ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ.
ಜಗಳೂರು ಮಾ.25:ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬಿಜೆಪಿ ಪಕ್ಷದ ವತಿಯಿಂದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂವಿಧಾನವಿರೋಧಿ ಹೇಳಿಕೆ ಖಂಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಎಸ್ ವಿ.ರಾಮಚಂದ್ರ ಮಾತನಾಡಿ,
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಮತ್ತು ಬುದ್ದಿಭ್ರಮಣೆ ಹೊಂದಿ ಅಧಿಕಾರದ ಅಮಲು ನೆತ್ತಿಗೇರಿದೆ.ಭ್ರಷ್ಟ. ಸರ್ಕಾರ ಕಿತ್ತೊಗೆಯಲು ರಾಜ್ಯವ್ಯಾಪಿ ಹೋರಾಟ ಮಾಡಲಾಗುತ್ತಿದೆ.ಪವಿತ್ರವಾದ ಸ್ಥಳ ವಿಧಾನಸೌದದಲ್ಲಿ ಈ ರೀತಿ ಹೇಳಿಕೆ ಖಂಡನೀಯ,ಸಂವಿಧಾನಕ್ಕೆ ಮಾಡಿದ ಅಪಚಾರಕ್ಕೆ ನಮ್ಮ ವಿರೋಧವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಕರೆಗೆ ಬೆಂಬಲಿಸಿ ಹೊರಾಟ ನಡೆಸಲಾಗುತ್ತಿದೆ.ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿರದ ಧರ್ಮಾಧಾರಿತ ಮೀಸಲಾತಿ ಇಲ್ಲದಿದ್ದರೂ ಮತಬ್ಯಾಂಕ್ ಗಾಗಿ ಧರ್ಮದ ಓಲೈಕೆಗಾಗಿ ಡಿಕೆ ಶಿವಕುಮಾರ್ ಅವರು ನೀಡಿರುವ ಸಂವಿಧಾನ ವಿರೋಧಿ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ ಆರ್ ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷರು ಹಾಗೂ ಬಿಜೆಪಿ ಎಸ್ ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ರಾದ ಪೂಜಾರ್ ಸಿದ್ದಪ್ಪ ಮಾತನಾಡಿ ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಅಧಿಕಾರದ ಗದ್ದುಗೆ ಹಿಡಿದು ಸಂವಿಧಾನ ವರೋಧಿ ಹೇಳಿಕೆ ನೀಡಿದ ಡಿ .ಕೆ ಶಿವಕುಮಾರ್ ದ್ರೋಹಿ ಎಂದರು .
ಸಂದರ್ಭದಲ್ಲಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟೆ,ಜೆವಿ ನಾಗರಾಜ್,ದೇವಿಕೆರೆ ಶಿವಕುಮಾರ್ ಸ್ವಾಮಿ,ಎ.ಎಂ.ಮರುಳಾರಾಧ್ಯ, ಡಾ .ಬಿ ಆರ್ ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷರಾದ ಪೂಜಾರ್ ಸಿದ್ದಪ್ಪ . ಓಬಳೇಶ್,ಅರವಿಂದಪಾಟೀಲ್,ಫಣಿಯಾಪುರ ಲಿಂಗರಾಜ್,ಅನಿಲ್, ರೇವಣ್ಣ,ಪ.ಪಂ ಸದಸ್ಯ ಪಾಪಲಿಂಗಪ್ಪ,ತಿಮ್ಮರಾಯಪ್ಪ,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.