ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ಜಮೀನಿನಲ್ಲಿದ ಬಿಲ್ಡಿಂಗ್ ಸಮೇತ ಸಿಡಿಲಿಗೆ ಬಲಿ
Editor m rajappa vyasagondanahalli
Shukradeshe news kannada online news portal |Kannada news online April 15 _4_2025
ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಕುರಿಗಳು ಸಿಡಿಲಿಗೆ ಬಲಿಯಾಗಿ ಕುರಿಗಾಹಿ ಸುನಿಲ್ ನ ಕಾಲಿಗೆ ಬಲವಾದ ಪೆಟ್ಟು ಬಿದ್ದು ಕಾಲು ಮುರಿದಿದೆ. ಗ್ರಾಮದಲ್ಲಿ ಸಿಡಿಲಿನಿಂದ ತತ್ತರಿಸಿದ ಜನತೆ
ತಾಲ್ಲೂಕಿನ ಗರುಸಿದ್ದಾಪುರ ಗ್ರಾಮದಲ್ಲಿ ಇಂದು ಮದ್ಯಾಹ್ನ 3_30 ರ ಸಮಯದಲ್ಲಿ ಸಿಡಿಲು ಬಡಿದು ಕುರಿಗಳ ಮಾರಣಹೋಮ
ಗ್ರಾಮದ ಹೊರವಲಯದವೊಂದರ ಅಡವಿಯಲ್ಲಿ ಕುರಿಗಾಯಿರು ಕುರಿ ಮೇಯಿಸುತ್ತಿದ್ದ ವೇಳೆ ಭಾರಿ ಗಾಳಿ ಮಳೆ ಬರುವ ಸಮಯದಲ್ಲಿ ಗುಡುಗು ಸಹಿತ ಮಳೆ ಕಂಡಂತ ಕುರಿಗಾಯಿರು ಅಲ್ಲೆ ಅತ್ತಿರದಲ್ಲಿದ್ದ ಪತ್ರೆಗೌಡ ಎಂಬುವರ ಜಮೀನಿನೊಂದರ ತೋಟದ ಮನೆ ಬಳಿ ಕುರಿಗಳ ಸಮೇತ ಮನೆಯ ಪಕ್ಕದಲ್ಲಿ ಕುಳಿತು ಆಶ್ರಯ ಪಡೆದ ಸಂದರ್ಭದಲ್ಲಿ ಗಾಳಿ ಮಳೆ ಸಿಡಿಲಿಗೆ 20 ಕ್ಕೂ ಹೆಚ್ಚು ಕುರಿಗಳು ಕುರಿಗಾಹಿ ಸುನಿಲ್ ನಿಗೆ ಕಾಲು ಮುರಿದು ತೋಟದ ಮನೆಯ ಬಿಲ್ಡಿಂಗ್ ಸಮೇತ ನೆಲಸಮವಾಗಿ ಹೋಗಿದೆ.

ದಾವಣಗೆರೆ ಜಗಳೂರು ತಾಲ್ಲೂಕಿನ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮಂಗಳವಾರ ಸಾಯಂಕಾಲ 3_30 ಸಮಯದಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಸಿಡಿಲಿನ ರಭಸಕ್ಕೆ ಗುರುಸಿದ್ದಾಪುರ ಗ್ರಾಮದ ಜಮೀನಿನಲ್ಲಿದ್ದ ಬಿಲ್ಡಿಂಗ್ ಸಮೇತ 20 ಕ್ಕೂ ಹೆಚ್ಚು ಕುರಿಗಳು ಚಲ್ಲಾಪಿಲ್ಲಿಯಾಗಿ ಸಿಕ್ಕ ಸಿಕ್ಕ ಕಡೆ ಸಿಡಿಲಿನ ರಭಸಕ್ಕೆ ಕುರಿಗಳು ಮರಣಹೋಮವಾಗಿ ಸುನಿಲ್ ಎಂಬ ಯುವಕನಿಗೆ ಬಲವಾದ ಪೆಟ್ಟು ಬಿದ್ದ ಘಟನೆ ಜರುಗಿದೆ.
ತಕ್ಷಣ ಅಲ್ಲಿದ್ದ ಗ್ರಾಮದ ಜನರು ಸುನಿಲ್ ಎಂಬ ಯುವಕನನ್ನ ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ಒಳಪಡಿಸಿದ್ದಾರೆ .ಒಟ್ಟಾರೆ ಗ್ರಾಮದಲ್ಲಿ ಅರ್ಭಟಿಸಿದ ಸಿಡಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ ಜಮೀನಿನಲ್ಲಿದ್ದ ತೋಟದ ಮನೆ ಸಮೇತ ಗೋಡೆ ಕುಸಿದ್ದು ಬಿದ್ದಿದೆ.
ಬಸವರಾಜಪ್ಪ ತಂದೆ ಮೂಗಪ್ಪ ಎಂಬುವರಿಗೆ ಸೇರಿದ 11 ಕುರಿಗಳು ಹಾಗೂ ಹಳ್ಯಪ್ಪರವರಿಗೆ ಸೇರಿದ 4 .ಸುನಿಲ್ ನಿಗೆ ಸೇರಿದ ಕುರಿಗಳು ನಾಲ್ಕು ಒಟ್ಟು ಸುಮಾರು 20 ಕ್ಕೂ ಹೆಚ್ಚು ಕುರಿಗಳು ಸಿಡಿಲಿಗೆ ಬಲಿಯಾಗಿವೆ . ಸುಮಾರು 10ಕ್ಕೂ ಹೆಚ್ಚು ಕುರಿಗಳ ಕಾಲು ಮುರಿದಿವೆ ಸ್ಥಳಕ್ಕೆ ಪಶು ವೈದ್ಯ ಇಲಾಖೆ ವೈಧ್ಯಾಧಿಕಾರಿಗಳು ಸೇರಿದಂತೆ ಗ್ರಾಮಲೆಕ್ಕಾಧಿಕಾರಿ .ಆರ್ ಐ ಕೀರ್ತೀಕುಮಾರ್ ಬಿಳಿಚೋಡು ಪೊಲೀಸ್ ಠಾಣೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ತಿಳಿದು ಬಂದಿದೆ.
ಇದೇ ಮೊದಲ ಬಾರಿ ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಮೃತಪಟ್ಟು ಕುರಿಗಾಹಿ ಕಾಲು ಮುರಿದು ಅಘಾತವಾಗಿರುವುದು ಎಂಬ ಮಾಹಿತಿ ತಾಲ್ಲೂಕಿನಲ್ಲಿಯೇ ಇಷ್ಟೋಂದು ಪ್ರಮಾಣದಲ್ಲಿ ಅನಾಹುತವಾಗಿರುವುದು ಎಂದು ಗ್ರಾಮದ ಜನರು ಅಭಿಪ್ರಾಯಪಟ್ಟಿದ್ದಾರೆ.