editor:m rajappa vyasagondanahalli
By shukradeshe news Kannada online news portel
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರ್ವಶ್ರೇಷ್ಟ ಬಿಜೆಪಿ ಮಂಡಲ ಅಧ್ಯಕ್ಷ ಹೆಚ್ ಸಿ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಅಂಬೇಡ್ಕರ್ ಜಯಂತಿಗಳಿಗೆ ಕ್ಷೇತ್ರದ ಶಾಸಕರ ತಾತ್ಸರ ತೊರೆಯಬೇಕು ಪೂಜಾರ್ ಸಿದ್ದಪ್ಪ
:-ಸುದ್ದಿ ಜಗಳೂರು
ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಶನಿವಾರ ಅಂಬೇಡ್ಕರ್ ಯುವಕರ ಬಳಗದಿಂದ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು ಪ್ರತಿಯೊಬ್ಬ ನಾಗರೀಕರು ಗೌರವದಿಂದ ಸ್ವಾತಂತ್ರ ಸಮನತೆಯಿಂದ ಬದುಕುವಂತೆ ಆವಕಾಶ ಕಲ್ಪಿಸಿದ ಮಹಾನ್ ನಾಯಕ ಅಂಬೇಡ್ಕರ್ ಆಧುನಿಕ ಪ್ರಬುದ್ದ ಭಾರತದ ನಿರ್ಮಾತೃ ಪ್ರತಿಯೊಬ್ಬರು ಕೂಡ ಅವರ ಆದರ್ಶಗಳನ್ನ ಆಳವಡಿಸಿಕೊಂಡು ಜಾತಿ ಬೇದ ಮರೆತು ಸರ್ವರು ಸಮನತೆಯಿಂದ ಕೂಡಿ ಬಾಳುವಂತ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಸಂವಿಧಾನದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಜಿಪಂ ಸದಸ್ಯ ಕೆ ಪಿ ಪಾಲಯ್ಯ ಮಾತನಾಡಿ ಅಂಬೇಡ್ಕರ್ ಯುವ ಸೇನಾನಿಗಳು ಅವರ ತತ್ವದರ್ಶಗಳನ್ನ ಪಾಲಿಸುವಂತಾಗಬೇಕು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಮಾರಾಟವಾಗಬಾರದು ಕೇವಲ ಚುನಾವಣೆಗಳಲ್ಲಿ ತಮ್ಮ ಗ್ರಾಮಗಳಿಗೆ ಬರುವ ರಾಜಕಾರಣಿಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ.ಮಹಿಳೆಯರು ಅಂಬೇಡ್ಕರ್ ವಿಚಾರಗಳ ಬಗ್ಗೆ ತಿಳಿದರೆ ತಮ್ಮ ಮಕ್ಕಳಿಗೆ ತಿಳಿಸುವರು ಗ್ರಾಮದ ಮಹಿಳಾ ಸಂಘದ ಪಾದಾಧಿಕಾರಿಗಳು ಇಂತ ಕಾರ್ಯಕ್ರಮಗಳಿಗೆ ತಪ್ಪದೇ ಬಾಗವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಲೂರು ಬಸವರಾಜಪ್ಪ ಉಪಾನ್ಯಾಸ ಮಂಡಿಸಿದರು ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚನೆ ಮಾಡಿದ ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಿದೆ’ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅಂಬೇಡ್ಕರ್ ರವರನ್ನ ಕಾಣುವಂತಾಗಬೇಕಾಗಿದೆ.
ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜಣ್ಣ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಜಾತಿ, ಮತ, ಪಂಥ ಮತ್ತು ಧರ್ಮ ಎನ್ನದೇ ನಾವೆಲ್ಲರೂ ಒಂದಾಗಿ ಬಾಳಬೇಕಿದೆ. ಜಾತಿ ವ್ಯವಸ್ಥೆಯಿಂದ ದೇಶದ ಅಭಿವೃದ್ದಿ ಕುಂಠಿತಗೊಳ್ಳುತ್ತದೆ ಸಮ ಸಮಾಜದ ಸಂವಿಧಾನದಿಂದ ನಮ್ಮ ರಾಷ್ಟ್ರ ವಿಶ್ವದಲ್ಲಿಯೆ ಅಗ್ರಗಣ್ಯಸ್ಥಾನ ಗಳಿಸಿದೆ ಎಂದರೆ ಅದು ಈ ದೇಶದ ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನದ ಕೊಡುಗೆಯಿಂದ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಶಿಕ್ಷಣ ಪಡೆದು ಉನ್ನತ ಪದವಿ ಗಳಿಸಿಕೊಳ್ಳಿ ಜ್ಘಾನ ಸಂಪತ್ತಿನಿಂದಲೆ ಅಂಬೇಡ್ಕರ್ ಬಹುಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಕಿವಿ ಮಾತು ಹೇಳಿದರು.
ಅಂಬೇಡ್ಕರ್ ಪುತ್ಥಳಿ ಸಮಿತಿ ಅದ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ ಸಂವಿಧಾನ ಶಿಲ್ಪಿ ಡಾ ಬಿ ಅರ್ ಅಂಬೇಡ್ಕರ್ ಈ ದೇಶದ ಮಹಾನ್ ಮಾನವತವಾದಿ ಜಯಂತಿಯನ್ನ ವಿಶ್ವದ ಆದ್ಯಂತ ಅಚರಣೆ ಮಾಡುವ ಮೂಲಕ ಆ ಮಹಾನ್ ನಾಯಕನ ಜಯಂತಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆದರೆ ಇತ್ತಿಚೀನ ದಿನಮಾನಗಳಲ್ಲಿ ಅವರು ಕೊಟ್ಟಂತ ಮೀಸಲಾತಿಡಿಯಲ್ಲಿ ಗೆದ್ದಂತ ನಮ್ಮ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪರವರು ಹಾಗೂ ಮಾಜಿ ಶಾಸಕರುಗಳು ವಿವಿಧ ಜನಪ್ರತಿನಿಧಿಗಳು ಅಂಬೇಡ್ಕರ್ ಜಯಂತಿಗೆ ನಿರ್ಲಕ್ಷ್ಯಧೊರಣೆ ಅನುಸರಿಸುತ್ತಿರುವುದು ಸರಿಯಲ್ಲ ಜಯಂತಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರು ನಮ್ಮ ಬಗ್ಗೆ ಅಸಡ್ಡೆ ಭಾವನೆ ತೊರೆಯಬೇಕು ಕೇವಲ ಚುನಾವಣೆಗಳಲ್ಲಿ ನಮ್ಮ ಕೇರಿ ಸ್ಪರ್ಶ ಮಾಡುವ ರಾಜಕಾರಣಿಗಳ ಬಗ್ಗೆ ನಮ್ಮ ಯುವಕರು ಜಾಗೃತಿಯಾಗುವಂತೆ ಸಲಹೇ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ಗೋಡೆ ಪ್ರಕಾಶ ಪಲ್ಲಾಗಟ್ಟೆ ಶೇಖರಪ್ಪ .ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು .ಗ್ರಾಪಂ ಸದಸ್ಯಬಿ.ವಿ ವಿರೇಶ್. ದಸಂಸ ಮುಖಂಡ ಪಲ್ಲಾಗಟ್ಟೆ ರಂಗಪ್ಪ.ಗ್ರಾಪಂ ಕಾರ್ಯಧರ್ಶಿ ಡಿ.ದುರುಗಪ್ಪ .ಮುಚ್ಚುನೂರು ಪರಶುರಾಮ.ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಅಧ್ಯಕ್ಷ ಬೇತೂರು ಮಂಜುನಾಥ್. ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ. .ಮುಖಂಡ ಸೂರಗೊಂಡನಹಳ್ಳಿ ನಾಗರಾಜ್. ಮಾಜಿ ಗ್ರಾಪಂ ಸದಸ್ಯ ಕೆ. ವಿ ಬಸವರಾಜ್. ಎಸ್ ಡಿ ಎಂ.ಸಿ ಅಧ್ಯಕ್ಷ ಅಜ್ಜಯ್ಯ. ಅಂಬೇಡ್ಕರ್ ಯುವಕರ ಬಳಗದ ಪದಾಧಿಕಾರಿಗಳಾದ.ಗಣೇಶ. ಡಿ.ವಿ ಪ್ರಸನ್ನ. ರವಿಚಂದ್ರ. ಬೀಮಪ್ಪ .ಮಹಿಳಾ ಸಂಘದ ಸದಸ್ಯರಾದ ಚಂದ್ರಕಲಾ. ರೇಣುಕಮ್ಮ.ದುರುಗಮ್ಮ.ಸೇರಿದಂತೆ ಹಾಜುರಿದ್ದರು.
.
.
