ಶುಕ್ರದೆಸೆ ನ್ಯೂಸ್: ಏಪ್ರಿಲ್ 17 ರಂದು ನಾಮ ಪತ್ರ ಸಲ್ಲಿಸುವೆ ಹಾಲಿ ಶಾಸಕ ಎಸ್ ವಿ ರಾಮಚಂದ್ರ ಪಟ್ಟಣದ ವಿದ್ಯಾ ನಗರದಲ್ಲಿರುವ ಶಾಸಕ ಎಸ್ ವಿ ರಾಮಚಂದ್ರರವರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು ಬಿ ಜೆ ಪಿ ಪಕ್ಷ ನಿಷ್ಠೆಗೆ ಬದ್ದನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರ ಅಗತ್ಯವಾದ ಸೇವೆ ಮಾಡಿದ್ದೆನೆ ಮೂರು ಬಾರಿ ಶಾಸಕನಾಗಿ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿರುವೆ . ನನ್ನ ಪ್ರಮಾಣಿಕ ಸೇವೆ ನನಗೆ ಈ ಚುನಾವಣೆಯಲ್ಲಿ ಶ್ರೀ ರಕ್ಷೆಯಾಗಿ ಗೆಲುವಿಗೆ ಸಹಕಾರಿಯಾಗಿ ಜಯಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಿರಿಗೆರೆ ಶ್ರೀಗಳ 57 ಕೆರೆ ತುಂಬಿಸುವ ಯೋಜನೆ .ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ಅಪ್ಪರ್ ಭದ್ರಾ ಸೇರಿದಂತೆ ಸರ್ಕಾರದಿಂದ ವಿವಿಧ ಅನುದಾನವನ್ನು ತಂದು ತಾಲ್ಲೂಕಿನಲ್ಲಿ ವಿವಿಧ ಕೆಲಸಗಳು ಪ್ರಗತಿಯಲ್ಲಿದ್ದು ಕಾಮಗಾರಿ ಜನರ ಕಣ್ಣಿಗೆ ಕಾಣುವಂತಿವೆ ಇದನ್ನು ಮನಗಂಡ ಕ್ಷೇತ್ರದ ಮತದಾರರು ಪುನ ನನಗೆ ಮತ್ತೊಂದು ಬಾರಿ ಆವಕಾಶ ಕಲ್ಪಿಸಿ ಆಯ್ಕೆ ಮಾಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬರುವ ಏಪ್ರಿಲ್ 17 ರಂದು ಸೋಮವಾರ ನಮ್ಮ ಬಿ ಜೆ ಪಿ ಪಕ್ಷದ ಆಪಾರ ಅಭಿಮಾನಿಗಳೊಂದಿಗೆ ಜಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿ ಜೆ ಪಿ ಘಟಕದ ತಾಲ್ಲೂಕು ಅಧ್ಯಕ್ಷ ಹೆಚ್ ಸಿ ಮಹೇಶ್ .ಸೊಕ್ಕೆ ಕ್ಷೇತ್ರದ ಮಾಜಿ ಜಿಪಂ ಸದಸ್ಯ ನಾಗರಾಜ್.ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜುನಾಥ.ಮಾಜಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದಣ್ಣ. ಮುಖಂಡ ಕಟಿಗೆಹಳ್ಳಿ ಮಂಜಣ್ಣ. ಸೇರಿದಂತೆ ಮುಂತಾದವರು ಹಾಜರಿದ್ದರು. ಶಾಸಕರಿಗೆ ಪ್ರಶ್ನೆ : ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಶಾಸಕ ಎಸ್ ವಿ ರಾಮಚಂದ್ರರವರು ನನಗೆ ಕೈ ಟಿಕೆಟ್ ತಪ್ಪಿಸಲು ಕುತಂತ್ರ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಶಾಸಕ ಎಸ್ ವಿ ಆರ್ .ಉತ್ತರಿಸಿ ಅವರ ಪಕ್ಷದಲ್ಲಿಯೆ ಅವರ ಘನತೆ ಕಾಪಾಡಿಕೊಂಡು ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳದೆ ಮತ್ತೊಬ್ಬರ ಮೇಲೆ ಆರೋಪಿಸುವುದನ್ನ ಕಂಡರೆ ಮಾಜಿ ಶಾಸಕರು ಟಿಕೆಟ್ ಕೈ ತಪ್ಪಿದ್ದರಿಂದ ಹತಾಶರಾಗಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದರು.