ಶುಕ್ರದೆಸೆ ನ್ಯೂಸ್: ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ವಿನೂತನವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಜಗಳೂರು ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ವಿವಿಧ. ಗ್ರಾಮಗಳಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಕೂಲಿಕಾರರು ಕೆಲಸ ಮಾಡುವ ಸ್ಥಳದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಅರ್ಥಪೂರ್ಣ ಜಯಂತಿ ಆಚರಣೆ ಮಾಡಲಾಯಿತು.ವಿವಿಧ ಗ್ರಾಮಗಳಾದ ಮರಿಕುಂಟೆ.ಮುಗ್ಗಿದರಾಗಿಹಳ್ಳಿ.ಪಲ್ಲಾಗಟ್ಟೆ ಸೇರಿದಂತೆ ಬಿಳಿಚೋಡು ಗ್ರಾಮಗಳಲ್ಲಿ ಅಯಾ ಕೂಲಿಕಾರರು ಕೆಲಸದ ಸ್ಥಳದಲ್ಲಿಯೆ ವಿನೂತನವಾಗಿ ಆಚರಿಸಲಾಯಿತು. ಕೂಲಿ ಕಾರ್ಮಿಕರು ಕೆಲವು ಹಳ್ಳಿಗಳಿಂದ ಡಾll ಬಿ. ಆರ್. ಅಂಬೇಡ್ಕರ್ ಜಯಂತಿಯಲ್ಲಿ‌ ಭಾಗವಹಿಸಿ ಶ್ರೇಷ್ಠ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಮಹಾನಾಯಕನ ಕೊಡುಗೆಯನ್ನು ಸ್ಮರಿಸಿದರು.

“ಡಾ. ಬಿ.ಆರ್ ಅಂಬೇಡ್ಕರ್ ಅವರು ಮತದಾನ ಹಕ್ಕಿನ ಮೂಲಕ ತಮ್ಮ ಭವಿಷ್ಯದ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಕೊಟ್ಟಿದ್ದಾರೆ. ನಾವು ದುರುಪಯೋಗ ಮಾಡಿಕೊಳ್ಳದೆ ಯಾವುದೇ ಆಸೆ ಆಕಾಂಕ್ಷಿಗಳಿಗೆ ಬಲಿಯಾಗದೆ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಮ್ಮ ಮುಂದೆ ಬಂದಿದೆ. ಇದರ ಸದುಪಯೋಗ ಪಡೆದುಕೊಂಡು 2023 ರ ಮೆ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ‌ ಉತ್ತಮರನ್ನು ಆಯ್ಕೆ ಮಾಡಿಕೊಳ್ಳೊಣ” ಎಂದು ಸಲಹೆ ನೀಡಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಕುರಿತು ಗ್ರಾ .ಕೂ.ಸ ಸಂಘಟನೆ ಸಂಚಾಲಕಿ ಪಲ್ಲಾಗಟ್ಟೆ ಪಿ ಎಸ್ ಸುಧಾ ಮಾತನಾಡಿದರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸರ್ವ ಜನಾಂಗಕ್ಕೂ ಮೀಸಲಾತಿ ನೀಡಿ ಕೂಲಿಕಾರರ ಹಾಗೂ ದುಡಿಯುವ ದಮನಿತರ ವರ್ಗಕ್ಕೆ ನ್ಯಾಯುತವಾಗಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿದ್ದಾರೆ ಅಂತ ಮಹಾತ್ಮರುನ್ನು ಒಂದು ಜಾತಿಗೆ ಸಿಮೀತ ಮಾಡಬಾರದು ಅಂಬೇಡ್ಕರ್ ನಮಗೆ ಆರಾದ್ಯ ದೈವ ಪ್ರಥಮವಾಗಿ ಮಹಿಳೆರಿಗೆ ಮತದಾನ ಹಕ್ಕು ಕಲ್ಪಿಸಿ ಕೆಲಸದ ವೇಳೆ ಮಹಿಳಾ ಕಾರ್ಮಿಕರಿಗೆ ಯರಿಗೆ ರಜಾ ನೀಡಿದ ಮಹಾನ್ ಚೇತನ ಡಾ ಬಿ ಆರ್ ಅಂಬೇಡ್ಕರ್ ಎಂದು ಸ್ಮರಿಸಿದರು ಒಟ್ಟಾರೆ ಅಂಬೇಡ್ಕರ್ ಜಯಂತಿ‌ಯನ್ನು ವಿವಿಧ ಗ್ರಾಮಗಳಲ್ಲಿ ಕೂಲಿಕಾರರು ಕೆಲಸದ ಸ್ಥಳದಲ್ಲಿಯೆ ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತ್ರ ಮುಗಿದ ರಾಗಿಹಳ್ಳಿ . ತಿಪ್ಪಮ್ಮ ಅನಿತಾ .ರತ್ನಮ್ಮ .ಮರಕುಂಟೆ ನಾಗರಾಜ .ಹನುಮಂತಪ್ಪ .ಮೆದಿಕೆರನಹಳ್ಳಿ ಕಲ್ಪನಾ. ಶಿವು ಹುಲಿಗೇಶ .ಮನು ಮಾದೇನಹಳ್ಳಿ. ನಾಗರಾಜ್ .ಪರಮೇಶ್ವರಪ್ಪ .ರಾಮಲಿಂಗಪ್ಪ .ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

You missed

error: Content is protected !!