ಕಾಳಸಂತೆ ಮದ್ಯವರ್ತಿಗಳಿಗೆ ಆವಕಾಶ ನೀಡಬೇಡಿ ಅಪ್ಪಟ್ಟ ರೈತರಿಗೆ ಖರಿದಿ ಕೇಂದ್ರ ಪ್ರಾರಂಭವಾಗಿದೆ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು.
ಸುದ್ದಿ ಜಗಳೂರು
ಜಗಳೂರು ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಾಗಿ ಖರಿದಿ ಕೇಂದ್ರ ಉದ್ಗಾಟನೆ ಮಾಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ರೈತರು ಖರಿದಿ ಕೇಂದ್ರವನ್ನ ಸದುಪಯೋಗಪಡೆದುಕೊಳ್ಳಬೇಕು.
ಒಪನ್ ಮಾರುಕಟ್ಟೆಯಲ್ಲಿ ಕೇವಲ 2300 ಬೆಲೆಯಿದ್ದರೆ ಮಾರುಕಟ್ಟೆಯಲ್ಲಿ ಸರ್ಕಾರ ಎರಡುಪಟ್ಟು ಖರಿದಿ ಮಾಡಲಿದೆ ರೈತರು ಸರಿಯಾದ ರೀತಿ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೇ ನೀಡಿದರು.
ಕಲಬೆರಕೆ ಬೇಡ ಕಲಬೆರಕೆ ಮಾಡುವವರೆ ದಲ್ಲಾಳಿಗಳು ರೈತರ ಹೆಸರಿನಲ್ಲಿ ಲೋಪವಾದರೆ ನಾನು ಸಹಿಸುವುದಿಲ್ಲ ಕಳೆದ ಬಾರಿ ಆದ ಅವ್ಯವಹಾರ ಹಿಡಿ ರಾಜ್ಯಕ್ಕೆ ಸುದ್ದಿಯಾಗಿ ಅ ಕಪ್ಪು ಚುಕ್ಕೆಯಿದೆ ಆದ್ದರಿಂದ ಅದಿಕಾರಿಗಳು ನಿಗಾವಹಿಸಿ ಕೆಲಸ ಮಾಡುವಂತೆ ತಿಳಿಸಿದರು .
ಜಿಲ್ಲಾ ಆಹಾರ ನಾಗರೀಕ ಸರಾಬರಾಜು ಇಲಾಖೆ ವ್ಯವಸ್ಥಾಪಕ ಮಹೇಂದ್ರ ಮಾತನಾಡಿ
4200 ರೂಗಳ ಗರೀಷ್ಢ ಬೆಂಬಲ ಬೆಲೆ ನೀಡಿದೆ ಸರ್ಕಾರ.
ಜಗಳೂರಿನಲ್ಲಿ ಪ್ರಮುಖವಾಗಿ ರಾಗಿ ಖರಿದಿ ಕೇಂದ್ರ ಪ್ರಾರಂಭ ಮಾಡಲು ಆವಕಾಶ ಕಲ್ಪಿಸಿ ಕೊಟ್ಟ ಸರ್ಕಾರಕ್ಕೆ ಕೃತಜ್ಘತೆ ಸಲ್ಲಿಸಬೇಕು. .2022 ರ ಸಾಲಿನಲ್ಲಿ ನಡೆದ 5 ಕೋಟಿ ನಷ್ಠವಾಗಿದ್ದ ಹಿನ್ನಲೆಯಲ್ಲಿ ಕಪ್ಪು ಚುಕ್ಕೆಯಾಗಿ ಸರ್ಕಾರ ಖರಿದಿ ಕೇಂದ್ರ ರದ್ದಾಗುವಂತಿತ್ತು ಶಾಸಕರ ಒತ್ತಾಸೆ ಮೇರೆಗೆ ಪುನ ರಾಗಿ ಕೇಂದ್ರ ಆರಂಭವಾಗಿದೆ ರೈತರು ಸರಿಯಾದ ರೀತಿ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಆಹಾರ ನಾಗರೀಕ ಇಲಾಖೆ ವ್ಯವಸ್ಥಾಪಕ ಮನೋಜ್ . ಕಾಂಗ್ರೇಸ್ ಮುಖಂಡ ಬಿ.ಮಹೇಶ್ವರಪ್ಪ. ಮುಖಂಡರಾದ ಪುಟ್ಟಣ್ಣ. ರೈತ ಸಂಘದ ಮುಖಂಡ ನಿಂಗಪ್ಪ.ಸೇರಿದಂತೆ ಹಾಜುರಿದ್ದರು.