ಸುದ್ದಿ ಜಗಳೂರು.

Editor m.rajappa vyasagondanahalli by shukradeshe news online portal.Kannada news online

may 12

ಮಕ್ಕಳಿಗೆ ವಿಧ್ಯಾಬ್ಯಾಸದ ಜೊತೆಗೆ ನೃತ್ಯ ಸಂಗೀತ ಸಮಾರಂಭ ವೇದಿಕೆಗಳು ಉತ್ತಮ ಪ್ರತಿಭಾವಂತರನ್ನ ಗುರುತಿಸಲು ಅತ್ಯಂತ ಸಹಕಾರಿಯಾಗಲಿವೆ ರಾಜ್ಯಮಟ್ಟದ ನೃತ್ಯ ಸರ್ಧಾ ಕಾರ್ಯಕ್ರಮದಲ್ಲಿ ಬಿಜೆಪಿ‌ ಮುಖಂಡ ಬಿಸ್ತುವಳ್ಳಿ ಬಾಬು ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರು ಪಟ್ಟಣದ ಬಯಲು ರಂಗಮಂದಿರ ವೇದಿಕೆಯಲ್ಲಿ ನಾಗು ಕರಾಟೆ ಮತ್ತು ಡ್ಯಾನ್ಸ್ ಆಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ನೃತ್ಯ ಸರ್ಧಾ ಕಾರ್ಯಕ್ರಮದ ಉದ್ಗಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ಆಯೋಜಕರು ತುಂಬಾ ಉತ್ಸಹಭರಿತವಾಗಿ ರಾಜ್ಯಮಟ್ಟದ ಕಾರ್ಯಕ್ರಮವನ್ನ ಆಯೋಜನೆ ಮಾಡಿ ಉತ್ತಮ ಪ್ರತಿಭಾವಂತರನ್ನ ಗುರುತಿಸಿ ಹೊರ ಜಗತ್ತಿಗೆ ಪರಿಚಯಿಸುವಂತ ಕೆಲಸ ನಿಜಕ್ಕೂ ಕೂಡ ಶ್ಲಾಘನೀಯವಾಗಿದ್ದು .
ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿರುವ ಪ್ರತಿಭಾವಂತ ಡ್ಯಾನ್ಸ್ ರಗಳು ಈ ವೇದಿಕೆಯಲ್ಲಿ ಉತ್ತಮ ನೃತ್ಯ ಮಾಡುವ ಮೂಲಕ ಜಗಳೂರಿನ ಜನತೆಗೆ ಮನೋರಂಜನೆ ನೀಡಿ ತಾವುಗಳು ಜನಪ್ರಿಯತೆಗೆ ಸಾಕ್ಷಿಯಾಗಲಿದ್ದು ಅಯೋಜಕ ನಾಗು ಮತ್ತು ಅವರ ಸಂಗಡಿಗರು ಇಂತ ಹತ್ತಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿ ನಮ್ಮ ಸಹಕಾರ ಸದಾಯಿರಲಿದೆ ಎಂದು ಪ್ರೋತ್ಸಾಹಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಲುಖ್ಮಾನ್ ಖಾನ್ ಮಾತನಾಡಿ ಜಗಳೂರು ಹಿಂದೂಳಿದ ಪ್ರದೇಶವಾಗಿದ್ದರು ಸಹ ಕಲೆ ಸಾಂಸ್ಕೃತಿಕವಾಗಿ ಹಿಂದೆ ಬಿದ್ದಿಲ್ಲ ಇಂತಹ ವೇದಿಕೆಗಳು ಯುವಜನರಿಗೆ ಮಕ್ಕಳಿಗೆ ಸ್ಪೋರ್ತಿಯಾಗಲಿವೆ ಪ್ರೇಕ್ಷಕರಿಗೆ ಮನೋರಂಜನೆ ಮನಸ್ಸಿಗೆ ಸಂತೋಷವನ್ನುಂಟು ಮಾಡಲಿದೆ ಎಂದು ಶ್ಲಾಘಿಸಿದರು.

ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬಿಳಿಚೋಡು ಹೊಬಳಿ ಘಟಕದ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ನಾಗು ರವರು ಸ್ಥಾಪಿಸಿರುವ ಎನ್ ಕೆ. ಡಿ .ಕರಾಟೆ ಡ್ಯಾನ್ಸ್ ಅಕಾಡೆಮಿ ವತಿಯಿಂದ ಮಕ್ಕಳಿಗೆ ಕಳೆದ ಒಂದು ತಿಂಗಳಿಂದ ಸಮ್ಮರ್ ಕ್ಯಾಂಪ್ ಪ್ರಾರಂಭಿಸಿ ಮಕ್ಕಳಿಗೆ ವಿವಿಧ ಕಲೆಗಳನ್ನು ಕಲಿಸುವ ಮೂಲಕ ಮಕ್ಕಳ ಆತ್ಮಸ್ಥೈರ್ಯದಿಂದ ಪ್ರತಿಭೆಯನ್ನ ಗುರುತಿಸಲು ಇಂತ ವೇದಿಕೆಗಳು ಪೂರಕವಾಗಿವೆ. ಜಗಳೂರು ನೆಲದ ಸೋಗಡಿನ ಜನರು ನಾಡು ನುಡಿ. ಕಲೆ ಸಾಹಿತ್ಯ ಸಾಂಸ್ಕೃತಿಕ ಪರಂಪರೆಗೆ ಹೆಚ್ಚು ಪ್ರಾಶಸ್ಥ್ಯ ನೀಡುತಾ ಬಂದಿರುವ ಜಗಳೂರು ಪ್ರದೇಶದ ಜನರು ಕಲೆಗೆ ಸದಾ ಪ್ರೋತ್ಸಾಹ ನೀಡುತಾ ಬಂದಿದ್ದಾರೆ. ಇಲ್ಲಿ ಭಾಗವಹಿಸಿರುವಂತ ಪ್ರತಿಭಾವಂತರು ಜಿ ಕನ್ನಡದಂತಹ ಹೆಸರಾಂತ ಸ್ವರ್ಧೆಗೆ ಆಯ್ಕೆಯಾಗುವಂತಾಗಲಿ ಎಂದು ಆಶಿಸಿದರು.
.

ಈ ಸಂದರ್ಭದಲ್ಲಿ ಪೀಲಂ ಕೋರಿಗ್ರಾಪರ್ ವಸಂತ್.ಗಾಯಕ ಮಹೇಶ್ ಸೋನು .ಆಯೋಜಕರಾದ ನಾಗರಾಜ್.ಕಾವ್ಯ. ಯುವ ಕರ್ನಾಟಕ ವೇದಿಕೆ ತಾಲ್ಲೂಕು ಸಂಚಾಲಕ ನಜೀರ್ ಆಹಮದ್.ಡಾ ಚೇತನ್. .ಮಂಜುನಾಥ ಗುರುಜಿ..ಕಾಂಗ್ರೇಸ್ ಮುಖಂಡ ಬಂಗ್ಲೇ ಪರೀವಿಜ್. .ಕಾಂಗ್ರೇಸ್ ಅಲ್ಪಸಂಖ್ಯಾತರ ಮುಖಂಡ ಕೆಳಗೋಟೆ ಮಹಮದ್ ಆಲಿ.ಸೇರಿದಂತೆ ಹಾಜುರಿದ್ದರು.


.

Leave a Reply

Your email address will not be published. Required fields are marked *

You missed

error: Content is protected !!