ಜಗಳೂರು.
ನಮ್ಮ ಕಾಂಗ್ರೇಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನವಾಗಿ 2 ವರ್ಷಗಳು ಪೂರೈಸಿ ಯಶಸ್ವಿಯಾದ ಹಿನ್ನಲೆಯಲ್ಲಿ ಸಮರ್ಪಣೆ ಸಮಾವೇಶ ಸಾಕ್ಷಿಯಾಗಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದರು
ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ಉರ್ದು ಶಾಲಾ ಆವರಣದಲ್ಲಿ ಭಾನುವಾರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದವರು,
ನಿರ್ಮಿತಿ ಕೇಂದ್ರದ ಗುತ್ತಿಗೆದಾರರು ಗುಣಮಟ್ಟದ ಕೊಠಡಿಯನ್ನು ನಿರ್ಮಾಣ ಮಾಡಿ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಕಡಕ್ ಆಗಿ ಸೂಚನೆ ನೀಡಿದರು.
ಜಗಳೂರು ತಾಲ್ಲೂಕಿಗೆ ಸುಮಾರು 67 ಲಕ್ಷ ರೂ.ಗಳ ಕಾಮಗಾರಿಗೆ ಅನುದಾನ ನೀಡಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ . ನಮ್ಮ ದೇಶದಲ್ಲಿ ಬ್ರಾತೃತ್ವದಿಂದ ಬಾಳುವ ದೇಶವಾಗಿದೆ, ಆಫ್ರೇಶನ್ ಸಿಂಧೂರದ ಮೂಲಕ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ದ್ವಂಸ ಗೊಳಿಸಿದ್ದಾರೆ. ದೇಶದ ಭದ್ರತೆಗಾಗಿ ನಾವು ಸರಕಾರದ ಜೊತೆ ಸದಾ ಇರುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು .
ಕಲ್ಲೇದೇವರಪುರ ಗ್ರಾಮದ ಬ್ರಿಡ್ಜ್ ಕೆಳಗೆ ಮಳೆ ನೀರು ಸಂಗ್ರಹವಾಗಿ ಜನರಿಗೆ ತುಂಬಾ ತೊಂದರೆ ಯಾಗುತ್ತಿವೆ ಆದ್ದರಿಂದ ಹೆದ್ದಾರಿಗೆ ಸಂಬಂಧಿಸಿದವರಿಗೆ ಸರಿಪಡಿಸಲು ತಿಳಿಸಿದ್ದೇವೆ ಎಂದರು. ಹೊಸಪೇಟೆಯಲ್ಲಿ ನಡೆಯುವ ನಮ್ಮ ಸರ್ಕಾರದ ಸಮರ್ಪಣೆ ಸಮಾವೇಶ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು, ಕ್ಷೇತ್ರದಲ್ಲಿ ಸಮಸ್ಯೆಗಳು ಕಂಡರೆ ನಮ್ಮ ಕಚೇರಿಗೆ ಬಂದು ಭೇಟಿ ನೀಡಿ ಅಗತ್ಯವಾಗಿ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಜನಸೇವೆ ಜನಾರ್ಧನ ಸೇವೆ ಎಂಬಂತೆ ಈ ಗ್ರಾಮದ ಹಿರಿಯ ರಾಜಕಾರಣಿ ಚನ್ನ ಒಡೆಯರ್ ರವರು ಕೊಡುಗೆಯಾಗಿ ನೀಡಿದ ಉರ್ದು ಶಾಲಾ ಅಭಿವೃದ್ದಿಗೆ ಶ್ರಮಿಸುವಂತೆ ಸಲಹೇ ನೀಡಿದರು. ನಮ್ಮ ದೇಶ ಅನೇಕ ಜಾತಿ ಧರ್ಮಗಳಿಂದ ಕೂಡಿದೆ, ನಾನಾ ಸಂಸ್ಕೃತಿಯಿಂದ ನಮ್ಮ ದೇಶ ಬೆಳೆಯುತ್ತಾ ಇದೆ. ದೇಶದ ಭದ್ರತೆಗಾಗಿ ಪಕ್ಷಬೇದ ಮರೆತು ದೇಶದ ಭದ್ರತೆಗಾಗಿ ಪ್ರಧಾನಿಯವರಿಗೆ ಬೆಂಬಲಿಸಿ ಸದಾ ದೇಶವನ್ನ ರಕ್ಷಿಸಿಕೊಳ್ಳಬೇಕಾಗಿದೆ ಎಂದರು. ಸಂಸದರು ಚುನಾವಣೆ ವೇಳೆ ವಾಗ್ದಾನ ಮಾಡಿದಂತೆ
ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿ ಅನುದಾನ ಕಲ್ಪಿಸಿದ್ದಾರೆ . ಪ್ರಜಾಪ್ರಭುತ್ವ ಸಂವಿಧಾನ ವ್ಯವಸ್ಥೆಯಲ್ಲಿ ನಮ್ಮ ಕಾಂಗ್ರೇಸ್ ಸರ್ಕಾರ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ಬಿಳಿಚೋಡು ರಸ್ತೆ ಬ್ರಿಡ್ಜ್ ತುಂಬಾ ಹಳೆಯದಾಗಿದ್ದು ಶಿಥಿಲಗೊಂಡಿದೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು . ರಾಜ್ಯ ಸರ್ಕಾರದಿಂದ ಬರುವ ಅನುದಾನದಳ್ಳಿ ಶಾಲಾ ಅಭಿವೃದ್ಧಿಗಾಗಿ ಇನ್ನು ಹೆಚ್ಚಿನ ಅನುದಾನವನ್ನು ಮೀಸಲಿಟ್ಟು ಅಭಿವೃದ್ದಿಗೆ ಒತ್ತು ನೀಡಲಾಗುವುದು ಕರೆ ನೀಡಿದರು .
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ಮಾಜಿ ತಾ.ಪಂ ಅಧ್ಯಕ್ಷ ಓಮಣ್ಣ, ಪಿಡಿಓ ನಂದಿಲಿಂಗೇಶ್ವರ, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಬತ್ತಹಳ್ಳಿ ಮಂಜುನಾಥ್, ಕಾಂಗ್ರೇಸ್ ಮುಖಂಡ ಬಸವಾಪುರ ರವಿಚಂದ್ರ . ಮಾಜಿ ತಾಪಂ ಅಧ್ಯಕ್ಷ ಸಣ್ಣ ಸೂರಜ್ಜ, ಗ್ರಾಪಂ ಉಪಾದ್ಯಕ್ಷೆ ನಿರ್ಮಲ, ಮುಖಂಡ ಜಲೀಲ್ ಸಾಬ್, ನೂರುಲ್ಲಾ ಸಾಬ್, ಗಿರೀಶ್ ಒಡೆಯರ್, ಆಶ್ರಫ್ ಉಲಾ ಗ್ರಾಪಂ ಸದಸ್ಯ ಅಜ್ಮೂಲಾ .ನಿರ್ಮಿತಿ ಕೇಂದ್ರದ ಇಂಜಿನೀಯರ್ ಮಮಜುನಾಥ. ಸೇರಿದಂತೆ ಇದ್ದರು.
ಬಿಳಿಚೋಡು ಗ್ರಾಮದ ಉರ್ದು ಶಾಲೆಯಲ್ಲಿ ಕೊಠಡಿ ನಿರ್ಮಾಣ ಕಾಮಗಾರಿಗೆ ಹಾಗೂ ಕಲ್ಲೆದೇವರಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕೊಠಡಿ ನಿರ್ಮಾಣಕ್ಕೆ ತಲಾ 15ಲಕ್ಷ ರೂ.ಗಳು, ಜಗಳೂರು ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ 12ಲಕ್ಷ, ಗೋಗುದ್ದು ಹಾಗೂ ಅಣಬೂರು ಗ್ರಾಮದಲ್ಲಿ ರಂಗಮಂದಿರಗಳ ನಿರ್ಮಾಣ ಹಾಗೂ ಬೆಣ್ಣೆಹಳ್ಳಿ ಗ್ರಾಮದಲ್ಲಿ ಹೈಮಾಸ್ಟ್ ದೀಪ ಅಳವಡಿಸುವ ಕಾಮಗಾರಿಗೆ ತಲಾ 5ಲಕ್ಷ ರೂ.ಗಳು, ಹಾಗೂ ಸೊಕ್ಕೆ ಗ್ರಾಮದಲ್ಲಿ ಸಮುದಾಯದ ಮುಂದುವರೆದ ಕಾಮಗಾರಿಗೆ 10ಲಕ್ಷ ರೂ.ಗಳ ಕಾಮಗಾರಿಗೆ ಅಮೃತ ಹಸ್ತಗಳಿಂದ ಚಾಲನೆ ನೀಡಿದರು.
ಡಾ.ಪ್ರಭಾ ಮಲ್ಲಿಕಾರ್ಜನ
