ಸರ್ಕಾರಿ ನಿರ್ದೇಶನದಂತೆ ಡಾ. ಬಿ ಅರ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಅರ್ಥಪೂರ್ಣವಾಗಿ ಅಚರಿಸಲು ಸಜ್ಜು ತಹಶೀಲ್ದಾರ್ ಸೈಯದ್ ಕಲೀಂ ಉಲಾ
ಜಗಳೂರು ಸುದ್ದಿ :-
ಜಗಳೂರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ.ಬಿ ಆರ್ . ಅಂಬೇಡ್ಕರ್ ಹಾಗೂ ಬಾಬುಜಗಜೀವನ್ ರಾಮ್ ಜಯಂತಿ ಆಚರಣೆ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು ಜಗಳೂರು ತಾಲ್ಲೂಕಿನಲ್ಲಿ ಯಾವುದೇ ಜಯಂತಿ ಆಚರಣೆಗಳು ಎಲ್ಲಾರ ಸಹಕಾರದಿಂದ ಸಾಮರಸ್ಯದಿಂದ ಜಯಂತಿ ಅಚರಣೆ ಮಾಡಿಕೊಂಡು ಬರಲಾಗಿದೆ ಅದರಂತೆ ಈ ಬಾರಿ ದಿನಾಂಕ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಮತ್ತು ಏಪ್ರಿಲ್ 5 ರಂದು ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ರವರ ಜಯಂತಿಯನ್ನ ಎಲ್ಲಾ ಇಲಾಖೆ ಅಧಿಕಾರಿಗಳ ಮತ್ತು ತಾಲ್ಲೂಕಿನ ಪ್ರಗತಿಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರ ಸಹಕಾರದಿಂದ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ವಿಜೃಂಭಣಿಯಿಂದ ಅಚರಣೆಗೆ ತಮ್ಮ ಸಲಹೇಸೂಚನೆ ಮೇರೆಗೆ ತಾಲ್ಲೂಕು ಆಡಳಿತ ಸಜ್ಜಾಗಲಿದೆ ಎಂದು ತಿಳಿಸಿದರು
.ಸಭೆಗೆ ಕೆಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರಾದ ಹಿನ್ನಲೆಯಲ್ಲಿ ವಿವಿಧ ಸಂಘಟಕರು ನೊಟಿಸ್ ಜಾರಿ ಮಾಡಿ ಕ್ರಮಕೈಗೋಳ್ಳಿ ಎಂದು ಪಟ್ಟು ಹಿಡಿದರು ನಂತರ ತಹಶೀಲ್ದಾರ್ ರವರು ತಾವೇ ಇಲಾಖೆಯ ಕೆಲ ಗೈರಾದ ಅಧಿಕಾರಿಗಳಿಗೆ ಕರೆ ಮಾಡಿ ಸಭೆಗೆ ಬರುವಂತೆ ತಿಳಿಸಿದರು ಸಹ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ಕಂಡು ಬಂದಿತು .
.
ಈ ವೇಳೆ ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜಯಂತಿಯನ್ನು ಆಚರಣೆ ಮಾಡಲು ಇನ್ನೊಮ್ಮೆ ಕ್ಷೇತ್ರದ ಶಾಸಕರೊಂದಿಗೆ ಚರ್ಚೆ ಮಾಡುವ ಮೂಲಕ ಅದ್ದೂರಿ ಆಚರಣೆಗೆ ಸಿದ್ದರಾಗುವಂತೆ ಸಭೆಯಲ್ಲಿ ಸಲಹೇ ನೀಡಿದರು .
ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ ಕ್ಷೇತ್ರದ ಶಾಸಕರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೀಸಲಾತಿ ಸೌಲಭ್ಯದಲ್ಲಿ ಶಾಸಕರಾಗಿದ್ದು ಸಭೆ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು ಆದರೆ ಕಾರಣಂತರದಿಂದ ಅನ್ಯ ಕೆಲಸದ ಒತ್ತಡದ ಮೇರೆಗೆ ಬೆಂಗಳೂರಿಗೆ ತೆರಳಿರುತ್ತಾರೆ ಎಂಬ ಮಾಹಿತಿ ಇದೆ ಆದ್ದರಿಂದ ಮತ್ತೋಮ್ಮೆ ಅವರ ಘನ ಅಧ್ಯಕ್ಷತೆಯಲ್ಲಿ ಚರ್ಚಿಸಿ ಅರ್ಥಪೂರ್ಣ ಜಯಂತಿಗೆ ಆಚರಿಸೋಣ ಎಂದರು .ಸಂಬಂಧಿಸಿದ ಪೊಲೀಸ್ ಇಲಾಖೆ ಅಧಿಕಾರಿಗಳು ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಅಂಬೇಡ್ಕರ್ ಅನುಯಾಯಿಗಳು ಜಯಂತಿ ಆಚರಣೆ ಮಾಡಲು ಅನುಮತಿ ಕೋರಿ ಬರುವಂತ ಅನುಯಾಯಿಗಳಿಗೆ ಅನುಮತಿ ನಿರಾಕರಣೆ ಮಾಡದೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ದಲಿತ ಮುಖಂಡರುಗಳು ಹಾಗೂ ಪ್ರಗತಿಪರ ಸಂಘಟನೆ ಮುಖಂಡರು ತಾಲ್ಲೂಕು ಮಟ್ಟದ ಅಧಿಕಾರಿಗಳು ಬೆರಳಿಣಿಕೆಯಷ್ಟು ಬಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ತಹಶೀಲ್ದಾರ್ ಮದ್ಯ ಪ್ರವೇಶಿಸಿ ಸಮರ್ಥನೆ ಮಾಡಿಕೊಂಡ ಪ್ರಸಂಗ ಜರುಗಿತು.
ಸಭೆಯಲ್ಲಿ ಸಾಕುಷ್ಟು ವಿಚಾರಗಳು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ತಹಶೀಲ್ದಾರ್ ಇದು ಕೇವಲ ಪೂರ್ವಭಾವಿ ಸಭೆ ಸಭೆಗೆ ತಕ್ಕಂತೆ ಜಯಂತಿ ಆಚರಣೆ ಬಗ್ಗೆ ಮಾತನಾಡಿ ಎನ್ನುತ್ತಿದ್ದಂತೆ ಕೆಲ ಸಂಘಟನೆ ಪದಾಧಿಕಾರಿಗಳು ಎಸ್ ಸಿ . ಎಸ್. ಟಿ ಕಲ್ಯಾಣ ಇಲಾಖೆ ನಮ್ಮ ಮಾತೃ ಇಲಾಖೆ ಸೌಲಭ್ಯಗಳು ಬಗ್ಗೆ ಮಾತನಾಡುವುದು ಸಹಜ ಇಲ್ಲಿ ಜಲ್ವಂತ ಸಮಸ್ಯೆಗಳಿವೆ ತಾಲ್ಲೂಕು ದಂಡಾಧಿಕಾರಿಗಳು ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಾಪಂ ಇಓ ಕೆಂಚಪ್ಪ . ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ. .ಪಿ ಎಸ್ ಐ ಗಾದಲಿಂಗಪ್ಪ.ನಿವೃತ್ತ ಅಧಿಕಾರಿ ಬಿ. ಮಹೇಶ್. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ದಲಿತ ಮುಖಂಡ ಹಟ್ಟಿ ತಿಪ್ಪೇಸ್ವಾಮಿ. ಮಾಜಿ ಮಂಜಣ್ಣ. ಗೌರಿಪುರದ ಕುಬೇರಪ್ಪ. ದಸಂಸ ಸಂಚಾಲಕರಾದ ಸತೀಶ್ .ಕುಬೇರಪ್ಪ. ಓಬಣ್ಣ.ಗೌರಿಪುರದ ಸತ್ಯಮೂರ್ತಿ. ಮುಖಂಡರಾದ ಬಸವರಾಜ್ .ಎ ಎಸ್ ಎಪ್ ಐ ಸಂಘಟನೆ ಮುಖಂಡ ಮಾದಿಹಳ್ಳಿ ಮಂಜುನಾಥ. ಕ್ಯಾಸೆನಹಳ್ಳಿ ಹನುಮಂತಪ್ಪ..ವಿವಿಧ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜುರಿದ್ದರು .