ಗುರುಸಿದ್ದಾಪುರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಗುರುಸ್ವಾಮಿ ಅವಿರೋಧ ಆಯ್ಕೆ.
ಜಗಳೂರು ಸುದ್ದಿ,
ಜಗಳೂರು ಮೇ.12:ತಾಲೂಕಿನ ಗುರುಸಿದ್ದಾಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಗುರುಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡರು.
ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 15 ಜನ ಸದಸ್ಯರಿದ್ದು,ಗುರುಸ್ವಾಮಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಲಾಗಿದ್ದು,ನಾಮಪತ್ರ ಊರ್ಜಿತವಾಗಿದ್ದು ಸರ್ವಾನುಮತದಿಂದ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿ.ಪಂ ಎಇಇ ಶಿವಮೂರ್ತಿ ಅವರು ಘೋಷಿಸಿದರು.
ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಅವರು ಶುಭಕೋರಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಪಿಪಾಲಯ್ಯ,ಉಪಾಧ್ಯಕ್ಷೆ ಪದ್ಮ,ಸದಸ್ಯರಾದ ರಮೇಶ್,ಪ್ರಮೀಳಮ್ಮ,ಗಂಗಮ್ಮ,ಹಳ್ಳಿ ಚೌಡಪ್ಪ,ಬಸಮ್ಮ,ಮಂಜಮ್ಮ,ಚಂದ್ರಮ್ಮ,ಆನಂದ,ಮಾರಕ್ಕ,ಸತೀಶ್ ನಾಯ್ಕ,ಬೊಮ್ಮಕ್ಕ,ಮಂಜಪ್ಪ,ಕರಿಬಸಮ್ಮ,ಮುಖಂಡರಾದ ಪ್ರಕಾಶ್,ಮಾಗಡಿ ನಾಗರಾಜ್,ಮಲ್ಲೇಶ್,ಉದ್ದಬೋರನಹಳ್ಳಿ ಕೊಟ್ರೇಶ್,ಪೂಜಾರ ಸಿದ್ದೇಶ್,ಮಾರಪ್ಪ,ವೆಂಕಟೇಶ್ ಪುರ ಮಲ್ಲಿಕಾರ್ಜುನ್,ಮಡ್ರಹಳ್ಳಿ ಗಿರೀಶ್,ಗೌಡಿಕಟ್ಟೆ ಹನುಮಂತಪ್ಪ,ಮಾಗಡಿ ಹನುಮಂತಪ್ಪ,ಮಡ್ರಹಳ್ಳಿ ರಮೇಶ್,ಬಿ.ಮಹೇಶ್ವರಪ್ಪ,ಚೌಡಪ್ಪ,ಪಿಡಿಓ ವಾಸುದೇವ,ಕಾರ್ಯದರ್ಶಿ ಕರಿಯಪ್ಪ,ಸೇರಿದಂತೆ ಮತ್ತಿತರರು ಇದ್ದರು.
