ಫ್ರೆಬ್ರವರಿ ದಿನಾಂಕ_ 8_.9 ರಂದು ವಾಲ್ಮೀಕಿ ಜಾತ್ರ ಮಹೋತ್ಸವ ಅದ್ದೂರಿ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಬಿ .ದೇವೇಂದ್ರಪ್ಪ ಕರೆ ನೀಡಿದರು.
ಸುದ್ದಿ ಜಗಳೂರು
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಮಠದಲ್ಲಿ ಇದೆ ಫೆಬ್ರವರಿ 8, 9 ರಂದು ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದ್ದು ಜಾತ್ರ ಮಹೋತ್ಸವ ಎರಡು ದಿನಗಳ ಕಾಲ ನಾಯಕ ಸಮಾಜದ ಪರಂಪರೆ ಇತಿಹಾಸ ಸಂಸ್ಕೃತಿ ಸಾರುವ ನಿಟ್ಟಿನಲ್ಲಿ ಸಾಕ್ಷಿಯಾಗಲಿದೆ ಎಂದರು.
ಜಾತ್ರಾ ಸಂಭ್ರಮ
7 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಉತ್ಸವ ಪುಣ್ಯನಂದಪುರಿ ಸ್ವಾಮೀಜಿಗಳ ಪುಣ್ಯಸ್ಮರಣೆ ಹಾಗೂ ಶ್ರೀ ಪ್ರಸನ್ನಾನಂದ ಶ್ರೀಗಳ ಪಟ್ಟಾಧಿಕಾರ ಜಾತ್ರಮಹೋತ್ಸವ ಅದ್ದೂರಿಯಾಗಿ ಧರ್ಮಸಭೆ ವಿವಿಧ ವಿಚಾರಗೋಷ್ಠಿಗಳು ಶೈಕ್ಷಣಿಕ ಸಾಮಾಜಿಕ .ಅರ್ಥಿಕವಾಗಿ .ರಾಜಕೀಯವಾಗಿ ಬದಲಾವಣೆಗಾಗಿ ಸಂವಿಧಾನದ ಹಕ್ಕುಗಳಿಗಾಗಿ ಸಂಘಟಿತರಾಗಿ ಜಾಗೃತಿಗೋಳಿಸಲು ಜಾತ್ರಮಹೋತ್ಸವ ತೇರು ಸಾಂಸ್ಕೃತಿ ಪರಂಪರೆ ಸಾರುವ ಜಾತ್ರೆ ಯಶಸ್ವಿಯಾಗಲಿದೆ.
ಸಾಧಕರಿಗೆ ಸನ್ಮಾನ ನಿವೃತ್ತ ಸೇನೆಯ ಹರ್ತಿಕೋಟೆ ವೀರೆಂದ್ರ ಸಿಂಹರವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಹಾಗೂ ಚಲಚಿತ್ರ ನಟ ಮಾಜಿ ಸಂಸದ ಶಶಿಕುಮಾರರವರಿಗೆ ಮದಕರಿ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಆದ್ದರಿಂದ ಮಠದ ಸದ್ಭಕ್ತರು ಸಹೋದರರ ಸಮಾಜದ ಬಾಂದವರು ಜಾತ್ಯತೀತವಾಗಿ .ಪಕ್ಷತೀತವಾಗಿ ಭಾಗವಹಿಸಿ ಜಾತ್ರ ಕಾರ್ಯಕ್ರಮವನ್ನ ಯಶಸ್ವಿಗೋಳಿಸುವಂತೆ ತಿಳಿಸಿದರು.ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಾ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ವಿವಿದ ಗಣ್ಯ ಅಧಿಕಾರಿಗಳು ಉದ್ಗಾಟನೆಯಲ್ಲಿ ಪಾಲ್ಗೊಳಲಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಬಾಗಗಳಲ್ಲಿ ಜಾತ್ರಮಹೋತ್ಸವ ಆಯೋಜನೆ ಮಾಡಿ ಬೆಳಕಿಗೆ ತರುವ ಚಿಂತನೆಯಿದೆ . ಪೀಠಾಧಿಪತಿಗಳು ರಾಜ್ಯಾದ್ಯಂತ ಸಂಘಟನೆ ಮಾಡಲಿದ್ದು ಸಂಸ್ಕಾರ ಸಾರುವ ಮಠ ಸಾರ್ಥಕವಾಗಲಿದೆ ಶಾಸಕರು
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರ ಸಮಿತಿ ಸಂಚಾಲಕರಾದ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಆವರಣದಲ್ಲಿ ಜರುಗಲಿರುವ ಜಾತ್ರಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ನಾಯಕ ಸಮಾಜದ ಬಂಧುಗಳು ಲಕ್ಷಾಂತರ ಭಕ್ತರು ಆಗಮಿಸುವರು
ವಾಲ್ಮೀಕಿ ಜಾತ್ರಾ ಮಹೋತ್ಸವ, ಮಠದ ವಾರ್ಷಿಕೋತ್ಸವ, ಲಿಂ.ಪುಣ್ಯಾನಂದಪುರಿ ಶ್ರೀಗಳ ಪುಣ್ಯಾರಾಧನೆ ಹಾಗೂ ಪ್ರಸನ್ನಾನಂದ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಜಾತ್ರಾ ಮಹೋತ್ಸವ ಸಮಿತಿ ಅದ್ಯಕ್ಷರಾದ ಶಾಸಕ ಬಿ ದೇವೇಂದ್ರಪ್ಪರವರ ನೇತೃತ್ವದಲ್ಲಿ ಹಾಗೂ ಶ್ರೀಗಳ ನೇತೃತ್ವದಲ್ಲಿ ವಿಜೃಂಭಣಿಯಿಂದ ಜಾತ್ರ ಉತ್ಸವ ಬರದಿಂದ ಜರುಗಲಿದೆ..
.ಹಿಂದುಳಿದ ವಾಲ್ಮೀಕಿ ಸಮಾಜದ ಸಂಘಟನೆ ಹಾಗೂ ವಾಲ್ಮೀಕಿಯವರ ಸಂದೇಶ ಪ್ರಚಾರಕ್ಕಾಗಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ಶ್ರೀಗಳ ಮಾರ್ಗದರ್ಶನದಲ್ಲಿ ಆಯೋಜಿಸುವ ವಿಶಿಷ್ಟ ಜಾತ್ರೆಯಾಗಲಿದೆ.
ಈಗಾಗಲೇ ಜಾತ್ರ ಉತ್ಸವ ಸಮಿತಿ ಅಧ್ಯಕ್ಷರಾದ ಶಾಸಕರಾದ ಬಿ ದೇವೇಂದ್ರಪ್ಪರವರು ಹಾಗೂ ನಾವುಗಳು ಶ್ರೀಮಠದ ಸ್ವಾಮೀಜಿಗಳು ರಾಜ್ಯಾದ್ಯಂತ ಸಂಚರಿಸಿ ಜಾತ್ರೆಗೆ ಆಗಮಿಸುವಂತೆ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನ ಮತ್ತು ಉಪಾ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇನ್ನಿತರೆ ಮಂತ್ರಿಮಹೋದಿಯರು ಹಾಗೂ ಸಮಾಜದ ಜನಪ್ರತಿನಿಧಿಗಳನ್ನ ವಿವಿಧ ಗಣ್ಯರನ್ನು ಆಹ್ವಾನಿಸಿ ಸಂಭ್ರಮದ ಉತ್ಸವಜಾತ್ರೆಗೆ ಆಗಮಿಸುವಂತೆ ಕರೆ ನೀಡಿ ಸಿದ್ದತೆಗೊಂಡು ಎಲ್ಲೆಡೆಯ ಜನರು ಉತ್ಸವದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ನಾಯಕ ಸಮಾಜದ ಅದ್ಯಕ್ಷರಾದ ಬಡಪ್ಪ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಲ್ ತಿಪ್ಪೇಸ್ವಾಮಿ. ಮುಖಂಡರಾದ ಸಣ್ಣಸೂರಜ್ಜ.ನಿಂಗನಹಳ್ಳಿ ಕೃಷ್ಣಮೂರ್ತಿ. ವಕೀಲರಾದ ಮರೇನಹಳ್ಳಿ ಬಸವರಾಜ್ .ನಾಯಕ ಸಮಾಜದ ಮಾಜಿ ಕಾರ್ಯಧರ್ಶಿ ಲೋಕಣ್ಣ.ಕಾಂಗ್ರೇಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್.ಮಹೇಶಣ್ಣ. ಪುರುಷೋತ್ತಮ್ಮ. ಸೇರಿದಂತೆ ಮುಂತಾದವರು ಹಾಜುರಿದ್ದರು.
.
.