ಸಂತ ಸೇವಾಲಾಲ್‌ ಪವಾಡ ಪುರುಷ
ಸೇವಾಲಾಲ್ ದೂಬದಹಳ್ಳಿ ಮಠದ ಪ್ರಕಾಶ ಸ್ವಾಮಿಜೀ ಅಭಿಪ್ರಾಯಪಟ್ಟರು.

ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಜಾಗೃತಿ ಮೆರವಣಿಗೆಯಲ್ಲಿ ಭಾಗವಹಿಸಿ ಉದ್ದೇಶಿಸಿ ಮಾತನಾಡಿದರು.
ಬಂಜಾರ ಸಮುದಾಯದ ಕುಲ ಸಂತ ಸೇವಾಲಾಲ್ ಒಬ್ಬ ಪವಾಡ ಪುರುಷರಾಗಿದ್ದು ಒಂದು ಕಲ್ಲುನ್ನು ನಗರಿಯನ್ನಾಗಿ ಮಾಡಿ ಮಣ್ಣನ್ನು ಪಾಯಸವನ್ನಾಗಿ ಮಾಡಿ ಪುನ ಗಂಡನ್ನು ಹೆಣ್ಣನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ .ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ತೊಡೆದು ಹಾಕಲು ಶ್ರಮಿಸಿದವರಲ್ಲಿ ಸಂತ ಸೇವಾಲಾಲ್‌ ಕೂಡ ಒಬ್ಬರಾಗಿದ್ದರು . ಬುಡಕಟ್ಟು ಸಮುದಾಯದಲ್ಲಿ ಹುಟ್ಟಿ ಸೇವಾ ಮನೋಭಾವದಿಂದ ಸಮುದಾಯದ ರಕ್ಷಣೆಗೆ ನಿಂತು ದೇಶದ ಮೌಖಿಕ ಚರಿತ್ರೆಯಲ್ಲಿ ಕೆಲ ಪವಾಡ ಪುರುಷರು ಜನಪದ ಕಥೆ ಮತ್ತು ಗಾಯನದಲ್ಲಿ ಉಳಿದಿದ್ದಾರೆ. ತಾಳೆಗರಿಯನ್ನು ತಾಳವನ್ನಾಗಿಸಿ ಹಾಡು ಕಟ್ಟುತ್ತಿದ್ದರು. ಪ್ರಕೃತಿಯಲ್ಲಿನ ಪ್ರಾಣಿ, ಪಕ್ಷಿಗಳೊಂದಿಗೆ ಅವರು ಸಂಭಾಷಣೆ ನಡೆಸುತ್ತಿದ್ದರು ಎಂಬುದು ಪ್ರತೀತಿ. ‌ಅವರೊಬ್ಬ ಸಮಾಜವಾದಿ, ಆರ್ಥಿಕತಜ್ಞ, ವಿಚಾರವಾದಿ, ಸಂಘಟಕ ಎಂದು ಅನೇಕ ಆಯಾಮಗಳಿಂದ ಸಮುದಾಯದ ಜನರು ಗುರುತಿಸುತ್ತಾರೆ. ಇದೀಗ ಪ್ರಸ್ತುತ 144 ದೇಶಗಳಲ್ಲಿ ಬಂಜಾರ ಸಮುದಾಯವಿದೆ’ ಎಂದು ಸ್ಮರೀಸಿದರು.

ಇವರು ಮೂಲತ ಸೂರಗೊಂಡನ ಕೊಪ್ಪದ ಎಂಬಲ್ಲಿ ಜನಿಸಿ ಮಹಾರಾಷ್ಟ್ರದ ಪೂರ್ವಗಡ್ಡೆ ಎಂಬಲ್ಲಿ ಐಕ್ಯವಾಗಿದ್ದಾರೆ‌ಸಮಾಜದವರು ನಮ್ಮ ಇತಿಹಾಸ ಪರಂಪರೆ ಅರಿಯಬೇಕಿದೆ .


ಶೀಘ್ರವೇ ಸೇವಾಲಾಲ್ ಸಮುದಾಯದವರಿಗೆ ಸಮುದಾಯ ಭವನ ನಿರ್ಮಿಸಲು ಸ್ಥಳ ಕಲ್ಪಿಸಲು ಕ್ಷೇತ್ರದ ಶಾಸಕರು ಚಿಂತನೆ ನಡೆಸಿದ್ದಾರೆ ಕಾಂಗ್ರೇಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯಧರ್ಶಿ ಕೀರ್ತಿಕುಮಾರ್ ತಿಳಿಸಿದರು

ಇಲ್ಲಿನ ಬಂಜಾರ ಜನಾಂಗದ ವತಿಯಿಂದ ಏರ್ಪಡಿಸಲಾಗಿದ್ದ ಸಂತ ಸೇವಾಲಾಲ್ 286 ನೇ ಜಯಂತ್ಯುತ್ಸವದಲ್ಲಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಲೋಕಕ್ಕೆ ಒಳಿತನ್ನ ಬಯಿಸಿದ ಸಂತ ಯಾರದಾರು ಇದ್ದರೆ ಅದು ಸೇವಾಲಾಲ್ ಸ್ವಾಮೀಜಿ ಎಂದರು ದೇಶದಲ್ಲಿ ಅನೇಕ ಸಾಧು, ಸಂತರು, ಶರಣರು, ಪವಾಡ ಪುರುಷರಲ್ಲಿ ಇವರು ಕೂಡ ಒಬ್ಬರು ಇಂತ ಮಹಾನ್ ಪುರಷರು ಪುಣ್ಯದ ಕಾರ್ಯಗಳಿಂದ ಸಹಕಾರಿಯಾಗಿದೆ ಎಂದರು.
.ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ ಪಾಲಯ್ಯ ಮಾತನಾಡಿ ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ತೊಡೆದು ಹಾಕಲು ಶ್ರಮಿಸಿದವರಲ್ಲಿ ಸಂತ ಸೇವಾಲಾಲ್‌ ಕೂಡ ಒಬ್ಬರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದರೂ ಸೇವಾ ಮನೋಭಾವದಿಂದ ಸಮುದಾಯದ ರಕ್ಷಣೆಗೆ ನಿಂತ ಮಹನೀಯ ಎಂದು ಸ್ಮರಿಸಿದರು. ಇದೆ ಸಂದರ್ಭದಲ್ಲಿ ಮಹಿಳೆಯರು ಯುವತಿಯರು ಲಂಬಾಣಿ ಸಮುದಾಯದ ಉಡುಗೆ ತೋಡಿಗೆಯೊಂದಿಗೆ ಶೃಂಗಾರಗೊಂಡು ಭತ್ತದ ಪೈರಿನ ಕುಂಡದ ತಿಜ್ ನ್ನು ತಲೆ ಮೇಲೆ ಹೊತ್ತು ಲೋಕಕ್ಕೆ ಸದಾ ಹಚ್ಚಹಸಿರು ಮೂಡಲಿ ಜಗವೆಲ್ಲ ಶಾಂತಿ ಸಮೃದ್ದಿ ನೆಲೆಸಲಿ ಎಂದು ಮೆರವಣಿಗೆಯಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು


.
ನಂತರ ಮೆರವಣಿಗೆ ಮೂಲಕ ತಹಶೀಲ್ದಾರ್ ರವರ ಕಛೇರಿಗೆ ತೆರಳಿ ಸಮಾಜದ ಶೈಕ್ಷಣಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ದಿಗಾಗಿ ಸಮುದಾಯದವರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ನಮಗೆ ಒಂದು ನಿವೇಶನ ನೀಡಿ ಸಮುದಾಯ ಭವನ ನಿರ್ಮಿಸಿ ಕೊಡುವಂತೆ ತಾಲ್ಲೂಕು ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಪಂ ಡಿ ಎಸ್ ಕೃಷ್ಣಮೂರ್ತಿ.ಪಪಂ ಅಧ್ಯಕ್ಷ ನವೀನ್ ಕುಮಾರ್.ಸೇವಾಲಾಲ್ ಸಮುದಾಯದ ಗೌರವಾದ್ಯಕ್ಷ ಪೀರನಾಯ್ಕ.ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ ನಾಯ್ಕ್.ಪುರಷೋತ್ತಮ ನಾಯ್ಕ್ .ಕೃಷ್ಣಮೂರ್ತಿನಾಯ್ಕ್ .ಸಹೋದರ ಸಮಾಜದ ಮುಖಂಡ ಮಹೇಶ್ವರಪ್ಪ. ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಷಂಷೀರ್ ಆಹಮದ್.ಮುಖಂಡ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ. .ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್.ಕುಮಾರನಾಯ್ಕ್.ಧರ್ಮನಾಯ್ಕ್.ಸತೀಶನಾಯ್ಕ್.ಸೇರಿದಂತೆ ಸಮಾಜದವರ ಬಾಂದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!