filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ನಗರಕ್ಕೆ 3 ಮುಕ್ತಿವಾಹನ ವ್ಯವಸ್ಥೆ ಕಲ್ಪಿಸಲು ಬದ್ದ ಶಾಸಕ ಬಿ ದೇವೇಂದ್ರಪ್ಪ

.

ಜಗಳೂರು ಸುದ್ದಿ:-

ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಏರ್ಪಡಿಸಿದ್ದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಶಾಸಕರು ಮಾತನಾಡಿದರು.

ಪರಕೀಯರ ಆಡಳಿತದ ಕಪಿ ಮುಷ್ಠಿಯಲ್ಲಿದ್ದ ಭಾರತ ಹಲವು ಮಹನೀಯರ ಹೋರಾಟ, ಪ್ರಾಣ ತ್ಯಾಗ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ ಭಾರತದಲ್ಲಿ ಪ್ರಬಲ ಕಾನೂನು ವ್ಯವಸ್ಥೆ ಅಗತ್ಯವಿತ್ತು. ಇದನ್ನು ಮನಗಂಡ ಮಹನೀಯರು ಬಾಬಾ ಸಾಹೇಬ್ ಡಾ. ಬಿ.ಆರ್‌.ಅಂಬೇಡ್ಕರ್ ನೇತೃತ್ವದಲ್ಲಿ ಅಂದು ಸಂವಿಧಾನ ಕರಡು ಸಮಿತಿ ರಚನೆ
ಮಾಡಿದ ಪ್ರತಿಫಲವಾಗಿ ಇಂದು 76 ನೇ ಗಣರಾಜ್ಯೋತ್ಸವ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಗಣರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ನಮ್ಮ ಘನ ಸರ್ಕಾರ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ದೇಶದ ಇತಿಹಾಸ ಪರಂಪರೆ ಮತ್ತು ಸಂವಿಧಾನದ ಸಮಗ್ರತೆಯನ್ನ ಎತ್ತಿ ಹಿಡಿಯುವ ಸಂವಿಧಾನ ಆಶಯಗಳನ್ನು ಹಿಡೇರಿಸುವುದೆ ನಮ್ಮ ದೆಯ್ಯವಾಗಿದೆ ‌‌.ಸಂವಿಧಾನದ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿಗೂ ಒಂದೆ ಓಟು ಸಾಮಾನ್ಯ ಕೂಲಿಕಾರರಿಗೂ ಒಂದೆ ಓಟು ಆಗಗಾಗಿ ನಮ್ಮಂತ ಸಾಮಾನ್ಯ‌ ಕುಟುಂಬದಲ್ಲಿ ಹುಟ್ಟಿದ ನಾನು ಶಾಸಕನಾಗಿ ಆಯ್ಕೆಯಾಗಲು ಸಂವಿಧಾನ ಕಾರಣ ಎಂದು ಅಭಿಪ್ರಾಯಪಟ್ಟರು.

ನನ್ನ ಆಡಳಿತ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸುವಂತ ಕೆಲಸ ಮಾಡುವೆ.
ಅತಿ ಶೀಘ್ರವೆ ನಗರದ ಜನತೆಗೆ ಸಹಾಯವಾಗುವಂತೆ ಪಪಂ ವತಿಯಿಂದ 3 ಮುಕ್ತಿವಾಹನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ.ಬಿ ದೇವೇಂದ್ರಪ್ಪ.

ತಹಶೀಲ್ದಾರ್ ಸೈಯದ್ ಖಲೀಂ ಉಲಾ ದ್ವಜಾವಂದನೆ ಸ್ವೀಕರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು ಭಾರತ ದೇಶದ ಸಂವಿಧಾನ ಸರ್ವಶ್ರೇಷ್ಟವಾಗಿದ್ದು ಪ್ರತಿಯೊಬ್ಬ ವ್ಯಕ್ತಿಗೂ ಸ್ವಾತಂತ್ರ ಸಮಗ್ರತೆ ಏಕತೆ ಬ್ರಾತೃತ್ವದ ಹಕ್ಕುಗಳನ್ನು ನೀಡಿದೆ .ದೇಶದಲ್ಲಿ ಎಲ್ಲಾ ಧರ್ಮಿಯರು ಸುಭಿಕ್ಷವಾಗಿರಲು ಮಹತ್ವದ ಸಂವಿಧಾನ ರಕ್ಷಣೆಯಾಗಿದ್ದು ನಮ್ಮ ಹೊಣಿಗಾರಿಕೆಯನ್ನ ಮರೆಯಬಾರದು ಎಂದರು


.ಇದೆ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜನಪದ ಕಾಟಮ್ಮರವರಿಗೆ ಸನ್ಮಾನಿಸಿದರು ಹಾಗೂ ತೋರಣಗಟ್ಟೆ ಶಾಲೆಯ ಉತ್ತಮ ಶಿಕ್ಷಕ ರಂಗಪ್ಪ ವೆಂಕಪ್ಪ. ಮತ್ತು ಹಿಮಾಲಯ ಪರ್ವತರೋಹಿಣಿ ಮೈಲೇಶ್ ಅನುಪಸ್ಥಿತಿಯಲ್ಲಿ ಅವರ ತಂದೆವರಿಗೆ ಮತ್ತು ಚಿತ್ರ ನಿರ್ದೇಶಕ ಸಾದತ್.ಹಾಗೂ ಸಿ.ಪಿ.ಐ ರಾಜು ರಾಷ್ಟ್ರಪತಿ ಇನ್ನು ಮುಂತಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿವಿಧ ಶಾಲಾ ಮಕ್ಕಳಿಂದ ದೇಶಭಿಮಾನ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .ಕಾರ್ಯಕ್ರಮದಲ್ಲಿ ಸಿ ಆರ್ ಪಿ ಆಂಜನೇಯ ನಿರೂಪಿಸಿದರು ಶಿಕ್ಷಕ ಸತೀಶರವರು ಸ್ವಾಗತಿಸಿದರು.

. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಷಂಷೀರ್ ಆಹಮದ್.ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಎ.ಎಲ್ ತಿಪ್ಪೇಸ್ವಾಮಿ. . ಪಪಂ ಅಧ್ಯಕ್ಷರಾದ ನವೀನ್ ಕುಮಾರ್.ವಕೀಲರ ಸಂಘದ ಅಧ್ಯಕ್ಷರಾದ ಮರೆನಹಳ್ಳಿ ಬಸವರಾಜ್.ತಾಪಂ ಇಓ ಕೆಂಚಪ್ಪ. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಬಿಇಓ‌ .ಹಾಲಮೂರ್ತಿ. ಪಪಂ ಉಪಾಧ್ಯಕ್ಷರಾದ ಲೋಕಮ್ಮ. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶ್ರೀನಿವಾಸ. ಮಾಜಿ ಪಪಂ ಅಧ್ಯಕ್ಷರು ಹಾಗೂ ಸದಸ್ಯರಾದ ಆರ್ ತಿಪ್ಪೇಸ್ವಾಮಿ..ಪಪಂ ಸದಸ್ಯರಾದ ಮಂಜಮ್ಮ.ನಿರ್ಮಲಕುಮಾರಿ. ದೇವರಾಜ್. ಎಸ್ ಸಿದ್ದಪ್ಪ. ಶಕೀಲ್ ಆಹಮದ್. ಬಿ.ಕೆ ರಮೇಶ್. ಜೆ ಪಾಪಲಿಂಗಪ್ಪ. ಆದರ್ಶ.ನಾಮನಿರ್ದೇಶನ ಸದಸ್ಯರಾದ ಕುರಿಜಯ್ಯಣ್ಣ.ಸಣ್ಣತಾನಾಜಿ ಗೋಸಾಯಿ. ಶಾಂತಕುಮಾರ್.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್.ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!