ಸುದ್ದಿ ದಾವಣಗೆರೆ
ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಆಲೂರು ನಿಂಗರಾಜ್
ದಾವಣಗೆರೆ: ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಜಾರಿಯಿಂದ ಬೊಕ್ಕಸ ಬರಿದಾಗಿ, ಸರ್ಕಾರ ದಿವಾಳಿಯಾಗಿದೆ. ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಆಗುತ್ತಿಲ್ಲ ಎಂದು
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದೆಡೆ, ಬೆಲೆ ಏರಿಕೆ ಸಾರ್ವಜನಿಕರನ್ನು ತೀವ್ರವಾಗಿ ಬಾಧಿಸುತ್ತಿದೆ; ಮತ್ತೊಂದೆಡೆ, ಪ್ರತಿ ಸರ್ಕಾರಿ ಕಚೇರಿಯಲ್ಲೂ ಲಂಚದ ಹಾವಳಿಯಿಂದ ಜನ ಹೈರಾಣ ಆಗಿ ಹೋಗಿದ್ದಾರೆ.
ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ “ಕುಸಿದಿದೆ” ಮತ್ತು “ಭ್ರಷ್ಟಾಚಾರ ಮೇರೆ ಮೀರಿದೆ” ಎಂಬುದಕ್ಕೆ ರಾಜ್ಯಾದ್ಯಂತ ನಡೆಯುತ್ತಿರುವ ‘ಜನಾಕ್ರೋಶ’ವೇ ಸಾಕ್ಷಿ
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ೫೦ ಕ್ಕೂ ಹೆಚ್ಚು ಸರಕುಗಳ ಬೆಲೆಗಳು ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹಾಲಿನ ಬೆಲೆ ೯ ರೂ. ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ೭.೫ ರೂ. ಹೆಚ್ಚಾಗಿದೆ. ರೈತರು ತಮ್ಮ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಪಡೆಯಲು ೨.೫ ಲಕ್ಷದಿಂದ ೩ ಲಕ್ಷ ರೂ. ವರೆಗೆ ಖರ್ಚು ಮಾಡಬೇಕಾಗಿದೆ
ರಾಜ್ಯ ಭ್ರಷ್ಟಾಚಾರದಲ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿದೆ,ಅಭಿವೃದ್ಧಿಗಾಗಿ ನೀವು ಏಕೆ ಹಣವನ್ನು ನೀಡುತ್ತಿಲ್ಲ ಸರ್ಕಾರವು ಐದು ಗ್ಯಾರಂಟಿ ಖಾತರಿಗಳ ಮೇಲೆ ಮಾತ್ರ ಅವಲಂಬಿತವಾಗಿದೆ, ಆದರೆ ರಾಜ್ಯದಲ್ಲಿ ಜನರ ಜೀವನಕ್ಕೆ ಯಾವುದೇ ಖಾತರಿ ಇಲ್ಲ ರಸ್ತೆಗಳಿಗೆ ಒಂದಿಡಿ ಮಣ್ಣು ಹಾಕಲಿಕ್ಕೆ ಸರ್ಕಾರದಲ್ಲಿ ಹಣ ವಿಲ್ಲದ್ದಂತೆ ದಿವಾಳಿಯಾಗಿದೆ.
ಈ ಸರ್ಕಾರದ ಬಳಿಕ ಪೂರ್ಣಗೊಂಡ ಕಾಮಗಾರಿಗಳಿಗೆ ಪಾವತಿಸಲು ಹಣವಿಲ್ಲ. ಹೀಗಾಗಿ ಟೆಂಡರ್ ನೀಡಿದ್ದರು. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಹಿಂಜರಿಯುತ್ತಿದ್ದಾರೆ
“ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಿಸಿರಬಹುದು, ಆದರೆ ಪ್ರತಿಯಾಗಿ, ಬೆಲೆ ಏರಿಕೆಯಿಂದ ಜನರು ಪ್ರತಿದಿನ ಸಂಕಷ್ಟಪಡುತ್ತಿದ್ದಾರೆ. ಪ್ರತಿದಿನ ಬೆಲೆಗಳು ಏರಿಕೆಯಾಗುತ್ತಿವೆ. ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಈ ಸರ್ಕಾರದ ವಿರುದ್ಧ ಪ್ರತಿಭಟಿಸುವುದನ್ನು ಬಿಟ್ಟು ಜನರಿಗೆ ಬೇರೆ ದಾರಿಯಿಲ್ಲ ಆದ್ದರಿಂದ ಬಿಜೆಪಿ ಪಕ್ಷ ಬಿದಿಗಿಳಿದು ಹೋರಾಟ ಮಾಡುತ್ತಿದೆ.
ಭ್ರಷ್ಟಾಚಾರ, ಲೂಟಿಯಲ್ಲೇ ಇಡೀ ಸರ್ಕಾರ ಮುಳುಗಿ ಹೋಗಿದೆ. ದರ ಏರಿಕೆ ಬರೆ ಮೂಲಕ ಜನಸಾಮಾನ್ಯರನ್ನು ರಣಹದ್ದುಗಳಂತೆ ಕುಕ್ಕಿ ತಿನ್ನುತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿAದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಆರ್ಥಿಕವಾಗಿ ರಾಜ್ಯವನ್ನು ವಿಕೋಪದ ಪರಿಸ್ಥಿತಿಗೆ ದೂಡಿರುವ ಕಾಂಗ್ರೆಸ್ ಸರಕಾರವು, ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ ಇವತ್ತು ಕರ್ನಾಟಕದಲ್ಲಿ ಸಂಚರಿಸುವAತಹ ಆರು ಲಕ್ಷ ಲಾರಿಗಳು ಬೆಲೆ ಎರಿಕೆಗಳನ್ನು ಖಂಡಿಸಿ ಮುಷ್ಕರ ನಡೆಸುತ್ತಿದ್ದಾರೆ ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲವೆ ಎಂದು ಆಲೂರು ನಿಂಗರಾಜ್ ಪ್ರಕಟಣೆಯಲ್ಲಿ ತಿವ್ರ ವಾಗ್ದಾಳಿ ನಡೆಸಿದ್ದಾರೆ.