ಶುಕ್ರದೆಸೆ ನ್ಯೂಸ್: ಅಂಬೇಡ್ಕರ್ ಜಯಂತಿ ದಿನದ ಅಂಗವಾಗಿ ಮಿಲಿಟರಿ ಸೇನಾನಿಗಳಿಂದ ದಿವ್ಯಶ್ರೀ ನಿಲಯ ಗೃಹ ಪ್ರವೇಶ ಉದ್ಗಾಟನೆ . ವೈಶಿಷ್ಟ್ಯತೆ ಮೆರೆದ ಮನೆ ಮಾಲಿಕ ಬೇತೂರು ಮರಿಯಮ್ಮ ನಿಂಗಪ್ಪರವರ ಹಾಗೂ ಪುತ್ರರಾದ ಶಿವಣ್ಷ ದುರುಗೇಶ್ ಕಾರ್ಯ ಶ್ಲಾಘನೀಯ ದಾವಣಗೆರೆ ಜಿಲ್ಲೆಯ ಬೇತೂರು‌ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ದಿನದಂದೆ ವಿನೂತನವಾಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ಕೆ ದುರುಗೇಶ್. ಜಿ ಎಸ್ ರವಿಚಂದ್ರ ಹಾಗೂ ಬೇತೂರು ಮೂಲದ ಜಮಿನು ದಾನವಾಗಿ ನೀಡಿದ ಬೆಳ್ಳೂಡಿ ಚಂದ್ರಶೇಖರ ರವರ ಕುಟುಂಬದವರಾದ ತಿಪ್ಪೇಸ್ವಾಮಿ ಪುತ್ರಿ ಗಗನ್ ರವರಿಂದ ನೂತನ ಗೃಹ ಪ್ರವೇಶವನ್ನ ಟೇಪ್ ಕತ್ತರಿಸಿ ಉದ್ಗಾಟನೆಗೊಂಡ ದಿವ್ಯಶ್ರೀ ನಿಲಯ. .ಈ ಆಧುನಿಕತೆಯೆಂಬ ಆಡಂಬರದಲ್ಲಿ ಬಹಳಷ್ಟು ಜನರು ಹೋಮ ಹವನ ಆಡಂಬರದ ಪೂಜೆಗಳನ್ನು ಮಾಡಿ ದುಂದುವೆಚ್ವ ಮೆರೆಯುವಂತ ಕಾಲಘಟ್ಟದಲ್ಲಿ ಇಲ್ಲೊಬ್ಬ ಯುವಕ ಅಂಬೇಡ್ಕರ್ ಅಭಿಮಾನಿ ಬೇತೂರು ಶಿವಣ್ಣ ಎಂಬ ಯುವಕ ಮಿಲಿಟರಿ ಸೇನಾನಿಗಳಿಂದ ಹಾಗೂ ಜನವಸತಿಗಾಗಿ ಮತ್ತು ಶಾಲೆಗೆ ದಾನವಾಗಿ 16 ಎಕರೆ ಜಮಿನು ನೀಡಿದ ಮಾಲಿಕರ‌ ಕುಟುಂಬದವರೊಂದಿಗೆ ನೂತನವಾಗಿ ಮಿರ್ಮಿಸಿದ ದಿವ್ಯಶ್ರೀ ಎಂಬ ತನ್ನ ಮನೆ ಗೃಹ ಪ್ರವೇಶ ನೆರವೇರಿಸಿರುವುದು ಸಾಕ್ಷಿಯಾಗಿತ್ತು .ಇದು ವೈಚಾರಿಕತೆ ಅಂಬೇಡ್ಕರ್ ರವರ ಬೆಳಕಿನ ಜ್ಘಾನದ ಪ್ರಜ್ಞೆ ದೂರ ದೃಷ್ಠಿ ಚಿಂತನೆಯಂತೆ ವಿಶೇಷವಾಗಿ ಗೃಹ ಪ್ರವೇಶ ಉದ್ಗಾಟನೆ ಕಂಡು ಬಂದಿತ್ತು. ಇನ್ನು ವಿಶೇಷವೆಂದರೆ ಅದೇ ಗ್ರಾಮದ ಸಾವುಕಾರನೊಬ್ಬ ಬೆಳ್ಳೂಡಿ ಚಂದ್ರಶೇಖರ ಕುಟುಂಬದವರು ದಲಿತ ಕುಟುಂಬಗಳಿಗೆ ಹಾಗೂ ಊರಿನ ಶಾಲೆಗಾಗಿ ಸುಮಾರು ವರ್ಷಗಳ ಹಿಂದೆ 16 ಎಕರೆ ಜಮಿನು ದಾನವಾಗಿ ನೀಡಿದವರ ಕುಟುಂಬದ ಪುತ್ರಿ ಪದವಿದರ ಗಗನ್ ಎಂಬ ಯುವತಿ ಹಾಗೂ ಅವರ ತಂದೆ ಮತ್ತು ಮಿಲಿಟರಿ‌ಯಲ್ಲಿ ಸೇವೆ ಸಲ್ಲಿಸಿ‌ ನಿವೃತ್ತ ಯೋಧರು ಈ ಮನೆ ಗೃಹ ಪ್ರವೇಶದಲ್ಲಿ‌ ಭಾಗಿಯಾಗಿ ಗ್ರಾಮದ ಬಡ ಕುಟುಂಬದ ವಿಧ್ಯಾರ್ಥಿ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿ ವಿಭಿನ್ನವಾಗಿ ಗೃಹ ಪ್ರವೇಶಕ್ಕೆ ಸಾಕ್ಷಿಯಾಗಿತ್ತು.ಇದನ್ನ ಕಂಡರೆ ಜಾಗತಿಕರಣದಲ್ಲಿ ಬಹಳಷ್ಟು ಬುದ್ದಿವಂತರೆನ್ನಿಕೊಂಡವರು ಲಕ್ಷ ಲಕ್ಷ ಖರ್ಚಾ ಮಾಡಿ ದೇವರು ಹೆಸರಿನಲ್ಲಿ ಮೌಢ್ಯ ಪೂಜೆ ಪುನಸ್ಕಾರಗಳುನ್ನು ಮಾಡುವುದಕ್ಕಿಂತ ಹಸಿದವರಿಗೆ ಅನ್ನ ಬಡವರಿಗೆ ಶಿಕ್ಷಣ ಮಕ್ಕಳಿಗೆ ಪುಸ್ತಕ ವಿತರಣೆ ನೊಂದ ಬಡವರಿಗೆ ಅಸರೆಯಾಗಿ ಇಂತ ಸುವ್ಯವಸ್ಥಿತವಾಗಿ ದೇಶದಲ್ಲಿ ಜೀವಿಸಲು ದೇಶಕ್ಕೆ ಮಹತ್ವದ ಸಂವಿಧಾನ ಅರ್ಪಿಸಿರುವ ಬಾಬಾ ಸಾಹೇಬ ಅಂಬೇಡ್ಕರ್ ರವರು ಹೇಳಿದ ಮಾತುಗಳಂತೆ ದೇವಾಸ್ಥಾನಗಳುನ್ನು ನಿರ್ಮಿಸಿದರು ಬೀಕ್ಷಕರು ಹುಟ್ಟಿಕೊಳ್ಳುವರು ಶಾಲೆಗಳುನ್ನು ಕಟ್ಟಿದರೆ ವಿಧ್ಯಾವಂತ ಬುದ್ದಿವಂತ ನಾಗರಿಕರಾಗುವರು ಬಹಳಷ್ಟು ವಿಧ್ಯಾವಂತರಿಗೆ ಈ ಮಾತು ಜ್ಘಾನೊದಯವಾದರೆ ಸಾಕು ಆ ವ್ಯಕ್ತಿ ಸಮಾಜದಲ್ಲಿ‌ ಎಲ್ಲಾವನ್ನು ಮೈಗೂಡಿಸಿಕೊಂಡು ಸಾಮಾಜಿಕ ಸಮಾಜದಲ್ಲೊಬ್ಬ ಇತರರಿಗೆ ಸಹಕಾರಿಯಾಗಿ ಬದುಕುವಂತ ಇಂತ ಘನ ಕಾರ್ಯದೊಂದಿಗೆ ದಿವ್ಯಶಕ್ತಿ ಜ್ಞಾನ ಉದಯವಾಗುವುದು ಎಂಬುದು ಭಾಸವಾಗುತ್ತದೆ ಒಟ್ಟಾರೆ ಆಧುನಿಕತೆಯಲ್ಲಿ ಆಡಂಬರಕ್ಕೆ ನಾಂದಿ ಹಾಡಿ ಜ್ಘಾನದ ಭಂಡಾರದ ಕಡೆಗೆ ಅಂಬೇಡ್ಕರ್ ರವರ ವೈಚಾರಿಕತೆ ಕಡೆಗೆ ಸಾಗಿ ಜ್ಘಾನಕ್ಕೆ ಹೆಚ್ವು‌ ಪ್ರಾಶಸ್ತ್ಯ ನೀಡಿ ಪ್ರತಿಯೊಬ್ಬ ಬಡವರ ಮಕ್ಕಳು‌ ಅಂಬೇಡ್ಕರ್ ರಂತೆ ಮಹಾನಾಯಕ. ಆಪಾರ ಕೊಡುಗೆಯಂತೆ ಸಮಾಜದಲ್ಲಿ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಬೇತೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಮನೆ ಮಾಲಿಕರು ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿಸಿ ದೇವರ ಕೋಣಿಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರ ಪ್ರತಿಸ್ಠಾಪನೆ ಮಾಡಿ ನಿತ್ಯ ಪೂಜೆ ಪುನಸ್ಕಾರಗಳು ಸಲ್ಲುತ್ತಿರುವುದು. ಸಾಕ್ಷಿಯಾಗಿವೆ . ಈ ಸಂದರ್ಭದಲ್ಲಿ ನೂತನ ದಿವ್ಯಶ್ರೀ ಗೃಹ ಪ್ರವೇಶಕ್ಕೆ ಶುಭಾ ಹಾರೈಸಿದ ಬಿ ಜೆ ಪಿ ಮಾಜಿ ಶಾಸಕ ಬಸವರಾಜ್ ನಾಯ್ಕ್. .ನಿವೃತ್ತ ಉಪನ್ಯಾಸಕ ಎ.ಕೆ ಚೌಡಪ್ಪ.ಪತ್ರಕರ್ತ ಜಿ ಎಸ್ ಚಿದಾನಂದ. ಮಾಜಿ ಸಚಿವ ಹೆಚ್ ಆಂಜನೇಯರವರ ಆಪ್ತ ಕಾರ್ಯಧರ್ಶಿ ಮಾರುತಿ ನಾಯಕನಹಟ್ಟಿ. ಪ್ರಗತಿಪರ ಮುಖಂಡ ಹಾಗೂ ಶುಕ್ರದೆಸೆ ನ್ಯೂಸ್ ಸಂಪಾದಕ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ . ವಿವಿಧ.ಗಣ್ಯಮಾನ್ಯರು ಸೇರಿದಂತೆ ದಲಿತ ಅಂಬೇಡ್ಕರ್ ಅಭಿಮಾನಿಗಳು. ಊರಿನ ಗ್ರಾಮಸ್ಥರು ಸಂಬಂಧಿಕರು.ವಿವಿಧ ರಾಜಕಾರಣಿಗಳು ಕೃಷಿಕರು .ಕೂಲಿಕಾರರು ಇನ್ನಿತರರು ಗೃಹ ಪ್ರವೇಶದಲ್ಲಿ ಭಾಗಿಯಾಗಿ ಶುಭಾ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!