ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ , ಉಪಾಧ್ಯಕ್ಷರಾಗಿ ನಾರಮ್ಮ ಸಿದ್ದಪ್ಪ ಅವಿರೋಧ ಆಯ್ಕೆ
ಸುದ್ದಿ :ಜಗಳೂರು
ಜಗಳೂರು: ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾರಮ್ಮ ಸಿದ್ದಪ್ಪ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಡಿ.ಪಿ.ಓ ಇಲಾಖೆ ಬೀರೆಂದ್ರಕುಮಾರ್ ಘೋಷಣೆ ಮಾಡಿದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನ ಈ ಹಿಂದೆ ಕಾರಣಂತರದಿಂದ ತೆರವಾಗಿತ್ತು ತೆರವಾದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಗೋಗುದ್ದ ನಾರಮ್ಮ ನಾಮಪತ್ರ ಸಲ್ಲಿಸಿದ್ದರು ಇವರ ವಿರುದ್ದ ಯಾವುದೇ ನಾಮ ಪತ್ರ ಸಲ್ಲಿಸದ ಕಾರಣ ಕಣದಲ್ಲಿ ಒಂದೇ ನಾಮಪತ್ರ ಇದ್ದುದರಿಂದ ನಾರಮ್ಮ ಅವರನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
17 ಜನ ಗ್ರಾಪಂ ಸದಸ್ಯರಿದ್ದು ಇವರ ಬೆಂಬಲ ಬಹುಮತದೊಂದಿಗೆ ಗ್ರಾಪಂ ಉಪಾದ್ಯಕ್ಷರಾಗಿ ಆಯ್ಕೆಯಾದ ನಾರಮ ಸಿದ್ದಪ್ಪರವರಿಗೆ ವಿವಿಧ ಗಣ್ಯರು ಹೂವಿನ ಹಾರ ಹಾಕಿ ಶುಭಾ ಕೋರಿದರು.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಬಯ್ಯ . ಗ್ರಾಪಂ ಅಧ್ಯಕ್ಷರಾದ ಸಿದ್ದಣ್ಣ. ಸದಸ್ಯರಾದ ಶ್ರೀಮತಿ ಸಣ್ಣನಾಗಮ್ಮ. ಕಮಲ . ಶಿವಮ್ಮ. ಶಿವಲಿಂಗಮ್ಮ.ಎಂ.ವೀರೇಶ್. ಹೆಚ್ ಸಿದ್ದಪ್ಪ. ಬಿ.ಶಿವಣ್ಣ.ಜ್ಯೋತಿ.ಶ್ರೀಮತಿ ಮೀನಾಕ್ಷಿಬಾಯಿ.ಮಲ್ಲಿಕಾರ್ಜನ್.ಸುನಿತಾ. ಇಂದ್ರಮ್ಮ.ಅಕ್ಕಮ್ಮ .ಸೇರಿದಂತೆ ಮುಖಂಡರಾದ ಮಾಜಿ ತಾಪಂ ಸದಸ್ಯ ಕುಬೇರಪ್ಪ. ಕಾನನಕಟ್ಟೆ ತಿಪ್ಪೇಸ್ವಾಮಿ. ಜ್ಯೋತಿಪುರ ಸಿದ್ದೇಶಿ. ರಾಜಶೇಖರ. ರೇಣುಕೇಶಿ. ವಕೀಲ ತಿಪ್ಪೇಸ್ವಾಮಿ ಹಾಜುರಿದ್ದರು