ಸುದ್ದಿ ಜಗಳೂರು
ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರುಕುಂಟೆ ಗ್ರಾಮದಲ್ಲಿ ಖಾತ್ರಿ ಕೂಲಿ ಕೆಲಸದ ವೇಳೆ ಕಾರ್ಮಿಕ ಸಾವು
ಎಂದಿನಂತೆ ದಿನ ಬೆಳಿಗ್ಗೆ ಎದ್ದು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದ ವ್ಯಕ್ತಿ ಕೆಂಚಪ್ಪ ಮನೆಗೆ ಮರಳಿ ಬರಲೇ ಇಲ್ಲ ಹೆಣವಾಗಿ ಮನೆಗೆ ಬಂದ ಘಟನೆ ಜರುಗಿದೆ.
ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಮರಿಕುಂಟೆ ಗ್ರಾಮದ ಕೆರೆ ಕೆಲಸಕ್ಕೆ ಹೋದ ಕೆಂಚಪ್ಪ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುತ್ತಾರೆ ಎಂದು ತಿಳಿದು ಬಂದಿದೆ.
ದಿನಾಂಕ 22_5_2025 ರಂದು ಗುರುವಾರ ಬೆಳಿಗ್ಗೆ ಕೆರೆ ಕೆಲಸಕ್ಕೆ ತೆರಳಿದ್ದಾರೆ .ವ್ಯಕ್ತಿ ಕೆಲಸದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಸ್ಥಳದಲ್ಲಿ ಕೂಲಿ ಕಾರ್ಮಿಕ ಕೆಂಚಪ್ಪ ಎಂಬುವವರು ಮೃತಪಟ್ಟಿದ್ದಾರೆ .
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಸಿದ ಗ್ರಾಪಂ ಅದ್ಯಕ್ಷ ವೀರೇಶ್ .ಪಿಡಿಓ ಶಶಿದರ್ ಪಾಟೀಲ್ . ಭೇಟಿ ನೀಡಿ ಕಾರ್ಮಿಕರಿಗೆ ಸಿಗುವಂತ ಪರಿಹಾರವನ್ನ ಕೋಡಿಸಿಕೊಡಲಾಗುವುದು ಎಂದು ಗ್ರಾಪಂ ಅದ್ಯಕ್ಷ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕುಟುಂಬದವರು ಗೋಳು ಮುಗಿಲು ಮುಟ್ಟುವಂತಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಪಿ ಎಸ್ ಸುಧಾ ಮುಂತಾದ ಸಿಬ್ಬಂಧಿಗಳು ಹಾಜುರಿದ್ದರು.
