ಭಾರತ ದೇಶ ವಿಶಿಷ್ಟ ರಾಷ್ಟ್ರ ಇಲ್ಲಿರುವ ಮಾನವೀಯ ಸಂಸ್ಕೃತಿಯೇ ಗೌಣ :ನಿವೃತ್ತ ಪ್ರಾಂಶುಪಾಲ ಅನಂತರೆಡ್ಡಿ ಅಭಿಪ್ರಾಯ .
ಜಗಳೂರು ಸುದ್ದಿ:ಭಾರತ ದೇಶ ವಿಬಿನ್ನ ರಾಷ್ಟ್ರ ಇಲ್ಲಿ ಮಾನವೀಯ ಮೌಲ್ಯಗಳ ಸಂಸ್ಕಾರಕ್ಕೆ ಸಾಕ್ಷಯೇ ನಮ್ಮ ಹಳೆಯ ವಿಧ್ಯಾರ್ಥಿಗಳು ಆಯೋಜಿಸಿರುವ ಗುರುವಂದನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಉದ್ದೇಶಿಸಿ ನಿವೃತ್ತ ಪ್ರಾಂಶುಪಾಲ ಅನಂತರೆಡ್ಡಿ ಮಾತನಾಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 2000-2001ನೇ ಸಾಲಿನ ಪಿಯುಸಿ ಕಲಾವಿಭಾಗದ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ,ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನಲ್ಲಿ ಅಗೋಚರವಾದ ಅಂತಃಕರಣಕ್ಕೆ ಹಳೇ ವಿದ್ಯಾರ್ಥಿಗಳು ಕಾಲೇಜು ಹಂತ ಸ್ಮರಿಸಿಕೊಂಡು ಆಯೋಜನೆ ಮಾಡುವ ಗುರುವಂದನಾ ಕಾರ್ಯಕ್ರಮಗಳು ಸಾಕ್ಷಿಯಾಗುತ್ತವೆ.ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನ ವರ್ತನೆ,ಮಾನಸಿಕ ಸಾಮರ್ಥ್ಯದ ಆಲೋಚನೆಗಳು ಬದಲಾಗಿವೆ.ಈ ಮಧ್ಯೆಯೂ ತಮ್ಮ ಪ್ರೀತಿ,ಪ್ರಶಂಸೆ,ಗುರುಭಕ್ತಿ ಶಿಕ್ಷಕ ವೃತ್ತಿಗೆ ಮತ್ತಷ್ಟು ಸ್ಪೂರ್ತಿದಾಯಕ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ,ಜಗಳೂರಿನಲ್ಲಿ ಸರ್ಕಾರಿ ಕಾಲೇಜು ಇರುವುದೇ ಗೊತ್ತಿಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆ,ಸ್ವಚ್ಛತೆ,ಉತ್ತಮ ಫಲಿತಾಂಶ ಏರಿಕೆಗೆ ಕಾಳಜಿವಹಿಸಿ ಪ್ರಾಂಶುಪಾಲನಾಗಿ ನನ್ನ ಜವಾಬ್ದಾರಿ ನಿಭಾಯಿಸಿದ ನೆಮ್ಮದಿಯಿದೆ ಎಂದರು.
ಇತ್ತೀಚೆಗೆ ಆಡಳಿತ ಸರಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ನಿರುದ್ಯೋಗ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ.ಸರ್ಕಾರದ ಅನ್ನ ತಿಂದವರು ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಿ ಋಣ ತೀರಿಸಬೇಕು.ಶಿಕ್ಷಣ ಪಡೆದವರು ಜಾಗೃತರಾಗದಿದ್ದರೆ ದೇಶದಲ್ಲಿ ಅಪಾಯಕಾರಿ ಬೆಳವಣಿಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.
ಸಿದ್ದಗಂಗಾ ಆಕಾಡೆಮಿಯ ಮುಖ್ಯಸ್ಥ ಯುವ ಮುಖಂಡ ಹಳೇ ವಿದ್ಯಾರ್ಥಿ ಎ.ಎಂ ಮರುಳಾರಾಧ್ಯ ಕಳೆದ 25 ವರ್ಷಗಳ ಸ್ನೇಹ ಸಮ್ಮಿಲನಕ್ಕೆ ಬೆಳ್ಳಿಹಬ್ಬ ಸಂಭ್ರಮ ಸಾಕ್ಷಿಯಾಗಿದೆ.ನಾವೆಲ್ಲಾ ಇಲ್ಲಿಯವರೆಗೂ ಸ್ನೇಹತ್ವ ಕಾಪಾಡಿಕೊಂಡು ಒಟ್ಟಾಗಿರೋದೆ ವಿಶೇಷ,ಸಂತಸದ ಸಂಗತಿ ಎಂದರು.
ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಶಿವಕುಮಾರ್,ನಿವೃತ್ತ ಉಪನ್ಯಾಸಕರಾದ ಶಹನಾಜ್ ಬೇಗಂ,ಸಮಿಉಲ್ಲಾ,ರಾಮಚಂದ್ರಪ್ಪ,ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂದರ್ಭದಲ್ಲಿ ಪ್ರಾಂಶುಪಾಲ ಜಗದೀಶ್,ಬಿಆರ್ ಸಿ ಡಿಡಿ ಹಾಲಪ್ಪ,ಉಪನ್ಯಾಸಕರಾದ ಮಂಜುನಾಥ್ ರೆಡ್ಡಿ,ಮಹಮ್ಮದ್ ಭಾಷ,ಹಳೇ ವಿದ್ಯಾರ್ಥಿಗಳಾದ ನಿವೃತ್ತ ಸೈನಿಕ ವಿರುಪಾಕ್ಷಿ,ಕಲ್ಲದೇವರಪುರ ಬಾಬು,ಅನಿಲ್ ಕುಮಾರ್,ತಾಸೀನ,ಬಸವರಾಜ್,ನೌಸಿಯಾ,ಸಮೀನಾಕೌಸರ್,ನೂರ್ ಅಹಮ್ಮದ್,ಶಿಲ್ಪ,ಡಾ.ಬಸವರಾಜ್,ಸೇರಿದಂತೆ ಇದ್ದರು.