಿಕೆ ಘಟಕವನ್ನು ಮತ್ತೆ ಆರಂಭಿಸಬೇಕು ಎಂಬುದಾಗಿ ಮನವಿ ಮಾಡಿದ್ದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು, ಈ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವರಿಗೆ ಪತ್ರ ಬರೆದು ವಿನಂತಿಸಿದ್ದರು.

1886 ರಲ್ಲಿಯೇ ಗಣಿಗಾರಿಕೆ
ಇಂಗಳದಾಳಿನಲ್ಲಿ 1886ರಲ್ಲಿ ತಾಮ್ರದ ಗಣಿಗಾರಿಕೆ ಪ್ರಾರಂಭವಾಗಿತ್ತು, ಬಳಿಕ ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ಅವರು ಕೈಗೊಂಡ ಸರ್ವೆ ಬಳಿಕ ಇಂಗಳದಾಳು, ಅಜ್ಜನಹಳ್ಳಿ ಮತ್ತು ಜಿ.ಆರ್‌.ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪವಿರುವುದನ್ನು ಗುರುತಿಸಿತ್ತು. 1972 ರಲ್ಲಿಇಂಗಳದಾಳು ತಾಮ್ರದ ಘಟಕ ಪ್ರಾರಂಭಗೊಂಡು, ಬಳಿಕ ಇದನ್ನು ಹಟ್ಟಿ ಚಿನ್ನದ ಗಣಿಯೊಂದಿಗೆ ವಿಲೀನಗೊಳಿಸ ಲಾಗಿತ್ತು. 1994ರಲ್ಲಿ ಅಜ್ಜನಹಳ್ಳಿ ಮತ್ತು ಜಿ ಆರ್‌ ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪ ಇರುವುದನ್ನು ಖಚಿತಪಡಿಸಿಕೊಂಡು, ಈ ಭಾಗದಲ್ಲಿ ಹಟ್ಟಿ ಚಿನ್ನದ ಗಣಿಯ ಸಹಯೋಗದಲ್ಲಿ2002 ರವರೆಗೂ ಗಣಿಗಾರಿಕೆ ನಡೆಸಲಾಗಿತ್ತು. ಎರಡು ದಶಕಗಳ ನಂತರ ಕೇಂದ್ರದಿಂದ ಈಗ ಪುನರಾರಂಭಿಸುವ ಸೂಚನೆ ಸಿಕ್ಕಿದೆ.

ಪ್ರಾದೇಶಿಕ ಗಣಿ ನಿಯಂತ್ರಕರಿಗೆ ನೋಟಿಸ್‌
ಪ್ರತಿ ದರ್ಜೆಯ ಕಬ್ಬಿಣದ ಅದಿರಿಗೆ ಸರಾಸರಿ ಮಾರಾಟ ದರ ನಿಗದಿಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಗಣಿ ಗುತ್ತಿಗೆ ಹೊಂದಿರುವ ಬಿಕೆಜಿ ಮೈನಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಮೆಸರ್ಸ್‌ ನದೀಮ್‌ ಮಿನಿರಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಪನಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಹಾಗೂ ನ್ಯಾ. ವಿ.ಶ್ರೀಶಾನಂದ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದವು.

ಕೆಲ ಕಾಲ ವಾದ ಆಲಿಸಿದ ನ್ಯಾಯ ಪೀಠ, ಕೇಂದ್ರ ಗಣಿ ಸಚಿವಾಲಯ, ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೈಗಾರಿಕಾ ಇಲಾಖೆ, ಇಂಡಿಯನ್‌ ಬ್ಯೂರೋ ಆಫ್‌ ಮೈನ್ಸ್‌, ಪ್ರಾದೇಶಿಕ ಗಣಿ ನಿಯಂತ್ರಕರಿಗೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ­ಯನ್ನು 2025ರ ಜ.9ಕ್ಕೆ ಮುಂದೂಡಿತು.

Leave a Reply

Your email address will not be published. Required fields are marked *

You missed

error: Content is protected !!