ಸುದ್ದಿ ಜಗಳೂರು
editor m.rajappa vyasagondanahalli
shukradeshe news Kannada April 10 _2025 jlr news
ತಾಲ್ಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಸಾವು –
ಈಜಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಜರುಗಿದೆ.
ತಾಲ್ಲೂಕಿನ ಭರಮಸಮುದ್ರ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ .
ತಾಲ್ಲೂಕಿನ ಭರಮಸಮುದ್ರ ಗ್ರಾಮದ ಬಳಿಯಿರುವ ಕೆರೆಗೆ ಗುರುವಾರ ಬೆಳಿಗ್ಗೆ ಸುಮಾರು 11 ರ ಸಮಯದಲ್ಲಿ ಕೆರೆಗೆ ಒಟ್ಟು ನಾಲ್ಕು ಜನ ಯುವಕರು ಈಜಲು ನೀರಿಗೆ ಇಳಿದಿದ್ದಾರೆ .ಹೇಗೋ ಮಾಡಿ ಇಬ್ಬರು ವಾಪಸ್ಸು ನೀರಿನಿಂದ ದಡ ಸೇರಿದ್ದಾರೆ ಆದರೆ ಇನ್ನು ಈಜು ಬಾರದೆ ಅಜಯ್ಯ ತಂದೆ ಬಸವರಾಜಪ್ಪ 18 ವರ್ಷ ಹಾಗೂ ಕಾರ್ತಿಕ ತಂದೆ ತಿಪ್ಪೇಸ್ವಾಮಿ 20 ವರ್ಷದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವುನ್ನಪ್ಪಿರುವ ಘಟನೆ ನಡೆದಿದೆ. ನಂತರ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ದಳದವರು ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಪತ್ತೆ ಹಚ್ಚಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರ ಕೋಠಡಿಗೆ ಸ್ಥಳಾಂತರಿಸಿ ಪೊಸ್ಟ್ ಮಾರ್ಟಂ ನಂತರ ಪೋಷಕರಿಗೆ ಮೃತದೇಹಗಳನ್ನು ಅಸ್ತಂರಿಸಿದರು .ಗ್ರಾಮದಲ್ಲಿ ಕುಟುಂಬದವರ ಗೋಳು ಹೇಳತೀರದ ಕೈಗೆ ಬಂದ ಮಕ್ಕಳನ್ನ ಕಳೆದುಕೊಂಡ ಪೋಷಕರು ಕುಟುಂಬದವರ ಗೋಳಿನ ಆಕ್ರಂದನ ಕರಳು ಚುರುಕು ಎನ್ನುವಂತಿತ್ತು ಒಟ್ಟಾರೆ ಮಕ್ಕಳ ಕಳೆದುಕೊಂಡವರ ರೋಧನ ನೊಡಿದ ಗ್ರಾಮದ ಜನರಲ್ಲಿ ಕಣ್ಣಿರು ಜನುಗುವಂತಿತ್ತು.
ಈ ವೇಳೆ ಸ್ಥಳಕ್ಕೆ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ ಮೃತ ಕುಟುಂಬದ ಪೋಷಕರಿಗೆ ಆರ್ಥಿಕ ಸಹಾಯ ನೀಡಿ ಸಾಂತ್ವನ ಹೇಳಿದ ಅವರು ಸರ್ಕಾರದಿಂದ ಬರುವಂತ ಪರಿಹಾರವನ್ನ ಕೋಡಿಸಿಕೊಡಲಾಗುವುದು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಕ್ಕಳನ್ನು ಕೆರೆಗಳ ಬಳಿ ಬಿಡದಂತೆ ಜಾಗೃತಿ ವಹಿಸಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಖಲೀಮ್ ಉಲಾ ಸೇರಿದಂತೆ ಹಾಜುರಿದ್ದರು