filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಗುರುವಾರ ಹಮ್ಮಿಕೊಂಡಿದ್ದ, ‘ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರಿಗೆ ಮನವಿ ಸಲ್ಲಿಸುವ ಮಾದಿಗ ಸಂಬಂಧಿತ ಜಾತಿಗಳ ಸಮನ್ವಯ ಸಭೆ’ಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ದಿನಾಂಕ 13_2_2025 ರಂದು ಬೆಂಗಳೂರು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಮಾದಿಗ ಮತ್ತು ಸಂಬಂಧಿತ ಜಾತಿಗಳ ಸಮನ್ವಯ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರಿಗೆ ಮನವಿ ಸಲ್ಲಿಸಿ ಮಾಜಿ ಸಚಿವ ಎಚ್ ಆಂಜನೇಯ ನೇತೃತ್ವದಲ್ಲಿ ಒಗಟ್ಟಿನ ಪ್ರದರ್ಶನದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.

‘ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯ ಅಗತ್ಯವಿದೆ. ಅದು ಬೇಕೋ ಬೇಡವೋ ಎಂಬ ಚರ್ಚೆ ಅನಗತ್ಯ. ಸುಪ್ರೀಂ ಕೋರ್ಟ್‌ ಅದರ ಅಗತ್ಯವನ್ನು ಹೇಳಿದ್ದು, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಿ ಎಂದು ಹೇಳಿದೆ. ಆದ್ದರಿಂದ, ಒಳ ಮೀಸಲಾತಿಯನ್ನು ಹೇಗೆ ಕೊಡಬೇಕು? ಯಾರಿಗೆ ಎಷ್ಟು ಕೊಡಬೇಕು ಎಂಬ ಬಗ್ಗೆ ನಿರ್ಧಾರವಾಗಬೇಕಿದೆ’ ಎಂದರು.

‘ಕೆಲವು ಸಮುದಾಯದವರು ಮೀಸಲಾತಿಯನ್ನು ಪಡೆದುಕೊಂಡು ಉನ್ನತಮಟ್ಟಕ್ಕೆ ಹೋಗಿದ್ದಾರೆ. ಕೆಲವರು ಇನ್ನೂ ಕೆಳ ಸ್ತರದಲ್ಲೇ ಇದ್ದಾರೆ. ಅವರು ಮತ್ತು ಇವರ ಮಧ್ಯೆ ಸಂಘರ್ಷವಾಗದಂತೆ ಮೀಸಲಾತಿ ನೀಡಬೇಕು. ಎಲ್ಲರೂ ಸಹೋದರತ್ವ ಭಾವದಿಂದ ಇದನ್ನು ನೋಡಬೇಕು’ ಎಂದು ಹೇಳಿದರು.

‘ಉಳ್ಳವರಿಗೆ ಸೌಲಭ್ಯ ತಡವಾದರೆ ಸಮಸ್ಯೆಯಾಗುವುದಿಲ್ಲ, ಹಸಿದವರಿಗೆ ಏನೂ ಸಿಗದಿದ್ದರೆ ಸಾಯುತ್ತಾರೆ. ಇದನ್ನೆಲ್ಲ ಪರಿಗಣಿಸಿ ಆಯೋಗ ಸಲಹೆಗಳನ್ನು ನೀಡುತ್ತದೆ. ನೀವೆಲ್ಲ ನೀಡಿರುವ ಸಲಹೆ, ಮನವಿಗಳನ್ನು ಪರಿಶೀಲಿಸಿ, ಹಲವು ವಿಷಯಗಳನ್ನು ಮಾರ್ಗಸೂಚಿಯಾಗಿಸಲಿದ್ದೇವೆ’ ಎಂದರು.

ಮಚ್ಚಿಗ, ಡೋರ್‌, ದಕ್ಕಲಿಗ ಸಮುದಾಯದ ಮುಖಂಡರು ಮಾತನಾಡಿ, ‘ನಮ್ಮ ಸಮುದಾಯವು ಮಾದಿಗ ಸಮುದಾಯವನ್ನು ಅಣ್ಣ ಎಂದು ಒಪ್ಪಿಕೊಂಡಿದೆ. ಅವರೊಂದಿಗೆ ನಾವಿರುತ್ತೇವೆ’ ಎಂದು ಹೇಳಿದರು.

‘ಆಳುವ ವರ್ಗ ದಿಕ್ಕು ತಪ್ಪಿಸುತ್ತದೆ…

‘ ‘ಮೀಸಲಾತಿ ಎಂಬುದು ಶಾಶ್ವತ ಪರಿಹಾರ ಅಲ್ಲ. 100 ಉದ್ಯೋಗಾವಕಾಶಗಳಲ್ಲಿ 98 ಖಾಸಗಿ ಸಂಸ್ಥೆಗಳಲ್ಲಿರುತ್ತವೆ. ಅಲ್ಲಿ ಮೀಸಲಾತಿ ಇಲ್ಲ. ಸರ್ಕಾರಿ ವಲಯದಲ್ಲಿ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ 2.74 ಲಕ್ಷ ಹುದ್ದೆ ಖಾಲಿ ಇವೆ. ಅವರು ನೇಮಕವನ್ನೇ ಮಾಡಿಕೊಳ್ಳದಿದ್ದರೆ ಮೀಸಲಾತಿ ಇರುವುದರಿಂದ ಪ್ರಯೋಜನವೇನು? ಆಳುವ ವರ್ಗ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತದೆ. ಅವರ ಬಗ್ಗೆ ಚರ್ಚಿಸಿ ಚಿಂತಿಸಿ ನಮ್ಮ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂದು ನಾಗಮೋಹನ್‌ದಾಸ್‌ ಕಿವಿಮಾತು ಹೇಳಿದರು. ‘ಆಯೋಗ ರಚನೆಯಾದ ಒಂದೂವರೆ ತಿಂಗಳಲ್ಲಿ 2500ಕ್ಕೂ ಹೆಚ್ಚು ಮನವಿಗಳು ಸಲ್ಲಿಕೆಯಾಗಿವೆ. ಎರಡು ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಚರ್ಚೆ ನಡೆಸಿದ್ದೇನೆ. ನಿಮ್ಮ ಎಲ್ಲ ಸಲಹೆ ಮನವಿಗಳನ್ನು ಕಿವಿಯಿಂದಲ್ಲ ಹೃದಯದಿಂದ ಆಲಿಸಿದ್ದೇನೆ. ನಿಮ್ಮ ನೋವು ಕಷ್ಟದ ಅರಿವು ನನಗಿದೆ’ ಎಂದರು.

ಸಾಮಾಜಿಕ ನ್ಯಾಯ ಕೊಡಿಸಿ:ಮಾಜಿ ಸಚಿವ ಆಂಜನೇಯ

‘ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು’ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಮನವಿ ಮಾಡಿದರು. ಮಾದಿಗ ಸಮುದಾಯದಲ್ಲಿ ಸಮಗಾರ ಚಮ್ಮಾರ ಮೋಚಿ ಡೋರ್‌ ದಕ್ಕಲಿಗ ಸೇರಿದಂತೆ 45ಕ್ಕೂ ಹೆಚ್ಚು ಒಳ ಪಂಗಡಗಳಿವೆ. ಅವರನ್ನೆಲ್ಲ ಮಾದಿಗ ಸಮುದಾಯದೊಂದಿಗೇ ಪರಿಗಣಿಸಬೇಕು. ಆದಿ ಜಾಂಬವ ಆದಿ ದ್ರಾವಿಡ ಆದಿ ಆಂಧ್ರ ಎಂದು ದಾಖಲಿಸದೆ ನಿರ್ದಿಷ್ಟ ಪಂಗಡದ ಹೆಸರನ್ನೇ ನಮೂದಿಸಬೇಕು’ ಎಂದು ಕೋರಿದರು. ಈ ಸಂದರ್ಭದಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ . ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ.ಬಾಬು ಜಗಜೀವನ್ ರಾಮ್ ಲಿಡ್ಕರ್ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ. ದಲಿತ‌ಹೋರಾಟಗಾರರಾದ ಅಂಬಣ್ಣ .ಅನೇಕ ಗಣ್ಯರು ಮಾನ್ಯರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!