ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ನಿಂದ ವಿನೋದಮ್ಮ ತಂದೆ ಮೋಟೆಗೌಡ್ರು ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಕರಕಲಾದ ಘಟನೆ ಜರುಗಿದೆ.
ಸುದ್ದಿ ಜಗಳೂರು.
ಜಗಳೂರು ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದ ವಿನೋದಮ್ಮ ತಂದೆ ಮೋಟೆಗೌಡ್ರು ಎಂಬುವ ರೈತರ ಜಮೀನು ಕಣವೋಂದರಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ಶಾರ್ಟ್ ಸರ್ಕ್ಯೂಟ್ ನಿಂದ ರಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಮಾರು ಒಂದು ಲಕ್ಷ ಮೌಲ್ಯ ಬೆಲೆ ಬಾಳುವ ಬಣವೆ ಬೆಂಕಿಗೆ ಆಹುತಿಯಾಗಿದೆ .ಜಾನುವಾರುಗಳಿಗೆ ಸಂಗ್ರಹಿಸಿಟ್ಟ ಬಣವೆ ಆಹಾರವಾಗಬೇಕಿದ್ದ ರಾಗಿ ಹುಲ್ಲಿನ ಬಣವೆ ಬೆಂಕಿ ಪಾಲಾಗಿದೆ ಎಂದು ರೈತ ಮಹಿಳೆ ಕಂಗಾಲಾಗಿದ್ದಾರೆ.
ಸಂಬಂಧಿಸಿದ ಅಗ್ನಿ ಶಾಮಕ ಠಾಣೆ ವಾಹನಕ್ಕೆ ಕರೆ ಮಾಡಿದರೆ ಅಂಬುಲೆನ್ಸ್ ಸ್ಥಳೀಯವಾಗಿ ಲಭ್ಯವಿರುವುದಿಲ್ಲ ಎಂದು ಬೇಜವಾಬ್ದರಿಯಾಗಿ ಉತ್ತರಿಸಿ ದಾವಣಗೆರೆ ಬೆಂಗಳೂರಿಗೆ ತೆರಳಿದೆ ಎಂದು ಉಡಾಪೆ ಉತ್ತರ ನೀಡಿದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರಾಮಸ್ಥರ ಒತ್ತಾಯದ ಮೇರೆಗೆ ದಾವಣಗೆರೆ ಅಗ್ನಿ ಶಾಮಕ ಠಾಣೆ ಅಧಿಕಾರಿಗಳಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಅಲ್ಪಸ್ವಲ್ಪವಿದ್ದ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ದೊಡ್ಡ ದುರಂತ ತಪ್ಪಿದಂತಾಗಿದೆ ಎಂದು ಗ್ರಾಮದ ಲಕ್ಷ್ಮಣ ಹಾಗೂ ಕಂಪೇಳೆಶ್ ಪ್ರತಿಕ್ರಿಯಿಸಿದರು.
ತಾಲೂಕಿನ ಬಿಳಿಚೋಡು ಹೊಬಳಿ ವ್ಯಾಸಗೊಂಡನಹಳ್ಳಿ ಗ್ರಾಮದ ವಿನೋದಮ್ಮ ತಂದೆ ತಿಪ್ಪೇಸ್ವಾಮಿ ಎನ್ನುವವರು ರಾಗಿ ಹುಲ್ಲನ್ನು ಬಣವೆ ಜಮೀನಿನ ಕಣವೊಂದರಲ್ಲಿ ಒಟ್ಟಿದ್ದರು ಭಾನುವಾರ ಬೆಳಿಗ್ಗೆ 12 ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದೆ,
ರಾಗಿ ಹುಲ್ಲಿನ ಬಣವೆಗೆ ಹೊತ್ತಿದ ಬೆಂಕಿ : ಸುಮಾರು ಒಂದು ಲಕ್ಷ ಮೌಲ್ಯದ ಹುಲ್ಲು ಭಸ್ಮ
ಸುಮಾರು ಒಂದು ಲಕ್ಷ ಮೌಲ್ಯದ ಹುಲ್ಲು ಭಸ್ಮ
ಒಂದು ಕಡೆ ಬಿಸಿಲಿನ ತಾಪಕ್ಕೆ ಒತ್ತಿ ಉರಿದಿದೆ. ಈ ಸಂದರ್ಭದಲ್ಲಿ ಬೆಂಕಿ ತಗುಲಿದ ಪರಿಣಾಮ ಬಣವೆ ಹಾಕಿದ್ದ ಸುಮಾರು 2 ಲೋಡ್ ರಾಗಿ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ಗ್ರಾಮದಲ್ಲಿ ಸಂಭವಿಸಿದೆ,

ಬೆಂಕಿಯನ್ನು ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರು ಸಾಧ್ಯವಾಗದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ,
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಅಷ್ಟರಲ್ಲಿ ಹುಲ್ಲು ಸುಟ್ಟು ಭಸ್ಮವಾಗಿದೆ, ಹಸುಗಳಿಗಾಗಿ ಶೇಖರಣೆ ಮಾಡಿ ಇಟ್ಟಿದ್ದ ರಾಗಿ ಹುಲ್ಲು ಬೆಂಕಿಗಾಹುತಿಯಾಗಿದ್ದು ರೈತ ಮಹಿಳೆ ವಿನೋದಮ್ಮ ತಂದೆ ಮೋಟೆಗೌಡ್ರು ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಕಾರಣ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ನೊಂದ ಮಹಿಳೆ ತಮ್ಮ ಅಳಲನ್ನು ಶುಕ್ರದೆಸೆ ಕನ್ನಡ ವೆಬ್ ನ್ಯೂಸ್ ನೊಂದಿಗೆ ತೋಡಿಕೊಂಡಿದ್ದಾರೆ.