ಜಗಳೂರು ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿಯಾಗಿ ಶಾಸಕ ಎಸ್ ವಿ ರಾಮಚಂದ್ರರವರು ನಾಮಪತ್ರ ಸಲ್ಲಿಸಿದರು.
ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದ 2023 ರ ಮೇ 10 ರಂದು ನಡೆಯಲಿರುವ ಚುನಾವಣೆಗೆ ಬಿ ಜೆ ಪಿ ಅಭ್ಯರ್ಥಿಯಾಗಿ ಶಾಸಕ ಎಸ್ ವಿ ರಾಮಚಂದ್ರರವರು ತನ್ನ ಬೆಂಬಲಿಗರೊಂದಿಗೆ ದೊಡ್ಡ ಮಾರಿಕಾಂಬ ದೇವಸ್ಥಾನಕ್ಕೆ ತೆರಳಿ ದೇವಿಗೆ ಪೂಜೆ ನೆರವೇರಿಸಿ ದೇವರ ದರ್ಶನ ಪಡೆದು ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ತೆರೆದ ವಾಹನದಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಶಾಸಕ ಎಸ್ ವಿ ರಾಮಚಂದ್ರರವರು ನಾಮ ಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಜಗಳೂರಿನ ಮಹತ್ವದ ಯೋಜನೆಗಳಾದ ಅಪ್ಪರ್ ಭದ್ರಾ .57 ಕೆರೆ ತುಂಬಿಸುವ ಯೋಜನೆಗಳುನ್ನು ಪೂರ್ಣಗೋಳಿಸಿ ಈ ಬಾಗದ ರೈತಾಪಿ ವರ್ಗದ ಜನರಿಗೆ ನೀರಾವರಿ ಕಲ್ಪಿಸುವ ಒತ್ತಾಸೆಯಿದೆ ನಾಲ್ಕನೇ ಬಾರಿಗೆ ನನ್ನ ಗೆಲುವಿಗೆ ಕ್ಷೇತ್ರದ ಮತದಾರರು ಮೆ 10 ರಂದು ನಡೆಯುವ ಚುನಾವಣೆಯಲ್ಲಿ ನನಗೆ ಬಹುಮತ ನೀಡಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
