ಪ್ರಸ್ತುತ ಸಮಾಜಕ್ಕೆ ಬುದ್ದ ಬಸವ ಅಂಬೇಡ್ಕರ್ ತತ್ವ ಸಂದೇಶಗಳು ಅಗತ್ಯವಿದೆ:ಪ್ರೋ.ಎಚ್ ಲಿಂಗಪ್ಪ ಸರ್ವಾಧ್ಯಕ್ಷರ ನುಡಿತೋರಣಗಳನ್ನು ಬಿಚ್ಚಿಟ್ಟರು

ಪ್ರಸ್ತುತತೆಯಲ್ಲಿ ಸಮಾಜಕ್ಕೆ ಬುದ್ದ ಬಸವ ಅಂಬೇಡ್ಕರ್ ತತ್ವ ಹಾಗೂ ಮರುಳಸಿದ್ದನ ವೈಜ್ಞಾನಿಕ ಪ್ರಜ್ಞೆಗಳ‌ ಅತ್ಯವಶ್ಯಕವಾಗಿ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕಿದೆ .

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಸಾಪದಿಂದ ಆಯೊಜಿಸಿದ್ದ ಅನುಭಾವ ಕವಿ ಮಹಾಲಿಂಗರಂಗ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನುಡಿಗಳನ್ನಾಡಿದರು

ಅಕ್ಷರದವ್ವ ಸಾವಿತ್ರಿ ಭಾಯಿಫುಲೆ ,ಫಾತೀಮಾ ಶ್ರೀ ಅವರನ್ನು ಸ್ಮರಿಸಬೇಕಿದೆ.ಕನ್ನಡ ನಮ್ಮೆಲ್ಲರ ಕರುಳು ಭಾಷೆ ತನ್ನದೇ ನಡೆ ನುಡಿ ಸಾಂಸ್ಕೃತಿಕ ಪರಂಪರೆ ಇತಿಹಾಸ ಕನ್ನಡ ಭಾಷೆಗಿದೆ.ಬಸವಣ್ಣನಗಿಂತ ಹಿರಿಯನಾದ ಮರುಳಸಿದ್ದರು ತಾಲೂಕಿನಲ್ಲಿ ನಡೆದಾಡಿ ಲೋಕಕಲ್ಯಾಣಕ್ಕಾಗಿ ಮೌಢ್ಯತೆ ವಿರೋಧಿಸುತ್ತಾ
ವೈಜ್ಞಾನಿಕ ಜನಜಾಗೃತಿ ಮೂಡಿಸಿ,ನಂತರ ಕಟ್ಟಿದ ಸಿರಿಗೆರೆ ಮಠ ಇಂದು ಬೃಹನ್ಮಠವಾಗಿ ಬೆಳೆದಿದೆ.ನಂತರದ ಸಿರಿಗೆರೆ ಶ್ರೀಗಳು ಯಾರೊಬ್ಬರೂ ಯಜ್ಞ ಯಾಗಾದಿಗಳನ್ನು ಪಾಲಿಸಿಲ್ಲ ಇದು ಮಠದ ಪರಂಪರೆ ಎಂದು ಬಣ್ಣಿಸಿದರು.

ಮನುಕುಲದ ಮುಂದೆ ಎರಡು ಪ್ರಶ್ನೆಗಳು ಯುದ್ದ ಮತ್ತು ಬುದ್ದ ನಮಗೆ ಯುದ್ದ ಬೇಡ ಬುದ್ದ ಬೇಕು.ಬುದ್ದ ಪ್ರಜ್ಞೆ ಅವಶ್ಯಕತೆಯಿದೆ.ಬಸವಣ್ಣನವರು ಅಲ್ಪ ವರ್ಷದಲ್ಲಿನ ವಚನ ಮತ್ತು ಸಾಮಾಜಿಕ ಕ್ರಾಂತಿ ಇಂದಿಗೂ ಅವಿಸ್ಮರಣೀಯ,ಅಲ್ಲದೆ ದೇಶಕ್ಕೆ ಆಳುವುದನ್ನು ಪರಿಚಯಿಸಿದವರು ಬಾಬಾಸಾಹೇಬ ಅಂಬೇಡ್ಕರ್ ಎಂದು ತಿಳಿಸಿದರು.

ನಾನು ಕಂಡ ಬಾಲ್ಯದಿಂದ ಇಂದಿನವರೆಗೂ ಶಿಕ್ಷಣ,ಸಾಹಿತ್ಯ,ಸಾಂಸ್ಕೃತಿಕ,ಸಾಮಾಜಿಕ,ವಿವಿಧ ಕ್ಷೇತ್ರಗಳಲ್ಲಿ ಸಾಧಕರ ಕುರಿತು ಅಧ್ಯಕ್ಷರು ನುಡಿಗಳನ್ನು ಕಿರು ಹೊತ್ತಿಗೆಯಲ್ಲಿ ಅಭಿನಂದನೆ ತಿಳಿಸಲಾಗಿದೆ ಎಂದರು.
ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ ಜಗಳೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವಷ್ಟು ಸಾಮರ್ಥ್ಯ ನಮಗಿದೆ

ಪಟ್ಟಣದ ಹೃದಯ ಬಾಗದಲ್ಲಿ ಬಯಲುರಂಗಮಂದಿರದಲ್ಲಿ ₹1.20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕನ್ನಡ ಭವನ ಹಾಗೂ ಪರಿಕರಗಳನ್ನು ಅಭಿವೃದ್ದಿಪಡಿಸುವೆ.ಮುಂದಿನ ವರ್ಷದಲ್ಲಿ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಗಳೂರಿನಲ್ಲಿಯೇ ಮಾಡಲು ಜಿಲ್ಲಾ ಸಮಿತಿಯವರು ಆವಕಾಶ ಕೊಟ್ಟರು ಸಹ‌‌‌ ರಾಜ್ಯದಲ್ಲಿ ಯಾವುದೇ ಆಡಳಿತ ಪಕ್ಷದವರು ಮುಖ್ಯಮಂತ್ರಿಯಾದರೂ ಸಮ್ಮೇಳನಕ್ಕೆ ಆಹ್ವಾನಿಸುವೆ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು
ನಮ್ಮ ಜಗಳೂರು ಬಯಲು ಪ್ರದೇಶವಾದರು ಸಹ ಇಲ್ಲಿ ಸಾಹಿತ್ಯ ಆಸಕ್ತರಿಗೆ ಬರವಿಲ್ಲ ಕ್ರೀಡಾ ಸಾಂಸ್ಕೃತಿಕ ಶೈಕ್ಷಣಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದೆವೆ.ಈ ನೆಲದಲ್ಲಿ ಕನ್ನಡ ಸಾಹಿತ್ಯ ಆಸಕ್ತಿ ಅಪಾರವಾಗಿದೆ. ಕಳೆದ ದಿನಗಳ ಹಿಂದೆ ಹೊನಲು ಬಳಕಿನ ಕ್ರೀಡಾ ಕೂಟ ಏರ್ಪಡಿಸಿ ಯುವಜನರಲ್ಲಿ ಕ್ರಿಡಾ ಅಸಕ್ತಿ ಬೆಳೆಸಲು ಸಹಕಾರಿಯಾಗಿದೆ..ಕನ್ನಡ ನಾಡು ನುಡಿ ಸೇವೆಗೆ ಹಲವು ನಾಯಕರು ಹೋರಾಟ ನಡಸಿ ಕನ್ನಡದ ಕಂಪುನ್ನು ಸಾರುವ ನಿಟ್ಟಿನಲ್ಲಿ ಈ ಸಮ್ಮೆಳನದಲ್ಲಿ ಹಲವು ವಿದ್ವಾಂಸರಿಂದ ವಿಚಾರಗಳಿಂದ ಯುವಕರಿಗೆ ಪ್ರೆರಣೆಯಾಗಲಿದೆ .ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ ಎಚ್ ಲಿಂಗಪ್ಪರವರು ಉತ್ತಮ ವಾಗ್ಮಿಗಳಾಗಿದ್ದು ಅವರ ನುಡಿಗಟ್ಟುಗಳು ಯುವ ಕವಿಗಳಿಗೆ ಆದರ್ಶಪ್ರಾಯವಾಗಲಿದೆ ಅಪ್ಪರ್ ಭದ್ರಾ ನೀರಾವರಿ ಯೋಜನೆಯ ಪರಿಕಲ್ಪನೆ ಹೊರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿಯವರ ಹೋರಾಟದ ಪ್ರತಿಫಲ ಹಾಗೂ ಬಿಜೆಪಿ ಆಡಳಿತ ಸರಕಾರದ ಸಹಕಾರದಿಂದ ಯೋಜನೆ ವರವಾಗಲಿದೆ..ಮುಂದಿನ ವಾರ ಶಂಕುಸ್ಥಾಪನೆ ನೆರವೇರಿಸಲು ಸಜ್ಜಾಗಲಿದ್ದೆವೆ.

ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳಿಗೆ ನೀರು ಭರ್ತಿ ಮಾಡಲಾಗುವುದು.ಬಿಜೆಪಿ ಪಕ್ಷದ ಕೊಡುಗೆಯಾಗಿ ತಾಲೂಕಿನ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಳಗಳ ಮೂಲಕ ಮನೆಬಾಗಿಲಿಗೆ ಕುಡಿಯುವ ನೀರು ಒದಗಿಸಲಾಗುತ್ತಿದ್ದೆ. ಎಂದು ಹೇಳಿದರು.

ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಸಮ್ಮೇಳನದ ಉದ್ಘಾಟನೆ ಮಾಡಿ ಉದ್ಗಾಟನೆ ನುಡಿಗಳನ್ನಾಡಿದರು ,ಅನುಭಾವ ಕವಿ ಮಹಾಲಿಂಗ ರಂಗ ಈ ಭೂಮಿಯಲ್ಲಿ ನೆಲೆಗೊಂಡ ಕುರುಹುಗಳ ಇತಿಹಾಸ ಹೊಂದಿರುವ ಪ್ರದೇಶದಲ್ಲಿ ತಾಲೂಕು ಸಮ್ಮೇಳನ ಅರ್ಥಪೂರ್ಣವಾಗಿ ಅವಿಸ್ಮರಣೀಯವಾಗಿದೆ.ಮನುಷ್ಯನಿಗೆ ಶ್ರೇಷ್ಠವಾದದ್ದು ದೊರೆಯಲು ಪರಿಶ್ರಮದ ಅಗತ್ಯವಿದೆ.ಸಾಹಿತ್ಯದ ಸೋಗಡು ಪರ್ವತಾರೋಹಿಯಾಗುವಂತೆ ಸರ್ವ ಶಕ್ತಿಯನ್ನು ಸಾಹಿತ್ಯ ಕೊಡಬಲ್ಲದು ಈ ಹಿಂದೆ ಕಾವ್ಯಗಳನ್ನು ರಚಿಸಿದ ಕವಿಗಳು ಮಹಾರಾಜರನ್ನು ಮೆಚ್ಚಿಸಲು ಕವಿತೆಗಳುನ್ನು ಪ್ರಸ್ತುತಪಡಿಸಿ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಇತಿಹಾಸದ ನೆಲೆಗಳುನ್ನು ಬಿಚ್ಚಿಟ್ಟರು.ಪ್ರೊ ಎಚ್ ಲಿಂಗಪ್ಪರವರು‌ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದುಕೊಂಡು ಸಾಹಿತ್ಯ ಲೋಕದಲ್ಲಿ ತನ್ನದೆಯಾದ ಛಾಪು ಮೂಡಿಸಿದ್ದಾರೆ. ಬುದ್ದ ಬಸವ ಅಂಬೇಡ್ಕರ್ ಅವರ ಆಶಯಗಳಂತೆ ಸಮಾಜಕ್ಕೆ 36 ಕೃತಿ ಕೊಡುಗೆ ಆಪಾರವಾಗಿದೆ. ಇಂತ ವಾಗ್ಮಿಗಳ ಸಮ್ಮೇಳನದ ಅಧ್ಯಕ್ಷತೆ ಅಗತ್ಯವಾಗಿ ಸ್ವಾಗತರ್ಹ ಎಂದು ಶ್ಲಾಘಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು,ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆಜಿಲ್ಲೆಗೆ ಸೇರ್ಪಡೆಯ ನಂತರ ಮೊದಲನೇ ತಾಲೂಕು ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದೆ.ಚನ್ನಗಿರಿ ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನವನ್ನು ಮಾರ್ಚ್ ತಿಂಗಳಲ್ಲಿ ಆಯೋಜಿಸಲಾಗಿದೆ.ಬರದನಾಡಿನಲ್ಲಿ ಕನ್ನಡದ ಮನಸ್ಸುಗಳು ಶ್ರೀಮಂತವಾಗಿವೆ.ಕನ್ನಡ ನುಡಿ ಹಬ್ಬವನ್ನು ಜಾತ್ಯಾತೀತವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.

ಅದ್ದೂರಿ ಮೆರವಣಿಗೆ:ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮ,ಹಾಗೂ ಸಮ್ಮೇಳನದ ಅಧ್ಯಕ್ಷರಾದ ಪ್ರೋ.ಲಿಂಗಪ್ಪ ಅವರನ್ನು ಬೆಳ್ಳಿ ಸಾರೋಟದಲ್ಲಿ ವಿವಿಧ‌ ಕಲಾತಂಡಗಳು,ವಾಧ್ಯವೃಂದಗಳೊಂದಿಗೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತ,ಪ್ರವಾಸಿಮಂದಿರದಿಂದ ವೇದಿಕೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ವಿವಿಧ ಮಹಾದ್ವಾರಗಳ ಉದ್ಘಾಟನೆ:
ಇದೆ ವೇಳೆ ಜೆ ಎಂ ಇಮಾಂಟ್ರಸ್ಟ್ ನ ಜೆ.ಕೆ.ಹುಸೇನ್ ಮಿಯ್ಯಾಸಾಬ್ ಚಂದ್ರಶೇಖರ ಶಾಸ್ತ್ರಿ ಮಂಟಪವನ್ನು,ವಾಲಿಬಾಲ್ ತಿಮ್ಮಾರೆಡ್ಡಿ,ಜೆ.ಎಂ.ಇಮಾಂ ಮಹಾದ್ವಾರವನ್ನು,ಡಾ.ಜಿ.ಸಿದ್ದಪ್ಪ ಭೀಮಪ್ಪನಾಯಕ ಮಹಾದ್ವಾರವನ್ನು ಉದ್ಘಾಟಿಸಿದರು.

Leave a Reply

Your email address will not be published. Required fields are marked *

You missed

error: Content is protected !!