ಬಸವನಕೋಟೆ ಗ್ರಾ.ಪಂ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆ

ಜಗಳೂರು ಸುದ್ದಿ:ತಾಲೂಕಿನ ಬಸವನಕೋಟೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಮರಿಯಮ್ಮ ಆಯ್ಕೆಯಾದರು.

ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮರಿಯಮ್ಮ ಹಾಗೂ ರೇಖಾ ತಿಮ್ಮೇಶ್ ಅವರು ನಾಮಪತ್ರ ಸಲ್ಲಿಸಿದ್ದರು. ಇಬ್ಬರ ಉಮೇದುವಾರಿಕೆ ಊರ್ಜಿತವಾಗಿದ್ದು.ಒಟ್ಟು 14 ಜನ ಸದಸ್ಯರಿದ್ದು ಮರಿಯಮ್ಮ ಪರವಾಗಿ 11‌ಮತಗಳು,ರೇಖಾ ತಿಮ್ಮೇಶ್ ಅವರಿಗೆ 3 ಮತಗಳು ಚಲಾಯಿಸಲಾಗಿತ್ತು.8‌ಮತಗಳ ಅಂತರದ ಬಹುಮತಗಳಿಂದ ಮರಿಯಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಶಂಕರ್ ಅವರು ಘೋಷಿಸಿದರು.

ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ನಗೀನಬಾನು,ಸದಸ್ಯರಾದ ಜ್ಯೋತಿಲಿಂಗಪ್ಪ,ರೇಖಾಕೊಟ್ರೇಶ್,ಮಂಜಮ್ಮ ಭೀಮಪ್ಪ, ದೇವರಾಜ್,ಜ್ಯೋತಿಲಿಂಗಪ್ಪ,ಶರಣಪ್ಪ,ಕೊಟ್ರೇಶಪ್ಪ,ಬಿ.ಟಿ.ಬಸವರಾಜ್,ಲಲಿತಮ್ಮ,ಮರಿಯಮ್ಮ,ಯಲ್ಲಮ್ಮ,ಮುಖಂಡರಾದ ಉದ್ದಬೋರನಹಳ್ಳಿ ಕೊಟ್ರೇಶ್ ,ಮಂಜುನಾಥ್,ಶಮಿವುಲ್ಲಾ,ಸುರೇಶ್,ಓಬಣ್ಣ,ಮಂಜಪ್ಪ,ಬಿ.ಟಿ.ಬಸವರಾಜ್ ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!