ಸುದ್ದಿ:- ಬಳ್ಳಾರಿ

ಬಳ್ಳಾರಿ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ವತಿಯಿಂದ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಬಳ್ಳಾರಿಯ ಎಂಎಲ್ಸಿ ಯರಿಗೆ ಹಾಗೂ ಬಳ್ಳಾರಿ ನಗರದ ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ ಸರ್ ಅವರಿಗೆ ಮನವಿ ಪತ್ರವನ್ನು ನೀಡಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸುತ್ತೋಲೆಗಳ,(2024) ಅನುಸಾರವಾಗಿ ಸೈನಿಕರಿಗೆ ಮತ್ತು ಮಾಜಿ ಅರೆ ಸೈನಿಕರಿಗೆ ಜಮೀನು ಇಲ್ಲವೆ ಖಾಲಿ ನಿವೇಶನ ಕೊಡಬೇಕು ಎಂದು ಆದೇಶವಿರುತ್ತದೆ ಸೈನಿಕರು ಸುಮಾರು ವರ್ಷಗಳಿಂದ ಮನವಿ ಪತ್ರಗಳನ್ನು ಸಂಬಂಧಿಸಿದ ಮಾನ್ಯ ಜಿಲ್ಲಾಧಿಕಾರಿಗಳಿಗೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ. ನಗರ ಮತ್ತು ಗ್ರಾಮಾಂತರ ಶಾಸಕರಿಗೂ ಮಾಜಿ ಸಚಿವರಿಗೂ ಶಾಸಕರಿಗೂ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೂ ಸಹ ಇಲ್ಲಿಯವರೆಗೂ ಮನವಿ ಪತ್ರಗಳನ್ನು ನೀಡುತ್ತಲೇ ಬಂದಿದ್ದೇವೆ ಆದರೂ ಸಹ ಬಳ್ಳಾರಿ ಜಿಲ್ಲೆಯ ಒಬ್ಬ ಸೈನಿಕ ಮತ್ತು ಅರೆ ಸೈನಿಕರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಅರೆ ಸೇನೆ ಸಂಘದ ಪ್ರಧಾನ ಕಾರ್ಯಧರ್ಶಿ ಬಿ ಎನ್. ಪ್ರಹ್ಲಾದ್ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಅರೆ ಸೈನಿಕರ ನಿಷ್ಠೆ ಮತ್ತು ಪ್ರಾಮಾಣಿಕತೆಯ ಕರ್ತವ್ಯವನ್ನು ಗುರುತಿಸಿ ಹಾಗೂ ಸುಮಾರು 25 ವರ್ಷಗಳ ಕಾಲ ತನ್ನ ಕುಟುಂಬವನ್ನು ತೊರೆದು ಈ ಭಾರತಾಂಬೆಯ ಸೇವೆಯಲ್ಲಿ ಮುಡುಪಾಗಿಟಿದ್ದಾರೆ. ನಮ್ಮ ಸಾಧನೆಗಳನ್ನು ಗುರುತಿಸಿ ಸೈನಿಕನಿಗೆ ಅಧಿಕಾರಿಗಳು ಮತ್ತು ಶಾಸಕರು ಈ ವಿಷಯದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸೈನಿಕರಿಗೆ ನ್ಯಾಯ ಕೊಡಿಸಬೇಕೆಂದು ತಮ್ಮಲ್ಲಿ ಮತ್ತೊಮ್ಮೆ ಈ ಮನವಿ ಪತ್ರವನ್ನು ನೀಡಿ ಮನವಿ ಮಾಡಿಕೊಂಡರು

ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಎನ್ ಪ್ರಹ್ಲಾದ ರೆಡ್ಡಿ ಮತ್ತು ಉಪಾಧ್ಯಕ್ಷರಾದ ಈಶ್ವರ ರೆಡ್ಡಿ ಮತ್ತು ಸಹ ಕಾರ್ಯದರ್ಶಿಯಾದ ರಾಜಸಿಂಹ ನಿರ್ದೇಶಕರಾದ ಲಕ್ಷ್ಮಣ್ ಮತ್ತು ಶೇಕ್ ಸಾಬ್ ಹಾಗೂ ಗೋವಿಂದರಾಜು ವೀರೇಶ್ ಎಂ ಆರ್ ರೆಡ್ಡಿ ಪ್ರವೀಣ್ ಕುಮಾರ್ ಹಾಗೂ ಇನ್ನೂ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!